ಮಂತ್ರಿ ಡೆವಲಪರ್ಸ್‌ನ ಎಂಡಿ ಸುಶೀಲ್ ಮಂತ್ರಿ ಬಂಧನ

ಬೆಂಗಳೂರು: ದೇಶದ ಪ್ರತಿಷ್ಟಿತ ಡೆವೆಲಪರ್ಸ್‌ ಸಂಸ್ಥೆ ಮಂತ್ರಿ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಸುಶೀಲ್‌ ಮಂತ್ರಿ ಮತ್ತವರ ಮಗ ಪ್ರತೀಕ್‌ ಮಂತ್ರಿಯನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಸುಶೀಲ್ ಮಂತ್ರಿ ವಿರುದ್ಧ ಮನಿ ಲ್ಯಾಂಡರಿಂಗ್ ಆರೋಪ ಹಿನ್ನೆಲೆ ಜೂ.25ರಂದು ಸುಶೀಲ್ ಬಂಧಿಸಿ ಇಡಿ ವಿಚಾರಣೆ ನಡೆಸಿತ್ತು. ಬಳಿಕ ಜಾಮೀನಿನ ಮೇಲೆ ಸುಶೀಲ್ ಹೊರಬಂದಿದ್ದರು. ಈಗ ಮತ್ತೆ ಸಿಐಡಿ ತನಿಖಾ ತಂಡ ನಿನ್ನೆ ರಾತ್ರಿ ಸುಶೀಲ್ ಅವರನ್ನು ನಿನ್ನೆ ಸಿಐಡಿ ಅಧಿಕಾರಿಗಳಿಂದ ಸುಶೀಲ್ ಮಂತ್ರಿ ಮತ್ತು ಪ್ರತೀಕ್‌ ಮಂತ್ರಿಯನ್ನು ಬಂಧಿಸಲಾಗಿದೆ.ಬಂಧಿಸಿದೆ.
ಸಿಐಡಿ ಎಡಿಜಿಪಿ ಉಮೇಶ್ ಕುಮಾರ್ ನೇತೃತ್ವದ ತಂಡದಿಂದ ವಿಚಾರಣೆ ನಡೆಸುತ್ತಿದೆ. ವಂಚನೆ ಪ್ರಕರಣದಲ್ಲಿ ಸುಶೀಲ್ ಮಂತ್ರಿ ಅವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.

ಬಳಿಕ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ ಸಿಐಡಿ ವಿಚಾರಣೆ ನಡೆಸಿ ಸೆಪ್ಟೆಂಬರ್ 12 ವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಈ ಹಿಂದೆ ಮನಿಲ್ಯಾಂಡ್ರಿಂಗ್ ಕೇಸ್ ನಲ್ಲಿ ಇಡಿ ಅಧಿಕಾರಿಗಳು ಸುಶೀಲ್ ಮಂತ್ರಿಯನ್ನು ಬಂಧಿಸಿದ್ದರು. ಜಾಮೀನು ಪಡೆದು ಹೊರ ಬಂದಿದ ಸುಶೀಲ್ ಮಂತ್ರಿಯನ್ನು ಈಗ ಸಿಐಡಿ ಅಧಿಕಾರಿಗಳು ವಂಚನೆ ಪ್ರಕರಣದಲ್ಲಿ ಬಂಧಿಸಿದ್ದಾರೆ.
ಸುಶೀಲ್ ವಿರುದ್ಧ ತನ್ನ ಗ್ರಾಹಕರಿಗೆ ವಂಚನೆ ಮಾಡಿದ ಗಂಭೀರ ಆರೋಪ ಕೇಳಿ ಬಂದಿದೆ. ಜೊತೆಗೆ ಗ್ರಾಹಕರಿಂದ ಖರೀದಿ ಹಣ ದುರ್ಬಳಕೆ ಆರೋಪವೂ ಇದೆ. ಈ ಬಗ್ಗೆ ಅನೇಕ ಗ್ರಾಹಕರು ದೂರು ನೀಡಿದ್ದರು. ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಪ್ರಮುಖ ಸುದ್ದಿ :-   ಬಸವನಗುಡಿಯ ರೇವಣ್ಣ ನಿವಾಸದಲ್ಲಿ ಸ್ಥಳ ಮಹಜರು ನಡೆಸಿದ ಎಸ್‌ಐಟಿ

3.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement