ಬೆಂಗಳೂರು : ಬಿಬಿಎಂಪಿ ಮಾಜಿ ಸದಸ್ಯೆ ರೇಖಾ ಕದಿರೇಶ್ ರನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಟನ್ ಪೇಟೆ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ರೇಖಾ ಹತ್ಯೆ ಪ್ರಕರಣ ಸಂಬಂಧ ಕೊಲೆಗೆ ಸಹಕಾರ ನೀಡಿದ ಹಾಗೂ ಸಂಚು ರೂಪಿಸಿದ್ದ ಆರೋಪದ ಮೇರೆಗೆ ನಾಲ್ವರನ್ನು ಕಾಟನ್ ಪೇಟೆ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ರೇಖಾ ಕದೀರೇಶ್ ಅವರ ಕೊಲೆಗೆ ಕೌಟುಂಬಿಕ ಹಿನ್ನೆಲೆಯ ಕಾರಣದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎನ್ನಲಾಗಿದೆ. ಕದೀರೇಶ್ ಮರಣದ ನಂತರ ಕದೀರೇಶ್ ಕುಟುಂಬಸ್ಥರು ಸಾಕಷ್ಟು ನೋವು ಅನುಭವಿಸಿದ್ದರು. ಕದೀರೇಶ್ ಸಂಪಾದನೆ ಮಾಡಿದ್ದ ಆಸ್ತಿ ರಾಜಕೀಯ ಪವರ್ ಎಲ್ಲವೂ ಕದಿರೇಶ್ ಪತ್ನಿ ರೇಖಾಗೆ ಸಿಕ್ಕಿತು. ಪವರ್ ಸಿಕ್ಕ ಬಳಿಕ ರೇಖಾ ಕದೀರೇಶ್ ಕುಟುಂಬ ಬಿಟ್ಟು ಒಬ್ಬರೇ ಪ್ರತ್ಯೇಕವಾಗಿದ್ದರು ಎನ್ನಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ