ಮುಂಬೈ: ಗಾಯಕ- ಸಂಗೀತ ಸಂಯೋಜಕ ಬಪ್ಪಿ ಲಾಹಿರಿ ಅವರು ಮಂಗಳವಾರ ಮುಂಬೈ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಅವರಿಗೆ 69 ವರ್ಷವಾಗಿತ್ತು. ಅವರು ಮಂಗಳವಾರ ರಾತ್ರಿ 11.45ರ ಸುಮಾರಿಗೆ ಇಹಲೋಕ ತ್ಯಜಿಸಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಹಿರಿಯ ಗಾಯಕ ಕಳೆದ ವರ್ಷ ಏಪ್ರಿಲ್‌ನಲ್ಲಿ ಕೋವಿಡ್ -19 ಗೆ ಧನಾತ್ಮಕ ಪರೀಕ್ಷೆ ನಡೆಸಿದ್ದರು, ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿ ಚೇತರಿಸಿಕೊಂಡಿದ್ದರು.
ಬಪ್ಪಿ ಲಹಿರಿ ಅವರು ಅನೇಕ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದರು. ಮಂಗಳವಾರ ರಾತ್ರಿ ಅವರ ಆರೋಗ್ಯ ಹದಗೆಟ್ಟ ನಂತರ ಅವರನ್ನು ಆಸ್ಪತ್ರೆಗೆ ಕರೆತರಲಾಯಿತು ಮತ್ತು ಆದರೆ ಚಿಕಿತ್ಸೆ ಫಲಿಸದೆ ಅವರು ನಿಧನರಾಗಿದ್ದಾರೆ.
ಹಿಂದಿ ಮಾತ್ರವಲ್ಲದೆ ತಮಿಳು ತೆಲುಗು ಚಿತ್ರಲ್ಲೂ ಹಾಡಿದ್ದ ಬಪ್ಪಿ ಲಹರಿ ಅಗಾಧ ಅಭಿಮಾನಿಗಳನ್ನು, ಸಂಗೀತ ಪ್ರಿಯರನ್ನೂ ಅಗಲಿದ್ದಾರೆ.
ಗಾಯಕ ಹಾಗೂ ಸಂಗೀತ ಸಂಯೋಜಕರಾಗಿದ್ದ ಬಪ್ಪಿ ಲಹಿರಿ ಅವರ ಟ್ರೇಡ್‌ಮಾರ್ಕ್ ಚಿನ್ನದ ಚೈನುಗಳು ಮತ್ತು ಅವರ ಸನ್‌ಗ್ಲಾಸ್‌ಗಳು. 80 ಮತ್ತು 90 ರ ದಶಕಗಳಲ್ಲಿ ಭಾರತದಲ್ಲಿ ಡಿಸ್ಕೋ ಸಂಗೀತವನ್ನು ಜನಪ್ರಿಯಗೊಳಿಸಿದ್ದ ಸಂಗೀತ-ಸಂಯೋಜಕ ಬಪ್ಪಿ ಲಾಹಿರಿ 1973 ರ ಚಲನಚಿತ್ರ ‘ನನ್ಹಾ ಶಿಕಾರಿ’ಗೆ ಸಂಗೀತ ಸಂಯೋಜನೆ ಮಾಡುವ ಮೂಲಕ ಉದ್ಯಮಕ್ಕೆ ಪಾದಾರ್ಪಣೆ ಮಾಡಿದರು. ಕಳೆದ ವರ್ಷ, ಬಪ್ಪಿ ಲಾಹಿರಿ ಅವರು ಕಿಶೋರ್ ಕುಮಾರ್ ಚಿತ್ರ ‘ಬಧಿ ಕಾ ನಾಮ್ ದಧಿ’ ನಲ್ಲಿ ನಟನಾಗಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು ಎಂದು ಹೇಳಿದ್ದರು. ಅವರ ಕೊನೆಯ ಬಾಲಿವುಡ್ ಹಾಡು 2020 ರ ಚಲನಚಿತ್ರ “ಬಾಘಿ 3” ಗಾಗಿ “ಭಂಕಾಸ್” ಆಗಿತ್ತು. 80 ರ ದಶಕದ ಹಲವಾರು ಚಲನಚಿತ್ರಗಳಲ್ಲಿನ ಅವರ ಹಾಡುಗಳಿಗೆ ಹೆಸರುವಾಸಿಯಾಗಿದ್ದರು. ಇವುಗಳಲ್ಲಿ “ಚಲ್ತೆ ಚಲ್ತೆ”, “ಡಿಸ್ಕೋ ಡ್ಯಾನ್ಸರ್” ಮತ್ತು “ಶರಾಬಿ” ಸೇರಿದ್ದವು.
ಲಾಹಿರಿ ಒಂದು ತಿಂಗಳ ಕಾಲ ಆಸ್ಪತ್ರೆಗೆ ದಾಖಲಾಗಿದ್ದರು ಮತ್ತು ಸೋಮವಾರ ಡಿಸ್ಚರ‍್ಜ್ ಆಗಿದ್ದರು. ಆದರೆ ಮಂಗಳವಾರ ಅವರ ಆರೋಗ್ಯ ಹದಗೆಟ್ಟಿದ್ದು, ಅವರನ್ನು ಆಸ್ಪತ್ರೆಗೆ ಕರೆತರಲಾಯಿತು.
ನಿಮ್ಮ ಕಾಮೆಂಟ್ ಬರೆಯಿರಿ