ಮೈಸೂರು: ಐದು ದಿನಗಳ ಹಿಂದೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಐವರು ಆರೋಪಿಗಳನ್ನ ಪೊಲೀಸರು ತಮ್ಮ ಕಸ್ಟಡಿಗೆ ಪಡೆದಿದ್ದಾರೆ.
ನಿನ್ನೆ ರಾತ್ರಿ ಮೈಸೂರಿನ ಮೂರನೇ ಜೆಎಂಎಫ್ಸಿ ನ್ಯಾಯಾಲಯಯವು ಈ ಆರೋಪಿಗಳನ್ನ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿದೆ. ರಾಷ್ಟ್ರಾದ್ಯಂತ ಸಂಚಲನ ಮೂಡಿಸಿರುವ ಈ ಪ್ರಕರಣದಲ್ಲಿ ಪೊಲೀಸರು ಬಹಳ ಎಚ್ಚರಿಕೆಯಿಂದ ತನಿಖೆ ನಡೆಸುತ್ತಿದ್ದಾರೆ. ಇನ್ನೂ ವಿಚಾರಣೆಯ ಅಗತ್ಯ ಇದೆ ಎಂದು ಪೊಲೀಸರು ಮಾಡಿಕೊಂಡ ಮನವಿಯನ್ನು ಕೋರ್ಟ್ ಪುರಸ್ಕರಿಸಿ 10 ದಿನಗಳವರೆಗೆ ಕಸ್ಟಡಿಗೆ ಅವಕಾಶ ಕೊಟ್ಟಿದೆ. ಆರೋಪಿಗಳನ್ನು ಮೈಸೂರಿನ ಅಜ್ಞಾತ ಸ್ಥಳವೊಂದರಲ್ಲಿ ವಿಚಾರಣೆ ನಡೆಸಲಾಗುತ್ತಿದೆ.
ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅವರು ನಿನ್ನೆ (ಶನಿವಾರ) ಪತ್ರಿಕಾಗೋಷ್ಠಿಯಲ್ಲಿ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದು, ಪ್ರಕರಣದಲ್ಲಿ ಆರು ಮಂದಿ ಆರೋಪಿಗಳಿದ್ದು, ಒಬ್ಬಾತ ತಪ್ಪಿಸಿಕೊಂಡಿದ್ಧಾನೆ. ಸಿಕ್ಕಿಬಿದ್ದಿರುವ ಐವರಲ್ಲಿ ಒಬ್ಬಾತ 17 ವರ್ಷದ ಪ್ರಾಯದವನಿರಬಹುದು ಎಂದು ಹೇಳಲಾಗುತ್ತಿದ್ದು, ಆತನ ಜನ್ಮ ದಾಖಲೆಗಳನ್ನ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಎಲ್ಲಾ ಆರು ಆರೋಪಿಗಳು ತಮಿಳುನಾಡಿನ ತಿರುಪ್ಪೂರಿನವರಾಗಿದ್ದಾರೆ. ತರಕಾರಿ ಇತ್ಯಾದಿಯನ್ನು ಇಲ್ಲಿಯ ಮಾರುಕಟ್ಟೆಗೆ ಹಾಕಿ ವಾಪಸ್ ಹೋಗುವಾಗ ಇವರು ಪಾರ್ಟಿ ಮಾಡುತ್ತಾರೆ. ಎಂಬ ವಿಚಾರವನ್ನು ಡಿಜಿ ಐಜಿಪಿ ತಿಳಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ