ನವ ದೆಹಲಿ: ಡಬಲ್ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಛತ್ರಸಾಲ ಸ್ಟೇಡಿಯಂನಲ್ಲಿ ಕುಸ್ತಿಪಟು ಸಾಗರ್ ರಾಣಾ ಕೊಲೆ ಪ್ರಕರಣದಲ್ಲಿ ಸುಶೀಲ್ ಕುಮಾರ್ ಆರೋಪಿತರಾಗಿದ್ದು ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ದೆಹಲಿ ಕೋರ್ಟ್ ಗೆ ನಿರೀಕ್ಷಣಾ ಜಾಮೀನು ಕೋರಿ ಸುಶೀಲ್ ಕುಮಾರ್ ಅರ್ಜಿ ಸಲ್ಲಿಸಿದ್ದು, ಅರ್ಜಿ ಸಲ್ಲಿಸಿದ ಒಂದು ದಿನದ ನಂತರದಲ್ಲಿ ಅವರ ಜಾಮೀನು ಅರ್ಜಿ ತಿರಸ್ಕರಿಸಲಾಗಿದೆ.
ಮೇ 4 ರಂದು ಛತ್ರಸಾಲ ಕ್ರೀಡಾಂಗಣ ಆವರಣದಲ್ಲಿ ನಡೆದ ಹೊಡೆದಾಟದಲ್ಲಿ ಕುಸ್ತಿಪಟು ಸಾಗರ್ ರಾಣಾ ಮೃತಪಟ್ಟು ಅವರ ಸ್ನೇಹಿತರು ಗಾಯಗೊಂಡಿದ್ದರು. ದೆಹಲಿ ಪಲೀಸರು ದಾಖಲಿಸಿದ ಎಫ್ಐಆರ್ನಲ್ಲಿ ಕುಸ್ತಿಪಟು ಸುಶೀಲಕುಮಾರ ಹೆಸರಿದೆ. ತಮ್ಮ ಹೆಸರು ಎಫ್ಆರ್ನಲ್ಲಿ ದಾಖಲಾಗುತ್ತಿದ್ದಂತ ಸುಶೀಲಕುಮಾರ ನಾಪತ್ತೆಯಾಗಿದ್ದಾರೆ.ಕೋರ್ಟ್ ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದೆ. ದೆಹಲಿ ಪೊಲೀಸರು ಸುಶೀಲಕುಮಾರ ಮಾಹಿತಿ ನೀಡಿದವರಿಗೆ ಒಂದು ಲಕ್ಷ ರೂ.ಬಹುಮಾನ ಘೋಷಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ