ಆರ್‌ಎಸ್‌ಎಸ್‌ ಸರಕಾರ್ಯವಾಹರಾಗಿ ದತ್ತಾತ್ರೇಯ ಹೊಸಬಾಳೆ ಪುನರಾಯ್ಕೆ

ನಾಗ್ಪುರ : ರಾಷ್ಟ್ರೀ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಸರಕಾರ‍್ಯವಾಹರಾಗಿ ದತ್ತಾತ್ತ್ರೇಯ ಹೊಸಬಾಳೆ ಅವರು ಪುನರಾಯ್ಕೆಯಾಗಿದ್ದಾರೆ. ನಾಗ್ಪುರದ ಸ್ಮೃತಿ ಭವನದ ಸಂಕೀರ್ಣದಲ್ಲಿ ನಡೆದ ಅಖಿಲ ಭಾರತೀಯ ಪ್ರತಿನಿಧಿ ಸಭಾದಲ್ಲಿ ಹೊಸಬಾಳೆ ಅವರನ್ನು ಸರಕಾರ‍್ಯವಾಹರಾಗಿ ಪುನರಾಯ್ಕೆ ಮಾಡಲಾಗಿದೆ.
ಆರ್‌ಎಸ್‌ಎಸ್‌ನ ಅಂಗಸಂಸ್ಥೆಗಳ ಸುಮಾರು 1500ಕ್ಕೂ ಹೆಚ್ಚು ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. 2021ರಿಂದ ಸರಕಾರ‍್ಯವಾಹರಾಗಿ ಜವಾಬ್ದಾರಿ ನಿರ್ವಹಿಸುತ್ತಿರುವ ಹೊಸಬಾಳೆ ಅವರನ್ನು 2024ರಿಂದ 2027ರವರೆಗಿನ ಅವಧಿಗೆ ಮತ್ತೆ ಆಯ್ಕೆ ಮಾಡಲಾಗಿದೆ ಎಂದು ಆರ್‌ಎಸ್‌ಎಸ್‌ ಹೇಳಿದೆ.
ಮೂಲತಃ ಶಿವಮೊಗ್ಗ ಜಿಲ್ಲೆಯ ಹೊಸಬಾಳೆ ಗ್ರಾಮದವರಾದ ದತ್ತಾತ್ರೇಯ ಹೊಸಬಾಳೆ ಅವರು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 1968ರಲ್ಲಿ, ತಮ್ಮ 13ನೇ ವಯಸ್ಸಿಗೆ ಸಂಘದ ಸ್ವಯಂ ಸೇವಕರಾದರು. 1972ರಲ್ಲಿ ಎಬಿವಿಪಿಯಲ್ಲಿ ಸಕ್ರಿಯರಾಗಿದ್ದರು. 1978 ರಿಂದ ಪ್ರಚಾರಕರಾಗಿ ಸಂಘಟನಾ ಕಾರ್ಯದಲ್ಲಿ ತೊಡಗಿದ್ದಾರೆ.
2004ರಲ್ಲಿ ಆರ್‌ಎಸ್‌ಎಸ್‌ನ ಸಹ ಬೌದ್ಧಿಕ್‌ ಪ್ರಮುಖ್ ಆಗಿಯೂ ಜವಾಬ್ದಾರಿ ನಿಭಾಯಿಸಿದ್ದ ಹೊಸಬಾಳೆ ಅವರು, ‘ಅಸೀಮಾ’ ಕನ್ನಡ ಮಾಸಪತ್ರಿಕೆಯ ಸಂಸ್ಥಾಪಕ ಸಂಪಾದಕರಾಗಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement