ದಟ್ಟ ಮೋಡ-ಮಂಜು: ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನ ಮಂಗಳೂರಿಗೆ..!

ಹುಬ್ಬಳ್ಳಿ: ದಟ್ಟವಾದ ಮೋಡ ಹಾಗೂ ಮಂಜಿನ ವಾತಾವರಣದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿದ್ದ ವಿಮಾನ, ಮಂಗಳೂರು ಕಡೆಗೆ ಹಾರಾಟ ನಡೆಸಿದ ವಿದ್ಯಮಾನ ಶನಿವಾರ ಬೆಳಿಗ್ಗೆ ನಡೆದಿದೆ.
ಶನಿವಾರ ಬೆಳಗ್ಗೆ ಸರಿಯಾಗಿ 7.20ಕ್ಕೆ ಆಗಮಿಸಿದ ಇಂಡಿಗೋ ವಿಮಾನ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಆದರೆ ಶನಿವಾರ ಬೆಳಿಗ್ಗೆ ಹುಬ್ಬಳ್ಳಿ ನಗರ ಸುತ್ತಮುತ್ತ ದಟ್ಟ ಮಂಜು ಹಾಗೂ ಮೋಡ ಆವರಿಸಿತ್ತು. ಈ ವಾತಾವರಣ ವಿಮಾನಕ್ಕೆ ಲ್ಯಾಂಡ್ ಅಗಲು ವಾತಾವರಣ ಸಹಕಾರಿ ಆಗಲಿಲ್ಲ. ಸುಮಾರು ಇಪ್ಪತ್ತು ನಿಮಿಷ ಸುತ್ತಾಡಿ ಇಳಿಯಲು ಸಾಧ್ಯವಾಗದ ಕಾರಣ ಮಾರ್ಗ ಬದಲಿಸಿ ಮಂಗಳೂರಿಗೆ ತೆರಳಿತು. ವಿಮಾನದಲ್ಲಿ ಸುಮಾರು 65ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಯಾವುದೇ ತೊಂದರೆಯಾಗಿಲ್ಲ. ವಿಮಾನ ಪಥ ಬದಲಿಸಿದ್ದರಿಂದ ವಿಮಾನದಿಂದ ಹುಬ್ಬಳ್ಳಿಯಲ್ಲಿ ಇಳಿಯಬೇಕಿದ್ದ ಪ್ರಯಾಣಿಕರಿಗಷ್ಟೇ ಅಲ್ಲ, ಹುಬ್ಬಳ್ಳಿಯಿಂದ ಬೆಂಗಲೂರಿಗೆ ಹೋಗುವ ಪ್ರಯಾಣಿಕರಿಗೂ ತೊಂದರೆಯಾಯಿತು.

ಶೇರ್ ಮಾಡಿ :

2 Responses

  1. Vijendra

    ಹುಬ್ಬಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯಾವಾಗ ಆಯಿತು

  2. ಕನ್ನಡಿ

    ಅಧಿಕೃತವಾಗಿ ನೋಡಿದರೆ ಇನ್ನೂ ಹುಬ್ಬಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಘೋಷಣೆಯಾಗಿಲ್ಲ. ನಿಮ್ಮ ಮಾತು ಒಪ್ಪತಕ್ಕದ್ದೇ ಆಗಿದೆ. ಉಳಿದ ಮಂಗಳೂರು ಮೊದಲಾದ ವಿಮಾನ ನಿಲ್ದಾಣಗಳಿಗೆ ಹೋಲಿಸಿದರೆ ಹುಬ್ಬಳ್ಳಿ ವಿಮಾನ ನಿಲ್ದಾಣವು ಹೆಚ್ಚು ಮೂಲಸೌಕರ್ಯಗಳನ್ನು ಹೊಂದಿದ್ದು ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಲು ಹೆಚ್ಚು ಪ್ರಶಸ್ತವಾಗಿದೆ. ಆದಷ್ಟು ಬೇಗ ಹುಬ್ಬಳ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾದರೆ ಬೆಂಗಳೂರು, ಮುಂಬೈಗಳಿಂದ ವಿದೇಶಕ್ಕೆ ಪ್ರಯಾಣ ಬೆಳೆಸುವ ಉತ್ತರ ಕರ್ನಾಟಕದ ಜನರು ಹುಬ್ಬಳ್ಳಿಯಿಂದಲೇ ಪ್ರಯಾಣ ಬೆಳಸಲು ಅನುಕೂಲವಾಗಬಹುದು. ಇದು ನಮ್ಮ ಹಾರೈಕೆ.

ನಿಮ್ಮ ಕಾಮೆಂಟ್ ಬರೆಯಿರಿ

advertisement