ಕರ್ನಾಟಕದಲ್ಲಿ ಕೊರೊನಾ ದೈನಂದಿನ ಸೋಂಕು ಕುಸಿತ.. ಆದರೆ ಸಾವಿನ ಪ್ರಮಾಣದಲ್ಲಿ ಇಳಿಕೆಯಿಲ್ಲ

ಬೆಂಗಳೂರು: ಕರ್ನಾಟಕದಲ್ಲಿ ಇಂದು, ಬುಧವಾರ ಹೊಸದಾಗಿ 20,505 ಕೊರೊನಾ ಸೋಂಕು ದಾಖಲಾಗಿದ್ದು, 81 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ಇದೇವೇಳೆ 40,903 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಇಂದು, ರಾಜ್ಯದಲ್ಲಿ ಒಟ್ಟು ಈವರೆಗೆ ರಾಜ್ಯದಲ್ಲಿ ಒಟ್ಟು 38,44,338 ಮಂದಿಗೆ ಕೊರೊನಾ ಬಂದಿದೆ. ಒಟ್ಟು ಈವರೆಗೆ 36,27,925 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಬೆಳಗಾವಿಯಲ್ಲಿ 2 ತಿಂಗಳ ಮಗು ಮೃತಪಟ್ಟಿದೆ. ರಾಜ್ಯದಲ್ಲಿ ಸಕಾರಾತ್ಮಕ ದರ 12.55%ಕ್ಕೆ ಇಳಿದಿದೆ. ಕೋವಿಡ್-19 ಮರಣ ಪ್ರಮಾಣ ಶೇ.0.39% ರಷ್ಟಿದೆ.
ಬೆಂಗಳೂರಿನಲ್ಲಿ ಒಟ್ಟು 8,850 ಹೊಸ ಕೇಸ್ ಪತ್ತೆಯಾಗಿದ್ದು, 13 ಮಂದಿ ಮೃತಪಟ್ಟಿದ್ದಾರೆ. ಬೆಂಗಳೂರನ್ನು ಹೊರತು ಪಡಿಸಿ ಮೈಸೂರಲ್ಲಿ ಅತೀ ಹೆಚ್ಚು, 1,209 ಸೋಂಕು ದಾಖಲಾಗಿದೆ. ಬೆಂಗಳೂರಿನ ಬಳಿಕ ದಕ್ಷಿಣ ಕನ್ನಡದಲ್ಲಿ 10 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ.
ಜಿಲ್ಲಾವಾರು ಸೋಂಕಿನ ಮಾಹಿತಿ..
ಬಾಗಲಕೋಟೆ 303, ಬಳ್ಳಾರಿ 390, ಬೆಳಗಾವಿ 1,060, ಬೆಂಗಳೂರು ಗ್ರಾಮಾಂತರ 195, ಬೆಂಗಳೂರು ನಗರ 8,850, ಬೀದರ್ 190, ಚಾಮರಾಜನಗರ 364, ಚಿಕ್ಕಬಳ್ಳಾಪುರ 311, ಚಿಕ್ಕಮಗಳೂರು 89, ಚಿತ್ರದುರ್ಗ 208, ದಕ್ಷಿಣ ಕನ್ನಡ 412, ದಾವಣಗೆರೆ 160, ಧಾರವಾಡ 633, ಗದಗ 131, ಹಾಸನ 590, ಹಾವೇರಿ 411, ಕಲಬುರಗಿ 337, ಕೊಡಗು 543, ಕೋಲಾರ 300, ಕೊಪ್ಪಳ 220, ಮಂಡ್ಯ 579, ಮೈಸೂರು 1,209, ರಾಯಚೂರು 165, ರಾಮನಗರ 79, ಶಿವಮೊಗ್ಗ 715, ತುಮಕೂರು 762, ಉಡುಪಿ 542, ಉತ್ತರ ಕನ್ನಡ 595, ವಿಜಯಪುರ 92 ಮತ್ತು ಯಾದಗಿರಿಯಲ್ಲಿ 70 ಸೋಂಕು ದಾಖಲಾಗಿದೆ.

ಪ್ರಮುಖ ಸುದ್ದಿ :-   ಜುಲೈ 23ರಂದು ದಕ್ಷಿಣ ಕನ್ನಡ ಜಿಲ್ಲೆಯ ಶಾಲೆ, ಪಿಯು ಕಾಲೇಜುಗಳಿಗೆ ರಜೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement