ನವ ದೆಹಲಿ : ಭಾರತೀಯ ಲಸಿಕೆ ತಯಾರಕ ಭಾರತ್ ಬಯೋಟೆಕ್ ಬುಧವಾರ ತನ್ನ ಕೋವಿಡ್-19 ಲಸಿಕೆ ಕೋವಾಕ್ಸಿನ್ ಫೇಸ್ 3 ವೈದ್ಯಕೀಯ ಫಲಿತಾಂಶ ಪ್ರಕಟಿಸಿದೆ.
ಲಸಿಕೆಯು ಶೇ.81ರಷ್ಟು ಮಧ್ಯಂತರ ವೈದ್ಯಕೀಯ ಪರಿಣಾಮಕಾರಿತನವನ್ನು ಹೊಂದಿದೆ ಎಂದು ಅದು ತಿಳಿಸಿದೆ.
ಕೋವಾಕ್ಸಿನ್ 3ನೇ ಹಂತದ ವೈದ್ಯಕೀಯ ಪ್ರಯೋಗಗಳಲ್ಲಿ 25,800 ಸ್ವಯಂಸೇವಕರು ಭಾಗಿಯಾಗಿದ್ದರು, ಇದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸಹಯೋಗದೊಂದಿಗೆ ಭಾರತದಲ್ಲಿ ಇದುವರೆಗೆ ನಡೆಸಿದ ಅತಿ ದೊಡ್ಡ ಪ್ರಯೋಗಗಳು ಎಂದು ಭಾರತ್ ಬಯೋಟೆಕ್ ಹೇಳಿದೆ.
ಎರಡನೇ ಡೋಸ್ ನಂತರ ಸೋಂಕು ರಹಿತರಲ್ಲಿ ಕೋವಿಡ್-19 ಅನ್ನು ತಡೆಗಟ್ಟುವಲ್ಲಿ ಕೊವಾಕ್ಸಿನ್ ಶೇ.81ರಷ್ಟು ಮಧ್ಯಂತರ ಸಾಮರ್ಥ್ಯ ಪ್ರದರ್ಶಿಸಿದೆ. ಈ ಫಲಿತಾಂಶಗಳು ಕೊವಾಕ್ಸಿನ್ ನ ಮೊದಲ ಮಧ್ಯಂತರ ವಿಶ್ಲೇಷಣೆಯನ್ನು ಆಧರಿಸಿದೆ ಎಂದು ಕಂಪೆನಿ ಹೇಳಿದೆ.
ಕೊವಿಡ್-19 ವಿರುದ್ಧ ಹೆಚ್ಚಿನ ವೈದ್ಯಕೀಯ ಸಾಮರ್ಥ್ಯ ಪ್ರದರ್ಶಿಸುವುದರ ಜೊತೆಗೆ, ಕೋವಾಕ್ಸಿನ್ ಸಹ ‘ಕೋವಿಡ್-19 ಗೆ ಕಾರಣವಾಗುವ ವೈರಸ್ ರೂಪಾಂತರಗಳ ವಿರುದ್ಧ ಗಮನಾರ್ಹ ಪ್ರತಿರಕ್ಷಣಾ ಸಾಮರ್ಥ್ಯ ಒದಗಿಸುತ್ತದೆ’ ಎಂದು ತಿಳಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ