ಗಡಿ ವಿವಾದದ ಮಧ್ಯೆ ಕರ್ನಾಟಕದ ಗಡಿ ಪ್ರದೇಶದ 865 ಗ್ರಾಮಗಳಿಗೆ ಆರೋಗ್ಯ ಯೋಜನೆ ವಿಸ್ತರಿಸಿದ ಮಹಾರಾಷ್ಟ್ರ

ಬೆಳಗಾವಿ : ಗಡಿ ವಿವಾದದ ಮಧ್ಯೆ ಮಹಾರಾಷ್ಟ್ರ ಸರ್ಕಾರವು ತನ್ನ ಆರೋಗ್ಯ ಯೋಜನೆಯನ್ನು ಕರ್ನಾಟಕದ 865 ಹಳ್ಳಿಗಳಿಗೆ ವಿಸ್ತರಿಸಿ ಆದೇಶ ಹೊರಡಿಸಿದೆ.
ಈ ಕುರಿತು ಸೋಮವಾರ ಮಹಾರಾಷ್ಟ್ರ ಸರ್ಕಾರ ಆದೇಶ ಹೊರಡಿಸಿದೆ. ಈಗಾಗಲೇ ಅಂತ್ಯೋದಯ ಆಹಾರ ಯೋಜನೆಯ ಫಲಾನುಭವಿಗಳು, ಆದ್ಯತಾ ಗುಂಪಿನ ಕುಟುಂಬಗಳು (ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013 ರ ಅಡಿಯಲ್ಲಿ) ಮತ್ತು ಅನ್ನಪೂರ್ಣ ಪಡಿತರ ಚೀಟಿ ಹೊಂದಿರುವವರು ಮಹಾತ್ಮ ಜ್ಯೋತಿರಾವ್ ಫುಲೆ ಜನ ಆರೋಗ್ಯ ಯೋಜನೆಯಡಿ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು ಎಂದು ಅದು ಹೇಳಿದೆ.
ಬೆಳಗಾವಿ, ಕಾರವಾರ, ಕಲ್ಬುರ್ಗಿ ಮತ್ತು ಬೀದರ್‌ನ 12 ತಹಸಿಲ್‌ಗಳ 865 ಗ್ರಾಮಗಳನ್ನು ಮಹಾತ್ಮ ಜ್ಯೋತಿರಾವ್ ಫುಲೆ ಜನ ಆರೋಗ್ಯ ಯೋಜನೆಯಡಿ ಸೇರಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಮಹಾರಾಷ್ಟ್ರ ರಾಜ್ಯ ಗುರುತಿಸಿರುವ 996 ಬಗೆಯ ಚಿಕಿತ್ಸೆಗಳಿಗೆ ಅಲ್ಲಿನ ಕುಟುಂಬಗಳು ವರ್ಷಕ್ಕೆ ₹ 1.50 ಲಕ್ಷದವರೆಗೆ ವೈದ್ಯಕೀಯ ವಿಮೆಯನ್ನು ಪಡೆಯುತ್ತವೆ. ಇದು 34 ವಿವಿಧ ರೀತಿಯ ಸಲಹಾ ಸಂಸ್ಥೆಗಳನ್ನು ಸಹ ಒಳಗೊಂಡಿದೆ ಎಂದು ಸರ್ಕಾರದ ನಿರ್ಣಯ ಹೇಳಿದೆ. ಮಹಾರಾಷ್ಟ್ರ ಸರ್ಕಾರವು ರಾಜ್ಯದ ಹಲವಾರು ಆಸ್ಪತ್ರೆಗಳನ್ನು ಗುರುತಿಸಿದೆ, ಅಲ್ಲಿ ಜನರು ಈ ಯೋಜನೆಯನ್ನು ಪಡೆಯಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಬೆಳಗಾವಿ ಗಡಿ ವಿಚಾರದಲ್ಲಿ ಉಭಯ ರಾಜ್ಯಗಳ ನಡುವೆ ಸಂಘರ್ಷ ಇದ್ದು, ಇದೀಗ ಮಹಾರಾಷ್ಟ್ರ ಸರ್ಕಾರ ಕೈಗೊಂಡಿರುವ ಈ ನಿರ್ಧಾರ ವಿವಾದಕ್ಕೆ ಎಡೆ ಮಾಡಿಕೊಡುವ ಸಾಧಯತೆ ಹೆಚ್ಚಿದೆ.

ಪ್ರಮುಖ ಸುದ್ದಿ :-   ಶಿರಸಿ : ಜುಲೈ 13ಕ್ಕೆ ಕರ್ಮಫಲ ಕಾದಂಬರಿ ಲೋಕಾರ್ಪಣೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement