ಪ್ರತಿಭಟನೆಗಳ ಮಧ್ಯೆಯೇ ಜೂನ್ 24 ರಿಂದ ಅಗ್ನಿಪಥ ಯೋಜನೆಯಡಿ ವಾಯುಪಡೆಯಲ್ಲಿ ನೇಮಕಾತಿ ಆರಂಭ

ನವದೆಹಲಿ: ಭಾರತೀಯ ವಾಯುಪಡೆಯು ಹೊಸ ಅಗ್ನಿಪಥ ನೇಮಕಾತಿ ಮಾದರಿಯ ಅಡಿಯಲ್ಲಿ ಆಯ್ಕೆಯನ್ನು ಪ್ರಾರಂಭಿಸುವ ಮೊದಲ ಸೇನಾ ವೀನಾಗವಾಗಲಿದ್ದು, ಇದು. ಜೂನ್ 24ರಿಂದ ಅಗ್ನಿವೀರರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಆರಂಭಿಸಲಿದೆ.
ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ತಮ್ಮ ಭಾಷಣದಲ್ಲಿ, “ಉನ್ನತ ವಯೋಮಿತಿಯನ್ನು (ನೇಮಕಾತಿಗಾಗಿ) 23 ವರ್ಷಕ್ಕೆ ಪರಿಷ್ಕರಿಸಲಾಗಿದೆ ಎಂದು ಘೋಷಿಸಲು ಸಂತೋಷವಾಗಿದೆ. ಇದು ಯುವಕರಿಗೆ ಅನುಕೂಲ ಒದಗಿಸುತ್ತದೆ. ಭಾರತೀಯ ವಾಯುಪಡೆಯ ನೇಮಕಾತಿ ಪ್ರಕ್ರಿಯೆಯು ಜೂನ್ 24 ರಂದು ಪ್ರಾರಂಭವಾಗಲಿದೆ ಎಂದು ಹೇಳಿದ್ದಾರೆ.
ಬಿಹಾರ, ತೆಲಂಗಾಣ ಮತ್ತು ಉತ್ತರ ಪ್ರದೇಶ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಕೇಂದ್ರದ ಹೊಸ ಸೇನಾ ನೇಮಕಾತಿ ಯೋಜನೆಯ ವಿರುದ್ಧ ಪ್ರತಿಭಟನೆಗಳು ಉಲ್ಬಣಗೊಳ್ಳುತ್ತಿರುವ ಮಧ್ಯೆ ಅವರ ಈ ಹೇಳಿಕೆ ಬಂದಿದೆ.

ಪ್ರಾಸಂಗಿಕವಾಗಿ, ಕೋವಿಡ್ ಎರಡು ವರ್ಷಗಳಿಂದ ಸೇನೆಯ ನೇಮಕಾತಿಯನ್ನು ಸ್ಥಗಿತಗೊಳಿಸಿತ್ತು. 2019-2020 ರಲ್ಲಿ, ಸೇನೆಯು ಜವಾನರನ್ನು ನೇಮಿಸಿಕೊಂಡಿತು ಮತ್ತು ಅಂದಿನಿಂದ ಯಾವುದೇ ನೇಮಕಾತಿ ನಡೆದಿರಲಿಲ್ಲ. ಮತ್ತೊಂದೆಡೆ, ಭಾರತೀಯ ನೌಕಾಪಡೆ ಮತ್ತು ಭಾರತೀಯ ವಾಯುಪಡೆಗಳು ಕಳೆದ ಎರಡು ವರ್ಷಗಳಲ್ಲಿ ಕ್ರಮವಾಗಿ ನೇಮಕ ಮಾಡಿವೆ.

ಪ್ರಮುಖ ಸುದ್ದಿ :-   ಬಹುಭಾಷಾ ನಟ ಮುಕುಲ್‌ ದೇವ ನಿಧನ

ಕೇಂದ್ರವು ಭಾರತೀಯ ಯುವಕರಿಗೆ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಹೊಸ ಅಲ್ಪಾವಧಿಯ ನೇಮಕಾತಿ ನೀತಿ ಅಗ್ನಿಪಥ ಯೋಜನೆಯನ್ನು ಮಂಗಳವಾರ ಅನಾವರಣಗೊಳಿಸಿದೆ . ಈ ಯೋಜನೆಯು 17.5 ರಿಂದ 21 ವರ್ಷ ವಯಸ್ಸಿನ ಯುವಕರನ್ನು ನಾಲ್ಕು ವರ್ಷಗಳ ಅವಧಿಗೆ “ಅಗ್ನಿವೀರ್” ಎಂದು ಸೇನೆಯ ಯಾವುದೇ ಮೂರು ಸೇವೆಗಳಿಗೆ ಸೇರಿಸಿಕೊಳ್ಳಲು ಅನುಮತಿಸುತ್ತದೆ. ಪ್ರತಿಭಟನೆಯ ನಂತರ, 2022 ಕ್ಕೆ 21 ರಿಂದ 23 ರ ವರೆಗೆ ಗರಿಷ್ಠ ವಯಸ್ಸಿನ ಮಿತಿಯನ್ನು ಕೇಂದ್ರವು ಸಡಿಲಿಕೆ ಮಾಡಿದೆ.
ರಕ್ಷಣಾ ಉದ್ಯೋಗಾಕಾಂಕ್ಷಿಗಳು ತಮ್ಮ ಮುಂದಿನ ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ, ನಾಲ್ಕು ವರ್ಷಗಳು ಪೂರ್ಣಗೊಂಡ ನಂತರ, ಯೋಜನೆಯ ಮೂಲಕ ನೇಮಕಗೊಂಡ ಸೈನಿಕರಲ್ಲಿ ಕೇವಲ 25 ಪ್ರತಿಶತದಷ್ಟು ಸೈನಿಕರನ್ನು ಮಾತ್ರ ಪೂರ್ಣಾವಧಿಗೆ ಸೇವೆ ಸಲ್ಲಿಸಲು ಉಳಿಸಿಕೊಳ್ಳಲಾಗುತ್ತದೆ. ಅಗ್ನಿಪಥ್ ಯೋಜನೆಯ ಮೂಲಕ ನೇಮಕಗೊಂಡ ಯುವಕರು ಮತ್ತು ಸೇವೆ ಮುಂದುವರಿಸದವರಿಗೆ ಪಿಂಚಣಿ ಪ್ರಯೋಜನಗಳಿರುವುದಿಲ್ಲ, ಆದರೆ ಪ್ಯಾಕೇಜ್‌ ನೀಡಲಾಗುತ್ತದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement