ಸಿಎಂ ಸಿದ್ದರಾಮಯ್ಯ ವಿಮಾನ ಪ್ರಯಾಣಕ್ಕೆ ಖರ್ಚಾದ ಹಣ ಎಷ್ಟು ಗೊತ್ತಾ…?

ಬೆಳಗಾವಿ: ಕಳೆದ ಎರಡು ವರ್ಷಗಳಲ್ಲಿ (2023 ರಿಂದ 2025 ನವೆಂಬರ್ ವರೆಗೆ )ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಶೇಷ ವಿಮಾನ ಹಾಗೂ ಹೆಲಿಕಾಪ್ಟರ್ ಪ್ರಯಾಣದ ವೆಚ್ಚ 47 ಕೋಟಿ ರೂ. ಆಗಿದೆ.
ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿ ವಿಧಾನ ಪರಿಷತ್‌ ಸದಸ್ಯ ರವಿಕುಮಾರ ಅವರ ಪ್ರಶ್ನೆಗೆ ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.
2023-24ರಲ್ಲಿ ಸಿದ್ದರಾಮಯ್ಯ 48 ಬಾರಿ ವಿಮಾನಯಾನ ಮಾಡಿದ್ದು, ಇದಕ್ಕೆ 12.23 ಕೋಟಿ ರೂ. ಹಾಗೂ 2024-25ರಲ್ಲಿ 84 ಬಾರಿ ವಿಮಾನದಲ್ಲಿ ತೆರಳಿದ್ದು, ಅದಕ್ಕೆ 20.88 ಕೋಟಿ ರೂ. ವೆಚ್ಚವಾಗಿತ್ತು.

ಈ ಹಣಕಾಸು ವರ್ಷದಲ್ಲಿ 48 ಬಾರಿ ವಿಮಾನ ಮತ್ತು ಹೆಲಿಕಾಪ್ಟರ್‌ಗಳನ್ನು ಬುಕ್ ಮಾಡಲಾಗಿದ್ದು, 14.03 ಕೋಟಿ ರೂ. ವೆಚ್ಚವಾಗಿದೆ. 181 ಬುಕಿಂಗ್‌ಗಳಲ್ಲಿ 180 ಜಿಎಂಪಿ ಏರ್ ಚಾರ್ಟರ್‌ಗಳ ಮೂಲಕ ಆಗಿದೆ. ಉಳಿದದ್ದು ಗೋಜೆಟ್ಸ್ ಏವಿಯೇಷನ್‌ನಿಂದ ಆಗಿದೆ. ಸಿಎಂ ಅಧಿಕೃತ ಭೇಟಿಗೆ ಮಾತ್ರ ವಿಶೇಷ ವಿಮಾನ, ವಿಮಾನ, ಹೆಲಿಕಾಪ್ಟರ್ ಬಳಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಲಾಗಿದೆ.
ಎರಡೂವರೆ ವರ್ಷಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಿಂದ ತಮ್ಮ ತವರು ಜಿಲ್ಲೆಯಾದ ಮೈಸೂರಿಗೆ ವಿಮಾನದಲ್ಲಿ ಬರಲು 5 ಕೋಟಿಗೂ ಹೆಚ್ಚು ಖರ್ಚು ಮಾಡಿದ್ದಾರೆ. ಸಿದ್ದರಾಮಯ್ಯ ದೆಹಲಿ, ಹೈದರಾಬಾದ್ ಮತ್ತು ಚೆನ್ನೈಗೆ ವಿಮಾನದಲ್ಲಿ ತೆರಳಿರುವ ಮಾಹಿತಿ ನೀಡಲಾಗಿದೆ. ಅಂಕಿಅಂಶಗಳ ವಿಶ್ಲೇಷಣೆಯ ಪ್ರಕಾರ, ಸಿದ್ದರಾಮಯ್ಯ ಸರಾಸರಿ ಐದು ದಿನಗಳಿಗೊಮ್ಮೆ ಹೆಲಿಕಾಪ್ಟರ್ ಅಥವಾ ವಿಶೇಷ ವಿಮಾನವನ್ನು ಬಳಸಿದ್ದಾರೆ. ಈ ಬಾರಿ ಅವರು 180 ಬಾರಿ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಬುಕ್ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಇಬ್ಬರೂ ವೃತ್ತಿಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ: ರೋಹಿಣಿ ಸಿಂಧೂರಿ–ರೂಪಾ ಜಗಳದ ಕುರಿತು ಸುಪ್ರೀಂ ಕೋರ್ಟ್‌

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement