ಪರ್ತಗಾಳಿ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಪೀಠಾರೋಹಣ ಸಂಪನ್ನ

ಪಣಜಿ: ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ೨೪ನೇ ಪೀಠಾಧಿಪತಿಗಳಾಗಿ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರು ಶುಕ್ರವಾರ ಗುರುಪೀಠಾರೋಹಣಗೈದರು.
ಗೋವಾದ ಕಾಣಕೋಣದಲ್ಲಿರುವ ಶ್ರೀ ಪರ್ತಗಾಳಿ ಜೀವೋತ್ತಮ ಮಠದಲ್ಲಿ ನಡೆದ ಶುಕ್ರವಾರ ಮಧ್ಯಾಹ್ನ ೩.೧೦ಕ್ಕೆ ನಡೆದ ಸರಳ , ಸುಂದರ ಕಾರ್ಯಕ್ರಮದಲ್ಲಿ ಪೀಠಾರೋಹಣದ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಮಠದ ಸಂಪ್ರದಾಯದಂತೆ ಶ್ರೀಗಳು ಪೀಠಾರೋಹಣಗೈದರು.
ಈ ಕಾರ್ಯಕ್ರಮದಲ್ಲಿ ಮಠ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಕೋವಿಡ್ ಹಿನ್ನೆಲೆಯಲ್ಲಿ ಪೀಠಾರೋಹಣ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು.
ಶ್ರೀಗುರು ಪೀಠಾರೋಹಣದ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡವು. ಬೆಳಿಗ್ಗೆ ನೈರ್ಮಾಲ್ಯ ವಿಸರ್ಜನೆ ನಡೆಯಿತು. ಪೂರ್ವಾಹ್ನ ಶ್ರೀ ರಾಮದೇವ ವೀರ ವಿಠ್ಠಲ ದೇವರ ಮಹಾಪೂಜೆಯಿಂದ ಕಾರ್ಯಕ್ರಮ ಆರಂಭಗೊಂಡಿತು. ನಂತರ ಶ್ರೀಗಳು ದೀಪವನ್ನು ಪ್ರಜ್ವಲಿಸುವ ಮೂಲಕ ಸಿಂಹಾಸನದಲ್ಲಿ ಆಸೀನರಾದರು. ನಂತರ ಶ್ರೀಮಠದ ಶಾಖಾ ಮಠಗಳ ಸಮೀತಿಯಿಂದ ಪೀಠಾರೂಢ ಗುರುಗಳಿಗೆ ಪಟ್ಟ ಕಾಣಿಕೆ ಸಲ್ಲಿಸಿ, ಫಲಮಾಲಾದಿಗಳನ್ನು ಅರ್ಪಿಸಲಾಯಿತು.
ಕೋವಿಡ್ ನಿಯಮಾವಳಿಗಳ ಹಿನ್ನೆಲೆಯಲ್ಲಿ ಸರ್ಕಾರದ ನಿಯಮದಂತೆಯೇ ಶ್ರೀ ಗುರು ಪೀಠಾರೋಹಣ ಸಮಾರಂಭವನ್ನು ವೈಭವೀಕರಿಸದೆಯೇ ಶ್ರೀಮಠದಲ್ಲಿ ಆಚರಿಸಲಾಯಿತು.

ಪ್ರಮುಖ ಸುದ್ದಿ :-   ಬೆಂಗಳೂರಲ್ಲಿ 'ಸಿಮ್ ಬಾಕ್ಸ್' ಜಾಲ ಪತ್ತೆ ; ನಾಲ್ವರ ಬಂಧನ, 320 ಸಿಮ್‌ ಕನೆಕ್ಷನ್‌ ಸಾಮರ್ಥ್ಯದ 10 ಸಾಧನ ವಶ

3 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement