ಕಿಚ್ಚ ಸುದೀಪ ಸಿನಿಮಾಗಳ ಪ್ರದರ್ಶನ ನಿಷೇಧಿಸುವಂತೆ ಕೋರಿ ಚುನಾವಣಾ ಆಯೋಗಕ್ಕೆ ದೂರು

ಬೆಂಗಳೂರು: ಚುನಾವಣೆ ಮುಗಿಯುವವರೆಗೆ ಕಿಚ್ಚ ಸುದೀಪ್ ಅವರ ಸಿನಿಮಾಗಳ ಪ್ರದರ್ಶನವನ್ನು ನಿಷೇಧಿಸುವಂತೆ ಶಿವಮೊಗ್ಗ ಮೂಲದ ವಕೀಲರೊಬ್ಬರು ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.
ಕನ್ನಡದ ಸೂಪರ್‌ಸ್ಟಾರ್ ಕಿಚ್ಚ ಸುದೀಪ ಅವರು ಬಿಜೆಪಿಗೆ ತಮ್ಮ ಬೆಂಬಲ ನೀಡಿದ ಕೆಲವೇ ಗಂಟೆಗಳ ನಂತರ ವಕೀಲ ಕೆ.ಪಿ. ಶ್ರೀಪಾಲ್ ಅವರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.
ಮಾದರಿ ನೀತಿ ಸಂಹಿತೆಯನ್ನು ಉಲ್ಲೇಖಿಸಿರುವ ಅವರು, ಸುದೀಪ್ ಅವರ ಚಲನಚಿತ್ರಗಳು ಮತ್ತು ಕಾರ್ಯಕ್ರಮಗಳು ಮತದಾರರ ಮನಸ್ಸಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಐತಿಹಾಸಿಕ ಗೆಲುವು ಸಾಧಿಸುವ ಅನ್ವೇಷಣೆಯಲ್ಲಿ, ಆಡಳಿತಾರೂಢ ಬಿಜೆಪಿಯು ಪ್ರಚಾರದ ಹಾದಿಯಲ್ಲಿ ರಾಜಕೀಯ ಹೆವಿವೇಯ್ಟ್‌ಗಳನ್ನು ನಿಯೋಜಿಸುವುದು ಮಾತ್ರವಲ್ಲದೆ ‘ಸಿನೆಮೆ ತಾರೆಯರನ್ನೂ ಕೂಡ ಪ್ರಚಾರಕ್ಕಾಗಿ ಕರೆತರುತ್ತಿದೆ.
ಮೇ 10 ರಂದು ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷವು ತನ್ನ ಸ್ಟಾರ್ ಪ್ರಚಾರಕರಾಗಿ ಹಲವಾರು ಕನ್ನಡ ನಟರನ್ನು ಸಂಪರ್ಕಿಸಿದೆ. ಇವರಲ್ಲಿ ಕಿಚ್ಚ ಸುದೀಪ್ ಅವರು ಕೂಡ ಒಬ್ಬರು.
ಕಲ್ಯಾಣ-ಕರ್ನಾಟಕ ಪ್ರದೇಶದ ಮೇಲೆ ವಿಶೇಷ ಗಮನ ಹರಿಸಿರುವ ಜನಪ್ರಿಯ ನಟ ರಾಜ್ಯಾದ್ಯಂತ ಬಿಜೆಪಿ ಪರ ಪ್ರಚಾರ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೇ 10 ರಂದು ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಪ್ರಕಟವಾಗಲಿದೆ.

ಪ್ರಮುಖ ಸುದ್ದಿ :-   ಜಾತ್ರಾ ಮಹೋತ್ಸವದ ವೇಳೆ ರಥದ ಚಕ್ರದಡಿ ಸಿಲುಕಿ ಇಬ್ಬರು ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement