ಕೊರೊನಾ ಇನ್ನೂ ಮುಗಿದಿಲ್ಲ, ಅದು ಮರುಕಳಿಸಬಹುದು: ಎಚ್ಚರಿಸಿದ ಪ್ರಧಾನಿ ಮೋದಿ

ನವದೆಹಲಿ: ಕೋವಿಡ್ ಇನ್ನೂ ಹೋಗಿಲ್ಲ. ಅದು ನಿರಂತರವಾಗಿ ತನ್ನ ರೂಪಗಳನ್ನು ಬದಲಾಯಿಸುತ್ತಿದೆ ಮತ್ತು ಮರುಕಳಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಜನತೆಗೆ ಎಚ್ಚರಿಸಿದ್ದಾರೆ.
ಗುಜರಾತಿನ ಜುನಾಘಡದಲ್ಲಿರುವ ಉಮಿಯಾ ಮಾತಾ ದೇವಾಲಯದವ 14ನೇ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ವರ್ಚುವಲ್ ಭಾಷಣ‌ ಮಾಡಿದ ಅವರು, ದೇಶವ್ಯಾಪಿ ಲಸಿಕೆ ಯಶಸ್ವಿಯಾಗಿದೆ ಎಂದು ಒತ್ತಿ ಹೇಳಿದರು.

ಕೊರೊನಾ ಮುಗಿದಿದೆ ಎಂದು ಭಾವಿಸಬೇಡಿ. ಕೊರೊನಾ ಒಂದು ದೊಡ್ಡ ಬಿಕ್ಕಟ್ಟು.‌ ಈಗ ಅದು ವಿರಾಮ ತೆಗೆದುಕೊಂಡಿರಬಹುದು. ಅದು ಯಾವಾಗ ಮತ್ತೆ ಮರುಕಳಿಸುತ್ತದೆ ಎಂಬುದು ತಿಳಿದಿಲ್ಲ. ಹೀಗಾಗಿ ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕು ಎಂದರು.

ಕೋವಿಡ್ ಬಹು ರೂಪಿಯ ವೈರಸ್‌ ಆಗಿದೆ. ಇದರ ತಡೆಗೆ ಈವರೆಗೆ ದೇಶದಲ್ಲಿ 185 ಕೋಟಿ ಡೋಸ್ ಗಳನ್ನು ನೀಡಲಾಯಿತು. ಇದು ಜಗತ್ತನ್ನೇ ಚಕಿತಗೊಳಿಸಿದೆ. ಇದು ನಿಮ್ಮ ಬೆಂಬಲದಿಂದ ಸಾಧ್ಯವಾಗಿದೆ‌ ಎಂದರು.
ಸ್ವಾತಂತ್ರ್ಯದ 75 ವರ್ಷಗಳ ಅಮೃತಮಹೋತ್ಸವವನ್ನು ಗುರುತಿಸಲು ಗುಜರಾತಿನ ಪ್ರತಿ ಜಿಲ್ಲೆಯ 75 ಕೆರೆಗಳನ್ನು ನಿರ್ಮಿಸಲು ಮೋದಿ ಕರೆ ಕೊಟ್ಟರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement