ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಏರ್ ಇಂಡಿಯಾ ಪ್ರಯಾಣಿಕನಿಗೆ 30 ದಿನಗಳ ನಿಷೇಧ ಹೇರಿದ ಏರ್‌ಲೈನ್ಸ್

ನವದೆಹಲಿ: ನವೆಂಬರ್‌ನಲ್ಲಿ ಏರ್ ಇಂಡಿಯಾ ವಿಮಾನದ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಕುಡಿದ ಮತ್ತಿನಲ್ಲಿ ಮಹಿಳೆಯೊಬ್ಬರ ಮೇಲೆ ಮೂತ್ರ ವಿಸರ್ಜಿಸಿ ವ್ಯಕ್ತಿಯನ್ನು 30 ದಿನಗಳ ಕಾಲ ವಿಮಾನಯಾನ ಸಂಸ್ಥೆಯಿಂದ ನಿಷೇಧಿಸಲಾಗಿದೆ ಎಂದು ಕಂಪನಿ ಬುಧವಾರ ತಿಳಿಸಿದೆ. ಘಟನೆ ನಡೆದು ವಾರದ ನಂತರ, ಏರ್ ಇಂಡಿಯಾ ಕೂಡ ಪ್ರಕರಣವನ್ನು ದಾಖಲಿಸಿದೆ ಮತ್ತು ಅಶಿಸ್ತಿನ ಪ್ರಯಾಣಿಕನನ್ನು ನೊ-ಫ್ಲೈ ಲಿಸ್ಟ್‌ಗೆ ಸೇರಿಸಲು ಶಿಫಾರಸು ಮಾಡಿದೆ.
ಮಹಿಳೆ ಏರ್ ಇಂಡಿಯಾದ ಗ್ರೂಪ್ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರಿಗೆ ಪತ್ರ ಬರೆದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಘಟನೆಯ ಬಗ್ಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು ವಿಮಾನಯಾನ ಸಂಸ್ಥೆಯಿಂದ ವರದಿ ಕೇಳಿದೆ. ನಿರ್ಲಕ್ಷ್ಯ ತೋರಿದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ನಿಯಂತ್ರಕರು ತಿಳಿಸಿದ್ದಾರೆ.
ನವೆಂಬರ್ 26 ರಂದು, ಪಾನಮತ್ತ ಪ್ರಯಾಣಿಕ ನ್ಯೂಯಾರ್ಕ್‌ನಿಂದ ದೆಹಲಿಗೆ ಏರ್ ಇಂಡಿಯಾ ವಿಮಾನದ ಬಿಸಿನೆಸ್ ಕ್ಲಾಸ್‌ನಲ್ಲಿ 70 ರ ಹರೆಯದ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಊಟದ ನಂತರ ದೀಪಗಳನ್ನು ಡಿಮ್ ಮಾಡಲಾದ ಸಂದರ್ಭದಲ್ಲಿ ಈ ಕೃತ್ಯ ಎಸಗಿದ್ದಾನೆ. ಮೂತ್ರ ವಿಸರ್ಜನೆಯ ನಂತರ, ವ್ಯಕ್ತಿ ಉಳಿದ ಪ್ರಯಾಣಿಕರು ಸೀಟಿಗೆ ವಾಪಸ್‌ ಹೋಗುವಂತೆ ಸೂಚಿಸಿದ ನಂತರವಷ್ಟೇ ಅಲ್ಲಿಂದ ಹೋಗಿದ್ದಾನೆ ಎಂದು ವರದಿ ತಿಳಿಸಿದೆ.

ಪ್ರಮುಖ ಸುದ್ದಿ :-   ನೂಪುರ್ ಶರ್ಮಾ ಸೇರಿದಂತೆ ಹಲವು ಹಿಂದೂ ನಾಯಕರ ಹತ್ಯೆಗೆ ಸಂಚು: ಮೌಲ್ವಿ ಬಂಧನ

ಮಹಿಳೆಯು ಸಿಬ್ಬಂದಿಗೆ ದೂರು ನೀಡಿದ್ದು, ತನ್ನ ಬಟ್ಟೆ, ಬೂಟುಗಳು ಮತ್ತು ಬ್ಯಾಗ್ ಮೂತ್ರದಲ್ಲಿ ತೊಯ್ದಿದೆ ಎಂದು ತಿಳಿಸಿದ್ದಾಳೆ. ಸಿಬ್ಬಂದಿ ಆಕೆಗೆ ಪೈಜಾಮಾ ಮತ್ತು ಚಪ್ಪಲಿಗಳನ್ನು ನೀಡಿದರು ಮತ್ತು ಬೇರೆ ಯಾವುದೇ ಸೀಟು ಲಭ್ಯವಿಲ್ಲ ಎಂದು ಹೇಳಿಕೊಂಡು ಮಹಿಳೆಗೆ ಅವರ ಸೀಟಿಗೆ ಹಿಂತಿರುಗಲು ಸೂಚಿಸದರು ಎಂದು ವರದಿ ಹೇಳಿದೆ.
ವಿಮಾನ ದೆಹಲಿಯಲ್ಲಿ ಇಳಿದ ನಂತರ, ಪ್ರಯಾಣಿಕನು ತನ್ನ ಅತಿರೇಕದ ವರ್ತನೆಗಾಗಿ ಯಾವುದೇ ಕ್ರಮವನ್ನು ಎದುರಿಸದೆ ಹೊರಹೋಗಿದ್ದಾನೆ. ಘಟನೆಯ ಏರ್‌ಲೈನ್‌ನ ನಿರ್ವಹಣೆಯಿಂದ ನಿರಾಶೆಗೊಂಡ ಮಹಿಳೆ ಮರುದಿನ ಏರ್ ಇಂಡಿಯಾದ ಗ್ರೂಪ್ ಅಧ್ಯಕ್ಷ ಚಂದ್ರಶೇಖರನ್‌ಗೆ ಪತ್ರ ಬರೆದ ನಂತರ ಏರ್ ಇಂಡಿಯಾ ಇದೀಗ ವ್ಯಕ್ತಿಯ ವಿರುದ್ಧ ಪೊಲೀಸ್ ದೂರು ದಾಖಲಿಸಿದೆ ಮತ್ತು “ಮೊದಲ ಹಂತವಾಗಿ” 30 ದಿನಗಳ ಕಾಲ ಆ ಪ್ರಯಾಣಿಕನಿಗೆ ನಿಷೇಧ ಹೇರಿದೆ.
ಏರ್ ಇಂಡಿಯಾದ ಸಿಬ್ಬಂದಿಯ ಭಾಗದಲ್ಲಿನ ಲೋಪಗಳನ್ನು ತನಿಖೆ ಮಾಡಲು ನಾವು ಆಂತರಿಕ ಸಮಿತಿಯನ್ನು ಸಹ ರಚಿಸಿದ್ದೇವೆ ಮತ್ತು ಪರಿಸ್ಥಿತಿಯ ತ್ವರಿತ ಪರಿಹಾರವನ್ನು ವಿಳಂಬಗೊಳಿಸುವ ನ್ಯೂನತೆಗಳನ್ನು ಪರಿಹರಿಸುತ್ತೇವೆ” ಎಂದು ಹೇಳಿಕೆ ತಿಳಿಸಿದೆ.
ಇದಲ್ಲದೆ, ತನಿಖೆ ಮತ್ತು ವರದಿ ಮಾಡುವ ಪ್ರಕ್ರಿಯೆಯಲ್ಲಿ ಪ್ರಯಾಣಿಕ ಮಹಿಳೆ ಮತ್ತು ಅವರ ಕುಟುಂಬದೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿರುವುದಾಗಿ ವಿಮಾನಯಾನ ಸಂಸ್ಥೆ ಹೇಳಿದೆ.

ಪ್ರಮುಖ ಸುದ್ದಿ :-   ಜಾರ್ಖಂಡ್ ಸಚಿವರ ಆಪ್ತ ಕಾರ್ಯದರ್ಶಿ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆ, ಹಣದ ರಾಶಿ ನೋಡಿ ಇ.ಡಿ.ಯೇ ದಂಗು

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement