ಧಾರವಾಡ ಜೆಎಸ್ಎಸ್ ಮಂಜುನಾಥೇಶ್ವರ ಸಿಬಿಎಸ್ ಸಿ ಶಾಲೆ ನೂರಕ್ಕೆ ೧೦೦ ಫಲಿತಾಂಶ

ಧಾರವಾಡ: ಧಾರವಾಡದ ವಿದ್ಯಾಗಿರಿಯ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸಿಬಿಎಸ್ ಸಿ ಶಾಲೆಯ ೨೦೨೦-೨೧ ನೇ ಸಾಲಿನ ೧೦ನೇ ತರಗತಿ ಫಲಿತಾಂಶವು ೧೦೦ ಕ್ಕೆ ೧೦೦ ರಷ್ಟಾಗಿದೆ.
, ವಿದ್ಯಾರ್ಥಿಗಳು ಉತ್ತಮ ಸಾಧನೆಗೈದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಶಾಲೆಯು ಸತತ ೧೫ ವರ್ಷಗಳಿಂದ ೧೦೦% ಫಲಿತಾಂಶಗಳನ್ನು ಸಾಧಿಸುತ್ತ ಬಂದಿದೆ. ಒಟ್ಟು ಪರೀಕ್ಷೆಗೆ ೨೧೫ ವಿದ್ಯಾರ್ಥಿಗಳು ಹಾಜರಾಗಿದ್ದಾರೆ.
ಅವರಲ್ಲಿ ೯೦% ಅಂಕ ಪಡೆದವರು – ೮೭, ೮೫% ಅಂಕ ಪಡೆದವರು – ೩೪, ೬೦% ಅಂಕ ಪಡೆದವರು – ೯೪ ಒಟ್ಟು ಪಾಸಾದ ವಿದ್ಯಾರ್ಥಿಗಳು – ೨೧೫ ಆಗಿದ್ದು ನೂರಕ್ಕೆ ನೂರು ಫಲಿತಾಂಶ ಬಂದಿದೆ.

ಈ ಉತ್ತಮ ಶೈಕ್ಷಣಿಕ ಸಾಧನೆಗೆ ಜನತಾ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಪೂಜ್ಯ ಪೇಜಾವರ ಶ್ರೀಗಳಾದ ಶ್ರೀ ವಿಶ್ವಪ್ರಸನ್ನ ಸ್ವಾಮಿಗಳು, ಕಾರ್ಯಾಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಕಾರ್ಯದರ್ಶಿಗಳಾದ ಡಾ. ನ. ವಜ್ರಕುಮಾರ, ವಿತ್ತಾಧಿಕಾರಿಗಳಾದ ಡಾ. ಅಜಿತ ಪ್ರಸಾದರವರು ಶಾಲೆಯ ಪ್ರಾಚಾರ್ಯರು, ವಿದ್ಯಾರ್ಥಿಗಳು ಹಾಗೂ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.

4.1 / 5. 9

ಶೇರ್ ಮಾಡಿ :

2 Responses

ನಿಮ್ಮ ಕಾಮೆಂಟ್ ಬರೆಯಿರಿ

advertisement