ಸೆಪ್ಟೆಂಬರಿನಲ್ಲಿ 1 ಕೋಟಿ ಗ್ರಾಹಕರನ್ನು ಕಳೆದುಕೊಂಡ ಜಿಯೋ, ಏರ್‌ ಟೆಲ್, ವೊಡಾಫೋನ್ ಐಡಿಯಾ ; ಆದ್ರೆ ಬಿ ಎಸ್‌ ಎನ್‌ ಎಲ್‌ ಚಂದಾದಾರರು ಹೆಚ್ಚಳ…!

ನವದೆಹಲಿ: ಖಾಸಗಿ ಟೆಲಿಕಾಂ ಸಂಸ್ಥೆಗಳಾದ ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಸೆಪ್ಟೆಂಬರ್‌ನಲ್ಲಿ ಒಂದು ಕೋಟಿಗೂ ಹೆಚ್ಚು ವೈರ್‌ಲೆಸ್ ಚಂದಾದಾರರನ್ನು ಕಳೆದುಕೊಂಡಿವೆ, ಇದೇವೇಳೆ ಸರ್ಕಾರಿ ಸ್ವಾಮ್ಯದ ಭಾರತ ಸಂಚಾರ ನಿಗಮ ಲಿಮಿಟೆಡ್ (BSNL) ಸುಮಾರು 8.5 ಲಕ್ಷ ಮೊಬೈಲ್ ಬಳಕೆದಾರರನ್ನು ಹೆಚ್ಚಿಸಿಕೊಂಡು ಎಲ್ಲರೂ ಆಶ್ಚರ್ಯ ಪಡುವಂತೆ ಮಾಡಿದೆ.
ಟ್ರಾಯ್‌ (TRAI) ಬಿಡುಗಡೆ ಮಾಡಿದ ತಿಂಗಳ ಮಾಹಿತಿಯ ಪ್ರಕಾರ, ರಿಲಯನ್ಸ್ ಜಿಯೋ ಸೆಪ್ಟೆಂಬರ್‌ನಲ್ಲಿ 79.69 ಲಕ್ಷ ಮೊಬೈಲ್ ಚಂದಾದಾರರನ್ನು ಕಳೆದುಕೊಂಡಿದೆ. ಭಾರ್ತಿ ಏರ್‌ಟೆಲ್ 14.34 ಲಕ್ಷ ಬಳಕೆದಾರರು ಮತ್ತು ವೊಡಾಫೋನ್ ಐಡಿಯಾ 15.53 ಲಕ್ಷ ಬಳಕೆದಾರರನ್ನು ಕಳೆದುಕೊಂಡಿದೆ. ಆದರೆ ಭಾರತ ಸಂಚಾರ ನಿಗಮ ಲಿಮಿಟೆಡ್ (BSNL) ವೈರ್‌ಲೆಸ್ ಚಂದಾದಾರರ ಸಂಖ್ಯೆ 8.49 ಲಕ್ಷ ಹೆಚ್ಚಾಗಿದೆ.

ಸೆಪ್ಟೆಂಬರ್‌ನಲ್ಲಿ ರಿಲಯನ್ಸ್ ಜಿಯೊದ ವೈರ್‌ಲೆಸ್ ಚಂದಾದಾರರ ಸಂಖ್ಯೆ 46.37 ಕೋಟಿಯಷ್ಟಿದ್ದರೆ, ಭಾರ್ತಿ ಏರ್‌ಟೆಲ್ 38.34 ಕೋಟಿಯಷ್ಟಿತ್ತು. ವೊಡಾಫೋನ್ ಐಡಿಯಾದ ವೈರ್‌ಲೆಸ್ ಬಳಕೆದಾರರ ಸಂಖ್ಯೆ 21.24 ಕೋಟಿಯಷ್ಟಿತ್ತು. ಸೆಪ್ಟೆಂಬರ್‌ನಲ್ಲಿ ಬಿಎಸ್‌ಎನ್‌ಎಲ್‌ ಚಂದಾದಾರರ ಸಂಖ್ಯೆಯನ್ನು 9.18 ಕೋಟಿಗೆ ಏರಿದೆ.
ಜುಲೈನಲ್ಲಿ ಮೂರು ಖಾಸಗಿ ಟೆಲಿಕಾಂಗಳು ಮೊಬೈಲ್ ದರಗಳನ್ನು 10-27 ಪ್ರತಿಶತದಷ್ಟು ಹೆಚ್ಚಿಸಿವೆ.
ಸೆಪ್ಟೆಂಬರ್ 30ರಂತೆ, ಬ್ರಾಡ್‌ಬ್ಯಾಂಡ್ ಚಂದಾದಾರರ (ವೈರಡ್‌ ಮತ್ತು ವೈರ್‌ಲೆಸ್) ಚಾರ್ಟ್‌ನಲ್ಲಿ ಜಿಯೋ 47.7 ಕೋಟಿ ಚಂದಾದಾರರನ್ನು ಹೊಂದಿದೆ. ನಂತರ ಭಾರ್ತಿ ಏರ್‌ಟೆಲ್ (28.5 ಕೋಟಿ), ಮತ್ತು ವೊಡಾಫೋನ್ ಇಂಡಿಯಾ (12.6 ಕೋಟಿ) ಹಾಗೂ ಬಿಎಸ್‌ಎನ್‌ಎಲ್‌ (BSNL) 3.7 ಕೋಟಿ ಚಂದಾದಾರರನ್ನು ಹೊಂದಿದೆ.

ಪ್ರಮುಖ ಸುದ್ದಿ :-   ನೀಟ್ ಅಣಕು ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಕ್ಕೆ 17 ವರ್ಷದ ಮಗಳನ್ನು ಹೊಡೆದು ಕೊಂದ ಶಿಕ್ಷಕ...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement