ನವದೆಹಲಿ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಫಿಟ್‌ನೆಸ್ ಹಾಗೂ ಅವರ ಸಾಮರ್ಥ್ಯದ ಕುರಿತು ಪಕ್ಷದ ವಕ್ತಾರೆ ಶಮಾ ಮೊಹಮ್ಮದ್ ಮಾಡಿದ ಟೀಕೆಗಳಿಗೆ ತೀವ್ರ ಟೀಕೆ ವ್ಯಕ್ತವಾದ ನಂತರ ಕಾಂಗ್ರೆಸ್ ಅವರ ಮಾಡಿದ ಸಾಮಾಜಿಕ ಮಾಧ್ಯಮ ಪೋಸ್ಟ್ ಅನ್ನು ಡಿಲೀಟ್ ಮಾಡುವಂತೆ ಪಕ್ಷದ ಹೈಕಮಾಂಡ್ ಸೂಚಿಸಿದೆ.
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಭಾನುವಾರ ಪಂದ್ಯದ ಮಧ್ಯದಲ್ಲಿ ರೋಹಿತ್ ಶರ್ಮಾ ಅವರನ್ನು ಟೀಕಿಸಿದ ಶಮಾ ಮೊಹಮ್ಮದ್ ನಂತರ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ. “ರೋಹಿತ್ ಶರ್ಮಾ ದಪ್ಪವಾಗಿದ್ದಾರೆ! ತೂಕವನ್ನು ಕಳೆದುಕೊಳ್ಳಬೇಕಾಗಿದೆ! ಮತ್ತು ಖಂಡಿತವಾಗಿಯೂ ಭಾರತ ಕಂಡ ಅತ್ಯಂತ ಸಾದಾರಣ ಕ್ಯಾಪ್ಟನ್” ಎಂದು ಪೋಸ್ಟ್‌ನಲ್ಲಿ ಅವರು ಬರೆದಿದ್ದರು. ಇದಕ್ಕೆ ಅವರು ಕ್ರಿಕೆಟ್ ಅಭಿಮಾನಿಗಳು ಮತ್ತು ಬಿಜೆಪಿಯಿಂದ ತೀವ್ರ ಟೀಕೆಗೆ ಒಳಗಾದರು.
ಕಾಂಗ್ರೆಸ್ ಪಕ್ಷವು ಶಮಾ ಮೊಹಮ್ಮದ್ ಅವರ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದೆ. ಮತ್ತು ಪೋಸ್ಟ್ ಅನ್ನು ಅಳಿಸುವಂತೆ ಸೂಚಿಸಿದೆ. ಸ್ವಲ್ಪ ಸಮಯದ ನಂತರ, ಅವರು ವಿವಾದಕ್ಕೆ ಕಾರಣವಾದ ಪೋಸ್ಟ್‌ಗಳು ಮತ್ತು ತನ್ನನ್ನು ತಾನು ಸಮರ್ಥಿಸಿಕೊಂಡ ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದಾರೆ.
ಶಮಾ ಮೊಹಮ್ಮದ್ ಅವರ ಹೇಳಿಕೆಯು ಪಕ್ಷದ ಅಭಿಪ್ರಾಯವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ಪವನ್ ಖೇರಾ ಸೋಮವಾರ ಹೇಳಿದ್ದಾರೆ. “ಎಕ್ಸ್‌ಗೆ ಸಂಬಂಧಿಸಿದ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಅಳಿಸಲು ಅವರಿಗೆ ಸೂಚಿಸಲಾಗಿದೆ ಮತ್ತು ಭವಿಷ್ಯದಲ್ಲಿ ಹೆಚ್ಚು ಜಾಗರೂಕರಾಗಿರಲು ಸಲಹೆ ನೀಡಲಾಗಿದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕ್ರೀಡಾ ಐಕಾನ್‌ಗಳ ಕೊಡುಗೆಗಳನ್ನು ಅತ್ಯುನ್ನತವಾಗಿ ನೋಡುತ್ತದೆ ಮತ್ತು ಅವರ ಪರಂಪರೆಯನ್ನು ಹಾಳುಮಾಡುವ ಯಾವುದೇ ಹೇಳಿಕೆಗಳನ್ನು ಅನುಮೋದಿಸುವುದಿಲ್ಲ” ಎಂದು ಪವನ್ ಖೇರಾ ಹೇಳಿದರು.
“ಗಂಗೂಲಿ, ತೆಂಡೂಲ್ಕರ್, ದ್ರಾವಿಡ್, ಧೋನಿ, ಕೊಹ್ಲಿ, ಕಪಿಲ್ ದೇವ್, ಶಾಸ್ತ್ರಿ ಮತ್ತು ಉಳಿದವರಂತಹ ಅವರ ಹಿಂದಿನ ನಾಯಕರಿಗೆ ಹೋಲಿಸಿದರೆ ಅವರಿಗೆ ವಿಶ್ವ ದರ್ಜೆ ಎಲ್ಲಿದೆ ! ಅವರು ಸಾಧಾರಣ ನಾಯಕ ಮತ್ತು ಭಾರತದ ಕ್ಯಾಪ್ಟನ್ ಆಗುವ ಅದೃಷ್ಟವನ್ನು ಪಡೆದ ಸಾಧಾರಣ ಆಟಗಾರ” ಎಂದು ಶಮಾ ಮೊಹಮ್ಮದ್ ಪೋಸ್ಟ್ ನಲ್ಲಿ ಬರೆದಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ