ಕರ್ನಾಟಕದಲ್ಲಿ ಶನಿವಾರ ದೈನಂದಿನ ಸೋಂಕು, ಸಾವಿನ ಸಂಖ್ಯೆ ಎರಡೂ ಕಡಿಮೆ..

ಬೆಂಗಳೂರು: ರಾಜ್ಯದಲ್ಲಿ ಶನಿವಾರ ದೈನಂದಿನ ಸೋಂಕು ಶುಕ್ರವಾರಕ್ಕಿಂತ ಕಡಿಮೆಯಾಗಿದ್ದರೂ ಏಳು ಸಾವಿರದ ಸನಿಹದಲ್ಲಿಯೇ ಇದೆ.
ಶನಿವಾರ ರಾಜ್ಯದಲ್ಲಿ 6955 ಜನರಿಗೆಸೊಂಕು ದೃಢ ಪಟ್ಟಿದೆ.
ಕೊರೊನಾದಿಂದ ಕಳೆದ 24 ಗಂಟೆಗಳಲ್ಲಿ 36 ಸೋಂಕಿತ ರು ಮೃತಪಟ್ಟಿದ್ದು, ಇದರದಲ್ಲಿ ಬೆಂಗಳೂರು ನಗರ ದಲ್ಲಿ 19 ಮಂದಿ ಮೃತಪಟ್ಟಿದ್ದಾರೆ. ಮೈಸೂರು ನಗರದಲ್ಲಿ ಐವರು, ಬೀದರ್, ಧಾರವಾಡ, ತುಮಕೂರು, ಹಾಗೂ ಕಲ್ಬುರ್ಗಿಯಲ್ಲಿ ತಲಾ ಇಬ್ಬರು, ಬಳ್ಳಾರಿ, ಚಾಮರಾಜನಗರ, ಹಾಸನ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.
ಶನಿವಾರ 3350 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.ರಾಜ್ಯದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 1055040ಕ್ಕೆ ಏರಿಕೆಯಾಗಿದ್ದು, ಒಟ್ಟು 980519 ಕೋವಿಡ್ ಸೊಂಕಿತರು ಚೇತರಿಸಿಕೊಂಡಿದ್ದಾರೆ. 61653 ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ 405 ಸೋಂಕಿತರು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರಿನಲ್ಲಿ ಕಳೆದ 24 ಗಂಟೆಯಲ್ಲಿ 4384 ಮಂದಿಗೆ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿನ ಸಂಖ್ಯೆ 474398ಕ್ಕೆ ಏರಿಕೆಯಾಗಿದೆ.2027 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಬೆಂಗಳೂರುನಲ್ಲಿ ಒಟ್ಟ44863 ಸಕ್ರಿಯ ಪ್ರಕರಣಗಳಿವೆ.
ಜಿಲ್ಲಾ ವಾರು ಸೊಂಕಿತರ ವಿವರ:ಬಾಗಲಕೋಟೆ 44, ಬಳ್ಳಾರಿ 62, ಬೆಳಗಾವಿ 75, ಬೆಂಗಳೂರು ಗ್ರಾಮಾಂತರ 152, ಬೀದರ್ 215, ಚಾಮರಾಜನಗರ 35, ಚಿಕ್ಕಬಳ್ಳಾಪುರ 74, ಚಿಕ್ಕಮಗಳೂರು 36, ಚಿತ್ರದುರ್ಗ 59, ದಕ್ಷಿಣ ಕನ್ನಡ 137, ದಾವಣಗೆರೆ 49, ಧಾರವಾಡ 88, ಗದಗ 17, ಹಾಸನ 100, ಹಾವೇರಿ 16, ಕಲಬುರಗಿ 276, ಕೊಡಗು 20, ಕೋಲಾರ 121, ಕೊಪ್ಪಳ 28, ಮಂಡ್ಯ 119, ಮೈಸೂರು 266, ರಾಯಚೂರು 30, ರಾಮನಗರ 72, ಶಿವಮೊಗ್ಗ 47, ತುಮಕೂರು 206, ಉಡುಪಿ 68, ಉತ್ತರ ಕನ್ನಡ 64, ವಿಜಯಪುರ 71, ಯಾದಗಿರಿ 24.

ಪ್ರಮುಖ ಸುದ್ದಿ :-   ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿ ಫಯಾಜ್‌ ಆರು ದಿನ ಸಿಐಡಿ ಕಸ್ಟಡಿಗೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement