ಬೆಳಗಾವಿ : ನಾವು ಬೆಳಗಾವಿ ಜಿಲ್ಲಾ ವಿಭಜನೆಗೆ ಬದ್ಧರಿದ್ದೇವೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬೆಳಗಾವಿ ವಿಭಜನೆಗೆ ನಾವು ಬದ್ಧರಿದ್ದೇವೆ. ಬೆಳಗಾವಿ ಜಿಲ್ಲೆ ದೊಡ್ಡದಿರುವುದರಿಂದ ವಿಭಜನೆ ಆಗಬೇಕು. ಜಿಲ್ಲಾ ವಿಭಜನೆ ಬಗ್ಗೆ ನಾವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡುತ್ತೇವೆ ಎಂದು ಹೇಳಿದರು.
ಜಿಲ್ಲೆಯನ್ನು ಮೂರು ತುಂಡಾಗಿ ವಿಭಜಿಸಿ ಮೂರು ಹೊಸ ಜಿಲ್ಲೆ ರಚಿಸಬೇಕು. ಬೆಳಗಾವಿ, ಗೋಕಾಕ, ಚಿಕ್ಕೋಡಿ ಮೂರು ಜಿಲ್ಲೆ ಆಗಬೇಕು. ಜಿಲ್ಲೆ ವಿಭಜಿಸಬೇಕು ಎಂಬ ಬೇಡಿಕೆ ಇರಿಸುವುದಕ್ಕೆ ಎಲ್ಲರಿಗೂ ಹಕ್ಕಿದೆ ಎಂದು ಅವರು ಹೇಳಿದರು.
ಗೃಹಲಕ್ಷ್ಮೀ ಯೋಜನೆಯಡಿ ಯಜಮಾನಿಗೆ 2 ಸಾವಿರ ರೂ. ನೀಡುವ ಕುರಿತು ಪ್ರತಿಕ್ರಿಯಿಸಿದ ಸತೀಶ ಜಾರಕಿಹೊಳಿ, 2 ಸಾವಿರ ರೂ ಯಾರು ತೆಗೆದುಕೊಳ್ಳಬೇಕೆಂದು ಷರತ್ತು ಹಾಕಬೇಕಾಗುತ್ತದೆ. ಯಾಕೆಂದರೆ ಅತ್ತೆ ತನ್ನ ಸೊಸೆಗೆ ಕೊಡಿ ಎಂದು ಹೇಳಿದರೂ ಅದು ಷರತ್ತು ಆಗುತ್ತದೆ. ಗೃಹಲಕ್ಷ್ಮೀ ಯೋಜನೆಯ ಹಣವನ್ನು ಮೊದಲು ಅತ್ತೆಗೆ ಕೊಡುವುದು. ಅತ್ತೆ ಪ್ರೀತಿಯಿಂದ ಸೊಸೆಗೆ ಕೊಡುವುದಾದರೆ ಅದನ್ನು ಬರೆಯಬೇಕಾಗುತ್ತದೆ ಎಂದು ಹೇಳಿದರು.


ನಿಮ್ಮ ಕಾಮೆಂಟ್ ಬರೆಯಿರಿ