ಗದಗ: ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಮಂಗಗಳ ಹಾವಳಿಗೆ ರೋಗಿಗಳು, ಸಹಾಯಕರು ಸುಸ್ತು..ವೀಕ್ಷಿಸಿ

ಗದಗ : ಒಂದು ವಿಲಕ್ಷಣ ಮತ್ತು ಆಘಾತಕಾರಿ ಘಟನೆಯಲ್ಲಿ, ಗದಗದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳು ಮತ್ತು ಅವರ ಸಹಾಯಕರು ಸೆಪ್ಟೆಂಬರ್ 4ರ ಶನಿವಾರ ಕೋತಿಗಳ ಗುಂಪೊಂದು ವಾರ್ಡ್‌ನಲ್ಲಿ ಮಂಗಗಳು ಹಾಸಿಗೆಯಿಂದ ಹಾಸಿಗೆಗೆ ಜಿಗಿಯುವ ವಿಡಿಯೋಗಳು ವೈರಲ್‌ ಆಗಿದೆ.
ರೋಗಿಗಳು ಮತ್ತು ಅವರ ಸಹಾಯಕರು ಮಂಗನ ಭಯಪಡುತ್ತಿರುವುದನ್ನು ಕಾಣಬಹುದು. ಜಿಲ್ಲಾ ಅಧಿಕಾರಿಗಳ ಪ್ರಕಾರ, ಗದಗದ ಕೆಸಿ ರಾಣಿ ರಸ್ತೆಯಲ್ಲಿರುವ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.

https://twitter.com/Csoumya21/status/1434858739656368138

ಅದು‌ ಹೇಳಿಕೊಳ್ಳುವುದಕ್ಕೆ ಹೆರಿಗೆ ಆಸ್ಪತ್ರೆ. ಆದರೆ ಆಸ್ಪತ್ರೆಯಲ್ಲಿ ಮಂಗಗಳ ಹಾವಳಿ ಮಿತಿ ಮೀರಿದೆ. ಮಂಗಗಳು ಹೆರಿಗೆ ಆಸ್ಪತ್ರೆಗೆ ಪ್ರವೇಶಿಸಿರುವುದು ಇದೇ ಮೊದಲಲ್ಲ. ಕಳೆದ ವರ್ಷ, ಕೋತಿಯೊಂದು ಅದೇ ಆಸ್ಪತ್ರೆಯ ಆವರಣವನ್ನು ಪ್ರವೇಶಿಸಿ ಆವರಣದಲ್ಲಿ ಆಟವಾಡುತ್ತಿದ್ದ ಮಗುವನ್ನು ತೀವ್ರವಾಗಿ ಗಾಯಗೊಳಿಸಿತ್ತು. ನಂತರ ಮಗುವಿಗೆ ತಗುಲಿದ ತಲೆ ಮತ್ತು ಬೆನ್ನಿನ ಗಾಯಗಳಿಗೆ ಚಿಕಿತ್ಸೆ ನೀಡಲು ಮಗು ವನ್ನು ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಹೇಳಲಾಗಿದೆ.
ಅಲ್ಲಿನ ಸ್ಥಳಿಯ ನಿವಾಸಿಗಳ ಪ್ರಕಾರ, ಈ ಸಮಸ್ಯೆಯ ಬಗ್ಗೆ ಅರಣ್ಯ ಇಲಾಖೆಯ ಬಳಿ ಹಲವಾರು ದೂರುಗಳನ್ನು ನೀಡಿದರೂ ಯಾವುದೇ ರೀತಿಯ ಪ್ರಯೋಜನವಾಗಲಿಲ್ಲ ಎಂದು ಹೇಳಿದ್ದಾರೆ. ಈ ಮಂಗಗಳ ಉಪಟಳ ಬಗೆಹರಿಸಲು ಅರಣ್ಯ ಇಲಾಖೆಯ ಸಿಬ್ಬಂದಿಗಳು ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಅಲ್ಲಿನ ಸ್ಥಳಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಮುಖ ಸುದ್ದಿ :-   ಕೆಎಸ್​ಆರ್​ಟಿಸಿ ಬಸ್​ನಲ್ಲಿ ಅಜ್ಜಿ ಮೊಮ್ಮಗಳಿಗೆ ಉಚಿತ ಟಿಕೆಟ್ : ಆದ್ರೆ ನಾಲ್ಕು ಪಕ್ಷಿಗಳಿಗೆ 444 ರೂ. ಟಿಕೆಟ್...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement