ಧಾರವಾಡ ಸೂಪರ್​ ಮಾರ್ಕೆಟ್​ನಲ್ಲಿ ಎಸಿಪಿ ಮೇಲೆಯೇ ಪೆಟ್ರೋಲ್ ಎರಚಿದ ವ್ಯಕ್ತಿ..!

ಧಾರವಾಡ: ಹುಬ್ಬಳ್ಳಿ-ಧಾರವಾಡ ಸೂಪರ್ ಮಾರುಕಟ್ಟೆಯಲ್ಲಿ ಅಕ್ರಮ ಅಂಗಡಿ ತೆರವುಗೊಳಿಸುವ ವೇಳೆ ನ್ಯಾಯವಾದಿಯೊಬ್ಬ ತನ್ನ ಮೇಲೆ ಸೀಮೆಎಣ್ಣೆ ಸುರಿದುಕೊಂಡಿದ್ದಲ್ಲದೇ ಎಸಿಪಿ ಮೇಲೆಯೂ ಎರಚುವ ಮೂಲಕ ಹೈಡ್ರಾಮಾದ ಘಟನೆಯೊಂದು ನಡೆದಿದೆ.
ಗುರುವಾರ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳು ಧಾರವಾಡ ನಗರದ ಸೂಪರ್ ಮಾರುಕಟ್ಟೆಗೆ ಅಕ್ರಮ ಅಂಗಡಿ ತೆರವು ಕಾರ್ಯಾಚರಣೆಗೆ ಬಂದಿದ್ದರು. ಈ ವೇಳೆ ಜೆಸಿಬಿ ತಂದು ಅಂಗಡಿ ತೆರವು ಮಾಡುತಿದ್ದಂತೆಯೇ ಮಧ್ಯಪ್ರವೇಶ ಮಾಡಿದ ನ್ಯಾಯವಾದಿ ಎಂ.ಎಂ. ಚೌಧರಿ, ತನ್ನ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಅಂಗಡಿ ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸಿದ್ದಾರೆ.ಈ ವೇಳೆ ತಡೆಯಲು ಬಂದ ಪೊಲೀಸರ ಮೇಲೆಯೇ ಪೆಟ್ರೋಲ್​ ಎರಚಿದ ಚೌಧರಿ ಅವಾಂತರ ಸೃಷ್ಟಿಸಿದರು.
ಚೌಧರಿ ಅವರು ಸೂಪರ್ ಮಾರ್ಕೆಟ್ ವ್ಯಾಪಾರಿಗಳ ಪರ ನ್ಯಾಯವಾದಿಯಾಗಿದ್ದಾರೆ. ಮಹಾನಗರ ಪಾಲಿಕೆಯಿಂದ ನಿನ್ನೆ (ಗುರುವಾರ) ಅನಧಿಕೃತ ಅಂಗಡಿ ತೆರವು ಕಾರ್ಯ ನಡೆಯುತ್ತಿತ್ತು. ತೆರವು ವಿರೋಧಿಸಿ ಚೌಧರಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಡೆಯಲು ಹೋದ ಎಸಿಪಿ ಅನುಷಾ ಅವರ ಮೇಲೆ ಎರಚಿ ಹುಚ್ಚಾಟ ಮೆರೆದಿದ್ದು, ಇದಕ್ಕೆ ಸಂಬಂಧಿಸಿದ ಪೆಟ್ರೋಲ್​ ಹೈಡ್ರಾಮಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಮುಖ ಸುದ್ದಿ :-   ಮಹಿಳೆ ಅಪಹರಣ ಪ್ರಕರಣ ; ಎಚ್‌.ಡಿ. ರೇವಣ್ಣ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿ ವಜಾ : ಬಂಧನದ ಭೀತಿ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement