CISF ನೇಮಕಾತಿ 2022: ದ್ವಿತೀಯ ಪಿಯುಸಿ ಉತ್ತೀರ್ಣರಾದವರಿಗೂ ಉದ್ಯೋಗಾವಕಾಶ, ವೇತನ 92 ಸಾವಿರ ರೂ. ವರೆಗೆ

ಕೇಂದ್ರ ಕೈಗಾರಿಕಾ ಭದ್ರತಾ ಪಡೆ(CISF)ಯಲ್ಲಿ ಹೆಡ್ ಕಾನ್ಸ್‌ಟೇಬಲ್ (ಮಿನಿಸ್ಟ್ರೀಯಲ್) ಮತ್ತು ಸಹಾಯಕ ಸಬ್ ಇನ್‌ಸ್ಪೆಕ್ಟರ್ (ಸ್ಟೆನೋಗ್ರಾಫರ್) ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಸಿಐಎಸ್‌ಎಫ್‌ (CISF) ಅಧಿಕೃತ ವೆಬ್‌ಸೈಟ್ http://cisf.gov.in ಗೆ ಭೇಟಿ ನೀಡಿ ಅರ್ಜಿ ಆನ್‌ಲೈನ್‌ ಮೂಲಕ ಸಲ್ಲಿಸಬಹುದು.
ಒಟ್ಟು ಹುದ್ದೆಗಳ ಸಂಖ್ಯೆ- 540
ಅರ್ಹತೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ 12ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಆಗಿರಬೇಕು.

ವಯೋಮಿತಿ: 18 ರಿಂದ 25 ವರ್ಷದವರೆಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಎಸ್‌ಸಿ ಹಾಗೂ ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ, ಹಾಗೂ ಇತರ ಹಿಂದುಳಿದ ವರ್ಗಗಳಿಗೆ ಮೂರು ವರ್ಷ ವಯೊಮಿತಿ ಸಡಿಲ. ಇತರ ಹಲವು ವಿಭಾಗಕ್ಕೂ ವಯೋಮಿತಿ ಸಡಿಲ ಇದೆ.
ಅರ್ಜಿ ಶುಲ್ಕ: 100 ರೂ,ಗಳನ್ನು ಪಾವತಿಸಬೇಕಾಗುತ್ತದೆ.

ಮಾಸಿಕ ವೇತನ: ಹೆಡ್​ ಕಾನ್ಸ್​ಟೇಬಲ್- 25,500 ರಿಂದ 81,100 ರೂ.
ಮಾಸಿಕ ವೇತನ: ಸಹಾಯಕ ಸಬ್ ಇನ್‌ಸ್ಪೆಕ್ಟರ್- 29,200 ರಿಂದ 92,300 ರೂ.
ಆಯ್ಕೆ ಪ್ರಕ್ರಿಯೆ:
ದೈಹಿಕ ಗುಣಮಟ್ಟದ ಪರೀಕ್ಷೆ (PST), OMR / ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
ಸ್ಕಿಲ್ ಟೆಸ್ಟ್, ವೈದ್ಯಕೀಯ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 25 ಅಕ್ಟೋಬರ್ 2022
ಈ ನೇಮಕಾತಿ ಕುರಿತಾದ ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ ನೋಡಿCISF-HC-ASI-Recruitment-2022-Notification-PDF

ಪ್ರಮುಖ ಸುದ್ದಿ :-   ಜಮ್ಮು-ಕಾಶ್ಮೀರ : ಮೂವರು ಲಷ್ಕರ್ ಭಯೋತ್ಪಾದಕರನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು

2.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement