
ನಾಗ್ಪುರ: ನಾಗ್ಪುರದಲ್ಲಿ 82 ವರ್ಷದ ವ್ಯಕ್ತಿಯೊಬ್ಬರು ಹಿಟ್ ಅಂಡ್ ರನ್ ಸಾವಿನ ಪ್ರಕರಣದ ತನಿಖೆ ವೇಳೆ ಕುಟುಂಬದ ₹ 300 ಕೋಟಿ ಮೌಲ್ಯದ ಆಸ್ತಿಗಾಗಿ ಮೃತ ವ್ಯಕ್ತಿಯ ಸೊಸೆಯೇ ರೂಪಿಸಿದ್ದ ಭೀಕರ ಕೊಲೆ ಸಂಚು ಬಯಲಾಗಿದೆ…!
ನಗರ ಯೋಜನಾ ವಿಭಾಗದ ಸಹಾಯಕ ನಿರ್ದೇಶಕಿ ಅರ್ಚನಾ ಮನೀಷ ಪುಟ್ಟೇವಾರ ಎಂಬವರನ್ನು ಘಟನೆ ನಡೆದ ಹದಿನೈದು ದಿನಗಳ ನಂತರ ಕಳೆದ ವಾರ ಅವಳ ಮಾವ ಪುರುಷೋತ್ತಮ ಪುಟ್ಟೇವಾರ ಅವರನ್ನು ಕಾರು ಡಿಕ್ಕಿ ಹೊಡೆದು ಸಾಯಿಸಿದ ಪ್ರಕರಣದಲ್ಲಿ ಬಂಧಿಸಲಾಯಿತು.
ಅರ್ಚನಾ ಪುಟ್ಟೇವಾರ ಈ ಕೃತ್ಯ ನಡೆಸಲು ಜನರನ್ನು ನೇಮಿಸಿಕೊಂಡಳು ಮತ್ತು ಅದಕ್ಕಾಗಿ ಸುಮಾರು ₹ 1 ಕೋಟಿ ಖರ್ಚು ಮಾಡಿದ್ದಾಳೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ತನ್ನ ಮಾವನಿಗೆ ಡಿಕ್ಕಿ ಹೊಡೆಯಲು ಬಳಸಿದ ಕಾರು ಖರೀದಿಸಲು ಆರೋಪಿಗೆ ಹಣ ನೀಡಿದ್ದಾಳೆ. ಕೊಲೆಯನ್ನು ಅಪಘಾತದಂತೆ ಕಾಣುವಂತೆ ಮಾಡಲು ಇದನ್ನು ಮಾಡಲಾಗಿದೆ. ಮಾವನ ಕುಟುಂಬದ ₹ 300 ಕೋಟಿ ಆಸ್ತಿಯ ಮೇಲೆ ಹಿಡಿತ ಸಾಧಿಸಲು ಈ ಕೃತ್ಯ ನಡೆಸಲಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದರು.

53 ವರ್ಷದ ಮಹಿಳೆ ತನ್ನ ಗಂಡನ ಚಾಲಕ ಬಾಗ್ಡೆ ಮತ್ತು ಇತರ ಇಬ್ಬರು ಆರೋಪಿಗಳಾದ ನೀರಜ ನಿಮ್ಜೆ ಮತ್ತು ಸಚಿನ್ ಧಾರ್ಮಿಕ ಅವರೊಂದಿಗೆ ಸೇರಿ ಕೊಲೆಗೆ ಸಂಚು ರೂಪಿಸಿದ್ದಾಳೆ ಎಂದು ಅಧಿಕಾರಿ ತಿಳಿಸಿದ್ದಾರೆ. ಪೊಲೀಸರು ಅವರ ವಿರುದ್ಧ ಐಪಿಸಿ ಮತ್ತು ಮೋಟಾರು ವಾಹನ ಕಾಯ್ದೆಯಡಿ ಕೊಲೆ ಮತ್ತು ಇತರ ಸೆಕ್ಷನ್‌ಗಳ ಆರೋಪ ಹೊರಿಸಿದ್ದಾರೆ. ಎರಡು ಕಾರು, ಚಿನ್ನಾಭರಣ ಹಾಗೂ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಘಟನೆ ನಡೆದ ದಿನ ವೃದ್ಧ ಪುರುಷೋತ್ತಮ ಪುಟ್ಟೇವಾರ ಅವರು ಶಸ್ತ್ರ ಚಿಕಿತ್ಸೆ ಬಳಿಕ ಚೇತರಿಸಿಕೊಳ್ಳುತ್ತಿದ್ದ ಪತ್ನಿ ಶಕುಂತಲಾ ಅವರನ್ನು ಭೇಟಿಯಾಗಲು ಆಸ್ಪತ್ರೆಗೆ ತೆರಳಿದ್ದರು ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಹಿಂತಿರುಗುವಾಗ, ಬಾಡಿಗೆ ಕಾರು ಅವರಿಗೆ ಡಿಕ್ಕಿ ಹೊಡೆಯಿತು. ಅವರ ಮಗ (ಅರ್ಚನಾ ಪತಿ) ಮನೀಷ ವೈದ್ಯರಾಗಿದ್ದಾರೆ.
ಇದೇ ವೇಳೆ ಕೊಲೆ ಪ್ರಕರಣದ ತನಿಖೆ ವೇಳೆ ನಗರ ಯೋಜನಾ ವಿಭಾಗದಲ್ಲಿ ಅರ್ಚನಾ ಪುಟ್ಟೇವಾರ ನಡೆಸಿದ ಭಾರೀ ಅಕ್ರಮಗಳು ಕಂಡುಬಂದಿವೆ. ಹಲವು ದೂರುಗಳು ಬಂದಿದ್ದರೂ ಆಕೆಯ ರಾಜಕೀಯ ಸಂಬಂಧದಿಂದಾಗಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತನಿಖೆಯಿಂದ ತಿಳಿದುಬಂದಿದೆ. ನಿಯಮ ಉಲ್ಲಂಘಿಸಿ ಅಕ್ರಮ ಬಡಾವಣೆಗಳಿಗೆ ಕ್ಲಿಯರೆನ್ಸ್ ನೀಡಿದ ಆರೋಪ ಅವಳ ಮೇಲಿದೆ. ಆಕೆಯ ಬಂಧನ ಮತ್ತು ಕುಟುಂಬದ ಸದಸ್ಯರ ಕೊಲೆಗೆ ಸಂಚು ರೂಪಿಸಿದ ಗಂಭೀರ ಆರೋಪವು ಆಕೆಯ ಕೆಲಸದಲ್ಲಿಯೂ ನಡೆದಿರಬಹುದಾದ ಆಪಾದಿತ ಅಕ್ರಮಗಳ ಬಗ್ಗೆ ಆಳವಾದ ತನಿಖೆಗೆ ಕಾರಣವಾಗಬಹುದಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ