ಜೈನ ವಿದ್ಯಾರ್ಥಿಗಳಿಂದ ಧಾರವಾಡದ ಜೈನ ಮಿಲನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಧಾರವಾಡ: ಧಾರವಾಡ ಜಿಲ್ಲೆಯಲ್ಲಿ 2022-23ನೇ ಸಾಲಿನ ಪ್ರಥಮ ವರ್ಷ ಪಿಯುಸಿ/ ಐಟಿಐ/ ಡಿಪ್ಲೋಮಾ/ಬಿ.ಎ/ ಬಿ.ಕಾಂ/ ಬಿಎಸ್ಸಿ /ಬಿಬಿಎ/ಬಿಸಿಎ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಜೈನ ಸಮುದಾಯದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಂದ ಧಾರವಾಡ ಜೈನ ಮಿಲನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಿದೆ.
ಸಂಪರ್ಕ ಸಂಖ್ಯೆ, ಪಾಲಕರ ಉದ್ಯೋಗ ಇತ್ಯಾದಿ ವಿವರಗಳನ್ನೊಳಗೊಂಡ ವಿನಂತಿ ಅರ್ಜಿಯೊಂದಿಗೆ, ಶುಲ್ಕ ಪಾವತಿಸಿದ ರಶೀದಿ, ಆದಾಯ ಪ್ರಮಾಣ ಪತ್ರ, ಆಧಾರ ಕಾರ್ಡ್‌, ಎಸ್.ಎಸ್.ಎಲ್.ಸಿ/ಪಿ.ಯು.ಸಿ ಅಂಕಪಟ್ಟಿ ಪ್ರತಿಗಳನ್ನು ಲಗತ್ತಿಸಿ ಅಂಚೆ ಮೂಲಕ ಈ ಕೆಳಗಿನ ವಿಳಾಸಕ್ಕೆ ದಿನಾಂಕ 21.11.2022 ರ ಒಳಗಾಗಿ ಅಶೋಕ ಅ ಬಾಳೀಕಾಯಿ, ಮನೆ ನಂ. ಟಿ-18, 3ನೇ ಅಡ್ಡರಸ್ತೆ, ಶಾಂಭವಿ ಕಾಲನಿ, ಗಾಂಧಿನಗರ, ಧಾರವಾಡ. ಮೊಬೈಲ್: 9448831296 ಇಲ್ಲಿಗೆ ತಲುಪಿಸಲು ಈ ಮೂಲಕ ತಿಳಿಸಲಾಗಿದೆ. ತಡವಾಗಿ ಬಂದ ಹಾಗೂ ಅಪೂರ್ಣ ಅರ್ಜಿಯನ್ನು ತಿರಸ್ಕರಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement