ವಿಶ್ವದ ಜನಸಂಖ್ಯೆಯ ಬಹುಪಾಲು ಜನರು ಇಂದು ಕೊರೊನಾ ಸೋಂಕಿನ ಭಯದಿಂದ ಬಳಲುತ್ತಿದ್ದಾರೆ . ಈ ಕೊರೋನಾ ಕಾಲದಲ್ಲಿ ನಮ್ಮ ಅರಿವಿಗೆ ಬಂದ ಸತ್ಯ : ಎಲ್ಲರೂ ಸುರಕ್ಷಿತರಾಗಿರದ ಹೊರತು ಯಾರೂ ಸುರಕ್ಷಿತರಲ್ಲ ಎಂಬುದು . ಜಗತ್ತಿನ 780 ಕೋಟಿ ಜನರಲ್ಲಿ 80 ಕೋಟಿ ಮಕ್ಕಳನ್ನು ಹೊರತುಪಡಿಸಿ , 700 ಕೋಟಿ ಜನಕ್ಕೆ ಏಕಕಾಲದಲ್ಲಿ ಲಸಿಕೆ ಹಾಕುವುದರಿಂದ ಮಾತ್ರವೇ ಜಗತ್ತನ್ನು ಕೊರೋನಾ ಮುಕ್ತಗೊಳಿಸಬಹುದು . ಇದಕ್ಕೆ 1400 ಕೋಟಿ ಡೋಸ್ ಲಸಿಕೆ ಅಗತ್ಯವಿದೆ .
ಪ್ರಸ್ತುತ ಪೇಟೆಂಟ್ ಹೊಂದಿರುವ 8-10 ದೊಡ್ಡ ಕಂಪನಿಗಳು ಮಾತ್ರ ಈ ಸೋಂಕಿನ ಚಿಕಿತ್ಸೆ ಮತ್ತು ತಡೆಗಟ್ಟುವಿಕೆಗಾಗಿ ಇರುವ ಔಷಧಿಗಳು ಮತ್ತು ಲಸಿಕೆಗಳ ಮೇಲೆ ಏಕಸ್ವಾಮ್ಯದ ಹಕ್ಕುಗಳನ್ನು ಹೊಂದಿದ್ದು , ಇವಕ್ಕೆ ಈ ಪ್ರಮಾಣದ ಲಸಿಕೆ ಉತ್ಪಾದನೆ ಅಸಾಧ್ಯ. ಬೆಲೆಯೂ ಅವುಗಳು ಹೇಳಿದಷ್ಟು , ವಿಶ್ವದ ಜನಸಂಖ್ಯೆಯ ಶೇಕಡಾ ಎಂಬತ್ತರಷ್ಟು ಇರುವ ಬಡದೇಶಗಳ ಜನರಿಗೆ ಇವು ದೊರೆಯವು , ಹೀಗಾಗಿ , ಪೇಟೆಂಟ್ ಮತ್ತು ಏಕಸ್ವಾಮ್ಯದ ಹಕ್ಕುಗಳಿಂದಾಗಿ, ಬೇರೆಯವರು ಈ ಔಷಧ ಲಸಿಕೆಗಳನ್ನು ಹೆಚ್ಚು ಉತ್ಪಾದಿಸಲು ಹಾಗೂ ಜಗತ್ತಿನ ಎಲ್ಲರೂ ಇವನ್ನು ಸುಲಭವಾಗಿ ಪಡೆಯಲು ಅಸಾಧ್ಯ . ಈ ಹಕ್ಕುಗಳ ಪ್ರಕಾರ ಇನ್ನೂ 20 ವರ್ಷಗಳು ಈ ಕಂಪನಿಗಳು ಮಾತ್ರ ಲಸಿಕೆ ಹಾಗೂ ಔಷಧಗಳನ್ನು ಉತ್ಪಾದಿಸಬಹುದು . ಬೇರೆಯವರಿಗೆ ಪ್ರವೇಶವಿಲ್ಲ . ಮಾನವರ ಜೀವಿಸುವ ಹಕ್ಕು ಸಾರ್ವತ್ರಿಕವಾದ ಮೂಲಭೂತ ಹಕ್ಕು , ಕೆಲವೇ ಕಂಪನಿಗಳಿಗೆ ಪೇಟೆಂಟುಗಳಿಂದ ಅಪರಿಮಿತ ಲಾಭ ಗಳಿಸಲು ಅನಿಯಮಿತ ಹಕ್ಕುಗಳನ್ನು ನೀಡುವ ಮೂಲಕ , ಕೋಟ್ಯಂತರ ಜನರ ಜೀವಿಸುವ ಹಕ್ಕನ್ನು ರಾಜಿ – ಹೊಂದಾಣಿಕೆ ಮಾಡಲಾಗುತ್ತಿದೆ . ಹೀಗೆ ಮಾಡಲು ನಾವೆಲ್ಲ ಒಪ್ಪಬಹುದೇ ? ಈ ಲಸಿಕೆಗಳು ಮತ್ತು ಔಷಧಿಗಳನ್ನು ಅಗ್ಗವಾಗಿಸಿ , ಹಾಗೂ ವಿಶ್ವದ ಎಲ್ಲೆಡೆ ಸುಲಭವಾಗಿ ಎಲ್ಲರಿಗೂ ಸಿಗುವಂತೆ ಮಾಡಲು , ಈ ಲಸಿಕೆಗಳು ಮತ್ತು ಔಷಧಿಗಳನ್ನು ಪೇಟೆಂಟ್ ಮುಕ್ತವಾಗಿಸಿ , ತಯಾರಿಕಾ ತಂತ್ರಜ್ಞಾನವನ್ನು ವರ್ಗಾಯಿಸಲು ಭಾರತೀಯರು ತೀವ್ರವಾದ ಅಭಿಯಾನವನ್ನು ಪ್ರಾರಂಭಿಸಿದ್ದಾರೆ .
ಕೋವಿಡ್ ಚಿಕಿತ್ಸೆಗೆ ಸಂಬಂಧಿಸಿದ ಹಲವಾರು ಔಷಧಿಗಳನ್ನು ಸ್ಥಳೀಯವಾಗಿ ಉತ್ಪಾದಿಸಲಾಗುತ್ತಿದ್ದರೂ, ಸಮಸ್ಯೆಯ ತೀವ್ರತೆಯಿಂದಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಲಭ್ಯವಿರುವ ಪ್ರಮಾಣವು ಸಾಕಾಗುತ್ತಿಲ್ಲ . ಇಸ್ರೇಲ್, ಅಮೆರಿಕ , ಯುನೈಟೆಡ್ ಕಿಂಗ್ಡಮ್ ಮುಂತಾದ ಆರು ದೇಶಗಳಲ್ಲಿ ವಯಸ್ಕ ಜನಸಂಖ್ಯೆಗೆ ಸಂಪೂರ್ಣವಾಗಿ ಲಸಿಕೆ ಹಾಕಿದ್ದರಿಂದ ಅಲ್ಲೆಲ್ಲ ಕೊರೊನಾ ಬಿಕ್ಕಟ್ಟು ಬಹುತೇಕ ಮುಗಿದಿದೆ. ಆದ್ದರಿಂದ, ಭಾರತವೂ ಸೇರಿದಂತೆ ವಿಶ್ವದ ಎಲ್ಲ ದೇಶಗಳ ಇಡೀ ವಯಸ್ಕ ಜನಸಂಖ್ಯೆಗೆ ತಕ್ಷಣ ಲಸಿಕೆ ಹಾಕುವುದು ಅಗತ್ಯ . ಇದಕ್ಕಾಗಿ, ಸ್ವದೇಶಿ ಜಾಗರಣ ಮಂಚ್ ಸಾಮೂಹಿಕ ಜಾಗೃತಿ ಅಭಿಯಾನ ಪ್ರಾರಂಭಿಸಿದ್ದು , ಕೋವಿಡ್ ಲಸಿಕೆಗಳು ಮತ್ತು ಔಷಧಿಗಳನ್ನು ಪೇಟೆಂಟ್ ಮುಕ್ತವಾಗಿಸಲು ಮತ್ತು ಅವುಗಳ ತಂತ್ರಜ್ಞಾನವು ಅವನ್ನು ಉತ್ಪಾದಿಸುವ ಸಾಮರ್ಥ್ಯವಿರುವ ಎಲ್ಲ ಉದ್ಯಮಿಗಳಿಗೆ ಸಿಗುವಂತೆ ಮಾಡಲು ಕೋರಿದೆ .
ಈ ಅಭಿಯಾನವನ್ನು ‘ ಲಸಿಕೆಗಳು ಮತ್ತು ಔಷಧಿಗಳ ಸಾರ್ವತ್ರಿಕ ಸುಲಭ ಲಭ್ಯತೆ ( “ Universal Access to Vaccines and Medicines, ಯುಎವಿಎಂ ) ಎಂಬ ಹೆಸರಿನಲ್ಲಿ ಅಂದರೆ ,ದೇಶದೆಲ್ಲೆಡೆ ಮತ್ತು ವಿಶ್ವದಾದ್ಯಂತ ಲಸಿಕೆಗಳು ಮತ್ತು ಔಷಧಿಗಳ ಸಂಪೂರ್ಣ ಲಭ್ಯತೆ ಪಡೆಯಲು ಪ್ರಾರಂಭಿಸಲಾಗಿದೆ . ಈ ಪ್ರಯತ್ನದ ಅಡಿಯಲ್ಲಿ , ವೆಬಿನಾರ್ಗಳು , ಸೆಮಿನಾರ್ಗಳು , ಪ್ರದರ್ಶನಗಳು ಇತ್ಯಾದಿಗಳನ್ನು ಆಯೋಜಿಸಲಾಗುತ್ತಿದೆ ಮತ್ತು ಆನ್ಲೈನ್ ಸಹಿ ಅಭಿಯಾನ ಸೇರಿದಂತೆ ಜನಸಮುದಾಯದ ಸಂಪರ್ಕವು ನಡೆಯುತ್ತಿದೆ . ಭಾರತದಲ್ಲಿ ಕನಿಷ್ಠ 70 % ಜನಸಂಖ್ಯೆಗೆ ಲಸಿಕೆ ನೀಡಲು ಸುಮಾರು 200 ಕೋಟಿ ಡೋಸ್ ಬೇಕಾಗುತ್ತವೆ . ಇದಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಲಸಿಕೆ ಉತ್ಪಾದನೆಯ ತುರ್ತು ಅವಶ್ಯಕತೆಯಿದೆ , ಇದಕ್ಕಾಗಿ ಅಂತಾರಾಷ್ಟ್ರೀಯ ತಂತ್ರಜ್ಞಾನದ ಅಗತ್ಯವಿದೆ . ತಂತ್ರಜ್ಞಾನದ ವರ್ಗಾವಣೆ ಸುಲಭಗೊಳಿಸಲು ಪೇಟೆಂಟ್ , ವ್ಯಾಪಾರೀ ರಹಸ್ಯಗಳು ಸೇರಿದಂತೆ ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ಅಡೆತಡೆಗಳನ್ನು ನಿವಾರಿಸಲು ಸೂಕ್ತ ಕ್ರಮಗಳು ಬೇಕಾಗಿವೆ ,
ಲಸಿಕೆ ಮತ್ತು ಔಷಧಿಗಳ ಸಾರ್ವತ್ರಿಕ ಲಭ್ಯತೆ ‘ ( ಯುಎವಿಎಂ ) ಅಭಿಯಾನದ ಪರವಾಗಿ ವಿವಿಧ ಸಾಮಾಜಿಕ , ಸಾಂಸ್ಕೃತಿಕ ಮತ್ತು ಇತರ ಸಂಘಟನೆಗಳು , ಶಿಕ್ಷಣ ಸಂಸ್ಥೆಗಳು , ಪ್ರಬುದ್ಧ ಜನರು , ಶಿಕ್ಷಣ ತಜ್ಞರು . ಭಾರತ ಮತ್ತು ವಿದೇಶಗಳ ನ್ಯಾಯಾಧೀಶರಿಂದ ಸಹಕಾರವನ್ನು ಕೋರಲಾಗಿದೆ. ಈ ನಿಟ್ಟಿನಲ್ಲಿ 28 ಮೇ 2021 ರಂದು ಕೆಲವು ವಿಶ್ವವಿದ್ಯಾಲಯಗಳು ಮತ್ತು ಭಾರತೀಯ ವಿಶ್ವವಿದ್ಯಾಲಯಗಳ ಸಂಘವು ಒಂದು ಅಂತಾರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿತ್ತು. ಸ್ವದೇಶಿ ಜಾಗರಣ ಮಂಚದ ಈ ಯುಎವಿಎಂ ಅಭಿಯಾನವು ವಿಶ್ವದ ಎಲ್ಲ ಸರ್ಕಾರಗಳು ಮತ್ತು ವಿಶ್ವ ವ್ಯಾಪಾರ ಸಂಸ್ಥೆ ( ಡಬ್ಲ್ಯು ಟಿಓ ) ಯನ್ನು ಈ ಪ್ರಸ್ತಾಪವನ್ನು ಒಪ್ಪಿಕೊಳ್ಳಬೇಕೆಂದು ಬಲವಾಗಿ ಒತ್ತಾಯಿಸುತ್ತದೆ :
* ಔಷದಿ ಲಸಿಕೆಗಳ ಉತ್ಪಾದನೆಯನ್ನು ಹೆಚ್ಚಿಸುವ ಸಲುವಾಗಿ ಎಲ್ಲಾ ಸಂಭಾವ್ಯ ತಯಾರಕರಿಗೆ ತಂತ್ರಜ್ಞಾನ ವರ್ಗಾವಣೆ , ಕಚ್ಚಾ ವಸ್ತುಗಳ ಲಭ್ಯತೆ , ವ್ಯಾಪಾರ ರಹಸ್ಯಗಳು ಸೇರಿದಂತೆ ಎಲ್ಲವೂ ಒದಗುವುದನ್ನು ಖಾತ್ರಿಪಡಿಸಬೇಕು . ಮಾನವೀಯತೆಯ ಹಿತದೃಷ್ಟಿಯಿಂದ , ಈ ಪ್ರಸ್ತಾಪವನ್ನು ವಿರೋಧಿಸುವ ದೇಶಗಳು, ಕಂಪನಿಗಳು, ವ್ಯಕ್ತಿಗಳ ಗುಂಪುಗಳನ್ನು ಹಾಗೆ ವಿರೋಧಿಸುವುದನ್ನು ಯಾವುದೇ ವಿಳಂಬವಿಲ್ಲದೆ ನಿಲ್ಲಿಸಬೇಕೆಂದು ನಾವು ಬಲವಾಗಿ ಒತ್ತಾಯಿಸುತ್ತೇವೆ .
* ರೆಮ್ಡೆಸಿವಿರ್ , ಫವಿರಾಸ್ಕರ್ , ಟೊಸಿಲುಜುಮಾಬ್ ಮತ್ತು ಮೊಲ್ಕುಪಿರಾಮಿರ್ ನಂತಹ ಹೊಸ ಔಷಧಿಗಳ ಹೇರಳ ಉತ್ಪಾದನೆಯನ್ನು ಖಚಿತಪಡಿಸಬೇಕು .
* ಜಾಗತಿಕ ಮಟ್ಟದಲ್ಲಿ ಲಸಿಕೆಗಳು ಮತ್ತು ಔಷಧಿಗಳ ಸಮರ್ಪಕ ಉತ್ಪಾದನೆಗೆ ಅವಕಾಶ ಒದಗಿಸಿ. ಬೆಲೆಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬೇಕು .
* ಟ್ರಸ್ಟ್ ( ಟಿಆರ್ಐಪಿಪಿಸ್ ) ಮನ್ನಾ ಉದ್ದೇಶವನ್ನು ಸಾಧಿಸಲು ಡಬ್ಲ್ಯುಟಿಒ , ಜಿ -7 , ಜಿ -20 ಮತ್ತು ಇತರ ಜಾಗತಿಕ ವೇದಿಕೆಗಳ ಮೂಲಕ ರಾಜತಾಂತ್ರಿಕ ಪ್ರಯತ್ನಗಳನ್ನು ವೇಗಗೊಳಿಸಿ ಭಾರತ ಮತ್ತು ಇನ್ನೂ 20 ದೇಶಗಳಿಂದ ಡಿಜಿಟಲ್ ಸಿಗೋಚರ್ ಅಭಿಯಾನದಲ್ಲಿ ಈವರೆಗೆ ಸುಮಾರು ಏಳು ಲಕ್ಷ ಜನರು ಅರ್ಜಿಗೆ ಸಹಿ ಹಾಕಿದ್ದಾರೆ.
ಮತ್ತೊಂದು ಅರ್ಜಿಯಲ್ಲಿ ಭಾರತ ಮತ್ತು ವಿದೇಶಗಳ 1600 ಉನ್ನತ ಶಿಕ್ಷಣ ತಜ್ಞರು, ಪ್ರಬುದ್ಧ ನಾಗರಿಕರು ಈ ಬೇಡಿಕೆಗೆ ಸಹಿ ಹಾಕಿದ್ದು, ಇಪ್ಪತ್ತೈದು ಲಕ್ಷ ಜನರ ಸಹಿ ಸಂಗ್ರಹಿಸಿ , ವಿಶ್ವ ವ್ಯಾಪಾರ ಸಂಸ್ಥೆಗೆ ನೀಡಲಿದ್ದಾರೆ.
1. ವಿಶ್ವ ವ್ಯಾಪಾರ ಸಂಸ್ಥೆ ( ಡಬ್ಲ್ಯು ಟಿಓ ) ಯು ತನ್ನ ಬೌದ್ಧಿಕ ಆಸ್ತಿ ಹಕ್ಕುಗಳ ನಿಬಂಧನೆಗಳನ್ನು ಸಡಿಲಿಸಬೇಕು.
2..ಜಾಗತಿಕ ಔಷಧ ತಯಾರಕರು ಮತ್ತು ಲಸಿಕೆ ತಯಾರಕ ಕಂಪನಿಗಳು ಮಾನವ ಜನಾಂಗದ ಒಳಿತಿಗಾಗಿ ತಂತ್ರಜ್ಞಾನ ವರ್ಗಾವಣೆ ಸೇರಿದಂತೆ ಪೇಟೆಂಟ್ ಮುಕ್ತ ಹಕ್ಕುಗಳನ್ನು ಸ್ವಯಂಪ್ರೇರಣೆಯಿಂದ ಇತರ ತಯಾರಕರಿಗೆ ನೀಡಬೇಕು.
3. ಪೇಟೆಂಟ್ ಹೊಂದಿರುವವರನ್ನು ಹೊರತುಪಡಿಸಿ ಉಳಿದೆಲ್ಲ ಸಮರ್ಥ ಔಷಧ ತಯಾರಕರುಗಳು, ಲಸಿಕೆಗಳು ಮತ್ತು ಔಷಧಿಗಳನ್ನು ಹೆಚ್ಚಾಗಿ ಉತ್ಪಾದಿಸಲು ಅವನ್ನು ತಯಾರಿಸುವ ಹಕ್ಕು , ಅಗತ್ಯ ತಂತ್ರಜ್ಞಾನ ಮತ್ತು ಉತ್ಪಾದನಾ ಸಾಮಗ್ರಿಗಳ ಲಭ್ಯತೆಗಾಗಿ ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು . ಅಂತಹ ತಯಾರಕರಿಗೆ ಪ್ರೋತ್ಸಾಹ ನೀಡಬೇಕು .
4.ಕೊರೋನಾ ವಿರುದ್ಧ ಹೋರಾಡಲು ಮತ್ತು ಲಸಿಕೆಗಳು ಮತ್ತು ಔಷಧಿಗಳ ಜಾಗತಿಕ ಲಭ್ಯತೆ ಖಚಿತಪಡಿಸಿಕೊಳ್ಳಲು ಎಲ್ಲಾ ದೇಶಭಕ್ತರು , ಸಂಬಂಧಪಟ್ಟ ವ್ಯಕ್ತಿಗಳು ಮತ್ತು ಸಂಸ್ಥೆಗಳು ಮುಂದೆ ಬಂದು ಈ ಪ್ರಯತ್ನಗಳಿಗೆ ಸೇರಿಕೊಳ್ಳಬೇಕು .
ಕಳೆದ ವರ್ಷ ಅಕ್ಟೋಬರ್ನಲ್ಲಿಯೇ ಭಾರತ ಸರ್ಕಾರ ಮತ್ತು ದಕ್ಷಿಣ ಆಫ್ರಿಕಾಗಳು ವಿಶ್ವ ವ್ಯಾಪಾರ ಸಂಸ್ಥೆಯ ಮುಂದೆ ಕೊರೊನಾ ಲಸಿಕೆಗಳು ಮತ್ತು ಔಷಧಿಗಳನ್ನು ಪೇಟೆಂಟ್ ರಹಿತಗೊಳಿಸಿ , ಅವುಗಳ ಉತ್ಪಾದನೆಯನ್ನು ಸುಗಮಗೊಳಿಸುವ ಟಿ.ಆರ್.ಐ.ಪಿ.ಎಸ್ ಒಪ್ಪಂದದಿಂದ ಮನ್ನಾ ಕೋರಿದ ಪ್ರಸ್ತಾಪವನ್ನು ಇಟ್ಟಿವೆ. ಈವರೆಗೆ ಇದನ್ನು 120 ದೇಶಗಳು ಬೆಂಬಲಿಸಿವೆ. ಸ್ವದೇಶಿ ಜಾಗರಣ ಮಂಚ ಈ ಪ್ರಸ್ತಾಪವನ್ನು ಬೆಂಬಲಿಸಿ , ಒಂದು ಜನಾಂದೋಲನವನ್ನಾಗಿ ಮಾಡಿದೆ . ಈ ಆನ್ ಲೈನ್ ಮನವಿ ಪತ್ರಕ್ಕೆ ಹೆಚ್ಚು ಜನ ಸೇರಬೇಕು. ಲಿಂಕ್ : https://joinswadeshi.com/form2/
-ಪ್ರೊ. ಬಿ.ಎಂ , ಕುಮಾರಸ್ವಾಮಿ , ರಾಷ್ಟ್ರೀಯ ಮುಖಂಡರು , ಸ್ವದೇಶಿ ಜಾಗರಣ ಮಂಚ್
– ಎನ್.ಆರ್ . ಮಂಜುನಾಥ , ಕ್ಷೇತ್ರೀಯ ಸಂಯೋಜಕರು , ಕರ್ನಾಟಕ , ತೆಲಂಗಾಣ ಮತ್ತು ಆಂಧ್ರ , ಸ್ವದೇಶಿ ಜಾಗರಣ ಮಂಚ್ –
ಕೆ . ಜಗದೀಶ್ , ಕ್ಷೇತ್ರೀಯ ಸಂಘಟಕರು , ಕರ್ನಾಟಕ , ತೆಲಂಗಾಣ ಮತ್ತು ಆಂಧ್ರ , ಸ್ವದೇಶಿ ಜಾಗರಣ ಮಂಚ್ ಜನರು ಅದರ ಲಿಂಕ್ –
ವಿಜಯಕೃಷ್ಣ , ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕರು , ಸ್ವದೇಶಿ ಜಾಗರಣ ಮಂಚ್
– ಪಾಟೀಲ್ , ಕರ್ನಾಟಕ ಉತ್ತರ ಪ್ರಾಂತ ಸಂಯೋಜಕರು , ಸ್ವದೇಶಿ ಜಾಗರಣ ಮಂಚ್ ಕರ್ನಾಟಕ


ನಿಮ್ಮ ಕಾಮೆಂಟ್ ಬರೆಯಿರಿ