ಬಿಜೆಪಿಗೆ ಬೆಂಬಲಿಸುವುದಾಗಿ ಹೇಳಿದ ಕಾಂಗ್ರೆಸ್‌ನ ಲಖನ್‌‌ ಜಾರಕಿಹೊಳಿ..!

ಬೆಳಗಾವಿ: ಸಚಿವತ್ರಯರಾದ ಜಗದೀಶ ಶೆಟ್ಟರ, ಉಮೇಶ ಕತ್ತಿ ಹಾಗೂ ಬೈರತಿ ಬಸವರಾಜ ರಮೇಶ ಜಾರಕಿಹೊಳಿ ಸೋದರ ಲಖನ್‌ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಲೋಕಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಬೆಂಬಲಿಸುವಂತೆ ಕೋರಿದರು.
ಗೋಕಾಕದ ಅವರ ನಿವಾಸಕ್ಕೆ ತೆರಳಿದ ಸಚಿವರು, ಲಖನ್‌ ಜಾರಕಿಹೊಳಿ ಅವರೊಂದಿಗೆ ಕೆಲ ಹೊತ್ತು ಗುಪ್ತವಾಗಿ ಮಾತನಾಡಿದರು. ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಅವರಿಗೆ ಬೆಂಬಲ ನೀಡಬೇಕೆಂದು ಮನವಿ ಮಾಡಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಲಖನ್‌ ಜಾರಕಿಹೊಳಿ, ರಮೇಶ ಹಾಗೂ ಬಾಲಚಂದ್ರ ಯಾವ ಪಕ್ಷದಲ್ಲಿದ್ದಾರೋ ನಾನೂ ಕೂಡ ಅವರ ಪರವಾಗಿ ಕೆಲಸ ಮಾಡಬೇಕಾಗುತ್ತದೆ. ದೊಡ್ಡ ನಾಯಕರು ನಮ್ಮ ಮನೆಗೆ ಬಂದದ್ದಾರೆ. ನಾನು ಚಿಕ್ಕವನು, ಅವರ ಮಾತು ಕೇಳಬೇಕಾಗುತ್ತದೆ. ಕಷ್ಟ ಇದ್ದಾಗ ಸಹಾಯ ಮಾಡಬೇಕಾಗುತ್ತದೆ. ಬಿಜೆಪಿ ಪರವಾಗಿಯೇ ಮಾಡುತ್ತೇವೆ. ಪಕ್ಷಕ್ಕೆ ಒಳ್ಳೆಯದಾಗಲಿ ಎಂದರು.
ಸಿಡಿ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ ಹೆಸರು ಕೇಳಿಬರುತ್ತಿದ್ದಂತೆಯೇ, ನೈತಿಕ ಹೊಣೆ ಹೊತ್ತು ಡಿ.ಕೆ.ಶಿವಕುಮಾರ ರಾಜಿನಾಮೆ ನೀಡಬೇಕೆಂದು ಸ್ವಪಕ್ಷದ ಮುಖಂಡರ ವಿರುದ್ಧವೇ ಅಬ್ಬರಿಸಿದ್ದರು. ತಾವು ಕಾಂಗ್ರೆಸ್‌ನಲ್ಲಿದ್ದರೂ ಲಖನ್‌, ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಪರ ಸ್ಪರ್ಧಿಸಿದ ಸತೀಶ ಜಾರಕಿಹೊಳಿ ಪರವಾಗಿ ಪ್ರಚಾರದಲ್ಲಿ ಲಖನ್‌ ಪಾಲ್ಗೊಂಡಿಲ್ಲ. ಅಲ್ಲದೇ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಲಖನ್‌ನನ್ನು ಗೋಕಾಕದಲ್ಲಿ ಕಣಕ್ಕಿಳಿಸಿ ತಾನು ಕನಕಪುರದಲ್ಲಿ ಡಿ.ಕೆ.ಶಿವಕುಮಾರ ವಿರುದ್ಧ ಸ್ಪರ್ಧೆ ನಡೆಸುವುದಾಗಿ ರಮೇಶ ಜಾರಕಿಹೊಳಿ ಹೇಳಿಕೆ ನೀಡಿದ್ದರು. ಇವೆಲ್ಲ ಬೆಳವಣಿಗೆಗಳನ್ನು ನೋಡಿದರೆ ಇದು ಮತ್ತೊಂದು ಆಪರೇಶನ್‌ ಕಮಲದ ಮುನ್ಸೂಚನೆ ಎಂದೇ ಅಂದಾಜಿಸಲಾಗುತ್ತಿದೆ.

ಪ್ರಮುಖ ಸುದ್ದಿ :-   ಭಟ್ಕಳ : ಮೀನುಗಾರಿಕಾ ಬೋಟ್ ಮುಳುಗಡೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement