ಅಪರೂಪದ ಕಾದಾಟ…ತನ್ನ ಪ್ರದೇಶಕ್ಕೆ ಬಂದ ಕಾಳಿಂಗ ಸರ್ಪವನ್ನೇ ಹೆದರಿಸಿ ಓಡಿಸಿದ ಮುಂಗುಸಿ..! ವೀಕ್ಷಿಸಿ

ಮುಂಗುಸಿಯು ಸಣ್ಣ ಕಾಲುಗಳನ್ನು ಹೊಂದಿರುವ ಸಣ್ಣ ಪ್ರಾಣಿ. ಆದರೆ ಇದನ್ನು ಉಗ್ರ ಹಾವಿನ ವಿರುದ್ಧದ ಅಪ್ರತಿಮ ಹೋರಾಟಗಾರ ಎಂದು ಕರೆಯಲಾಗುತ್ತದೆ. ಕಾಳಿಂಗ ಸರ್ಪ ವಿಶ್ವದ ಅತ್ಯಂತ ವಿಷಕಾರಿ ಹಾವುಗಳಲ್ಲಿ ಒಂದಾಗಿದೆ ಮತ್ತು 20 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಮನುಷ್ಯರನ್ನು ಕೊಲ್ಲುತ್ತದೆ. ಆದರೆ, ಆದರೆ ಬೃಹತ್‌ ಕಾಳಿಂಗ ಸರ್ಪ ಮುಂಗುಸಿಗೆ ಭಯಪಡುತ್ತದೆ ಎಂದರೆ ನಂಬುಗೆ ಬರುವುದಿಲ್ಲ, ಆದರೆ ನಂಬಲೇಬೇಕಾದ ವಿದ್ಯಾಮನವೊಂದು ನಡೆದಿದ್ದು, ಈ ದೃಶ್ಯದ ವೀಡಿಯೊ ಈಗ ವೈರಲ್‌ ಆಗಿದೆ.

ಮುಂಗುಸಿಯು ವಿಷಕಾರಿ ಹಾವಿನ ಮಾರಣಾಂತಿಕ ಕಡಿತದಿಂದ ಬದುಕಬಲ್ಲದು ಮತ್ತು ನಾಗರಹಾವುಗಳೊಂದಿಗಿನ ಕಾದಾಟದ 75 ರಿಂದ 80 ಪ್ರತಿಶತದಲ್ಲಿ, ಮುಂಗುಸಿ ಯಾವಾಗಲೂ ಗೆಲ್ಲುತ್ತದೆ. ಭಾರತೀಯ ಬೂದು ಮುಂಗುಸಿ (ನೆವ್ಲಾ) ನಿರ್ದಿಷ್ಟವಾಗಿ ಕಾದಾಡಲು ಮತ್ತು ನಾಗರಹಾವುಗಳಂತಹ ವಿಷಕಾರಿ ಹಾವುಗಳನ್ನು ಕೊಂದು ತಿನ್ನುವುದಕ್ಕೆ ಹೆಸರುವಾಸಿಯಾಗಿದೆ.

ಭಾರತೀಯ ಬೂದು ಮುಂಗುಸಿಯೊಂದಿಗೆ ಕಾಳಿಂಗ ಸರ್ಪ ತೀವ್ರ ಮುಖಾಮುಖಿಯಲ್ಲಿ ತೊಡಗಿರುವ ವೀಡಿಯೊವೊಂದು ವೈರಲ್ ಆಗಿದೆ. ಕಾಳಿಂಗ ಸರ್ಪ ಮುಂಗುಸಿಯ ಸೀಮೆಯನ್ನು ಪ್ರವೇಶಿಸಿದಂತೆ ಕಾಣುತ್ತದೆ ಮತ್ತು ಮುಂಗುಸಿಯೊಂದಿಗೆ ಮುಖಾಮುಖಿಯಾದ ನಂತರ, ಕಾಳಿಂಗ ಸರ್ಪ ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಮತ್ತು ಅಲ್ಲಿಂದ ಓಡಿಹೋಗಲು ತನ್ನಲ್ಲಿರುವ ಎಲ್ಲ ರಕ್ಷಣಾತ್ಮಕ ತಂತ್ರಗಳನ್ನು ಬಳಸಿದೆ. ಮುಂಗುಸಿ ಮತ್ತು ಕಾಳಿಂಗ ಸರ್ಪ ಪರಸ್ಪರ ದಾಳಿ ಮಾಡುವುದನ್ನು ಮತ್ತು ಮುಂಗುಸಿಯು ತನ್ನ ಸೀಮೆಯಿಂದ ಅದನ್ನು ಅಟ್ಟಿಸಿಕೊಂಡು ಹೋಗುವುದನ್ನು ವೀಡಿಯೊದಲ್ಲಿ ನೋಡಬಹುದು.
‘ಮುಂಗುಸಿ ತನ್ನ ನೆಚ್ಚಿನ ಊಟದೊಂದಿಗೆ (Mongoose with its favourite meal) ಎಂಬ ಶೀರ್ಷಿಕೆಯೊಂದಿಗೆ ಟ್ವಿಟ್ಟರ್‌ನಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗಿದ್ದು, ಸಾವಿರಾರು ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಪ್ರಮುಖ ಸುದ್ದಿ :-   ಮಹದೇವ ಬೆಟ್ಟಿಂಗ್ ಅಪ್ಲಿಕೇಶನ್ ಪ್ರಕರಣದಲ್ಲಿ ನಟ ಸಾಹಿಲ್ ಖಾನ್ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement