ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ: ಈವರೆಗೆ 6 ಆರೋಪಿಗಳ ಬಂಧನ

ಶಿವಮೊಗ್ಗ: ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೂ 6 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಎಸ್​ಪಿ ಬಿ.ಎಂ.ಲಕ್ಷ್ಮೀಪ್ರಸಾದ್​​ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಕಾಸಿಮ್, ನದೀಮ್ ಎಂಬುವರನ್ನು ಬಂಧಿಸಲಾಗಿತ್ತು, ಉಳಿದ ನಾಲ್ವರು ಆರೋಪಿಗಳನ್ನು ಇಂದು ಬಂಧಿಸಲಾಗಿದೆ. ಬಂಧಿತ ಆರೋಪಿಗಳೆಲ್ಲರೂ ಶಿವಮೊಗ್ಗ ನಗರದ ನಿವಾಸಿಗಳು. ಪ್ರಕರಣದಲ್ಲಿ ಈವರೆಗೆ 6 ಆರೋಪಿಗಳನ್ನು ಬಂಧಿಸಲಾಗಿದೆ. ಇದುವರೆಗೆ 13 ಎಫ್​ಐಆರ್​ ದಾಖಲಾಗಿವೆ ಎಂದು ಹೇಳಿದರು.
ಎಸ್‍ಪಿ ಲಕ್ಷ್ಮೀ ಪ್ರಸಾದ್ ಮಾತನಾಡಿ, ಹಿಂಸಾಚಾರದ ಬಗ್ಗೆ 9 ಎಫ್‍ಐಆರ್ ದಾಖಲಾಗಿವೆ. 18 ವಾಹನಗಳು ಜಖಂ ಆಗಿವೆ ಈ ಬಗ್ಗೆ ಆರು ಮಂದಿ ದೂರು ನೀಡಿದ್ದಾರೆ. ಈಗಾಗಲೇ 7 ಮಂದಿಯನ್ನು ಬಂಧಿಸಲಾಗಿದೆ. ಆರೋಪಿ ಪಟ್ಟಿಯಲ್ಲಿ ಕಾಸೀಫ್, ನದೀಮ್, ಆಸೀಫ್ ಖಾನ್ ಅಲಿಯಾಸ್ ಚಿಕ್ಕೂ, ರಿಯಾನ್ ಷರೀಪ್ , ನಿಹಾನ್ ಮುಜಾಹೀದ್, ಅಬ್ದುಲ್ ಆಫಾನ್, ಜಿಲಾನಿ ಅವರನ್ನು ಬಂಧಿಲಾಗಿದ್ದು, ಇವರೆಲ್ಲರೂ ಶಿವಮೊಗ್ಗದವರು ಎಂದು ತಿಳಿಸಿದರು.
ಈ ಪೈಕಿ ಎ1 ಮೊಹಮ್ಮದ್ ಕಾಸಿಫ್, ಎ2 ಸೈಯದ್ ನದೀಮ್, ಎ3 ಆಸಿಫ್ ಉಲ್ಲಾ ಖಾನ್, ಎ4 ರಿಹಾನ್ ಷರೀಫ್​, ಎ5 ನಿಹಾನ್, ಎ6 ಅಬ್ದುಲ್ ಅಫ್ನಾನ್ ನನ್ನು​ ಬಂಧಿಸಲಾಗಿದೆ ಎಂದು ಎಸ್​ಪಿ ಬಿ.ಎಂ.ಲಕ್ಷ್ಮೀಪ್ರಸಾದ್​​ ಮಾಹಿತಿ ನೀಡಿದರು. ಎಲ್ಲಾ 6 ಆರೋಪಿಗಳನ್ನು ಶಿವಮೊಗ್ಗದಲ್ಲೇ ಬಂಧಿಸಲಾಗಿದ್ದು, ಬಂಧಿತ 6 ಆರೋಪಿಗಳ ಪೈಕಿ ನಾಲ್ವರಿಗೆ ಕ್ರಿಮಿನಲ್ ಹಿನ್ನೆಲೆಯಿದೆ. ಗಲಭೆಯಲ್ಲಿ ಭಾಗಿಯಾಗಿದ್ದ ಅಪರಾಧ ಹಿನ್ನೆಲೆ ಹೊಂದಿದ್ದಾರೆ ಎಂದು ಹೇಳಿದರು.
ಹರ್ಷ ಕೊಲೆ ಪ್ರಕರಣಕ್ಕೆ ಸಂಬಂದಿಸಿದಂತೆ ಇಂದು ನಾಲ್ಕು ಜನರ ಬಂಧನವಾಗಿದ್ದು, ಖಾಸಿಫ್ ಮತ್ತು ನದೀಮ್ ಇಬ್ಬರು ನ್ಯಾಯಾಂಗ ಬಂಧನದಲ್ಲಿಡಲಾಗಿದೆ. ಉಳಿದ ನಾಲ್ವರು ಆರೋಪಿಗಳ ವಿಚಾರಣೆ ನಡೆಯುತ್ತಿದೆ. ಪ್ರಕರಣದಲ್ಲಿ ಇನ್ನೂ ಅನೇಕರು ಇದ್ದಾರೆ. ತನಿಖೆ ಮುಂದುವರೆದಿದೆ. ಇನ್ನೂ ಬಂಧನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿದರು.

ಪ್ರಮುಖ ಸುದ್ದಿ :-   ಜಗತ್ತಿಗೆ ಹೇಳುವ ಮೊದಲೇ ಪಾಕಿಸ್ತಾನಕ್ಕೆ ತಿಳಿಸಿದ್ದೆ ; ಬಾಲಾಕೋಟ್ ಸ್ಟ್ರೈಕ್ ಬಗ್ಗೆ ಬಿಚ್ಚಿಟ್ಟ ಪ್ರಧಾನಿ ಮೋದಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement