ವಿದ್ಯಾರ್ಥಿಗಳ ಪಾಸಿಂಗ್‌ ಅಂಕ ಇಳಿಕೆ ಬೇಡ : ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ಸಭಾಪತಿ ಹೊರಟ್ಟಿ ಪತ್ರ

ಬೆಂಗಳೂರು: ಶಾಲಾ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಇದ್ದ ಕನಿಷ್ಠ ಅಂಕಗಳನ್ನು 35ರಿಂದ 33ಕ್ಕೆ ಇಳಿಸಲು ಸರ್ಕಾರ ಮುಂದಾಗಿರುವುದಕ್ಕೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ (Basavaraj horatti) ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದಿರುವ ಬಸವರಾಜ ಹೊರಟ್ಟಿಯವರು 33 ಅಂಕದ ಬದಲಿಗೆ 35 ಅಂಕಗಳನ್ನೇ ನಿಗದಿಪಡಿಸಬೇಕು. ವಿದ್ಯಾರ್ಥಿಗಳ ಭವಿಷ್ಯತ್ತಿನ ದೃಷ್ಟಿಯಿಂದ ಹಿಂದಿದ್ದ ನಿಯಮವೇ ಉತ್ತಮ ಎಂದು ಹೇಳಿದ್ದಾರೆ. ಹಾಗೂ ಪ್ರೌಢಶಾಲೆಗಳು, ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುವುದರಿಂದ ನಾನಾ ರೀತಿಯ ವಿಚಾರಗಳನ್ನು ಕಲಿಯುತ್ತಾರೆ. ಅಲ್ಲಿ ಅವರ ಅಧ್ಯಯಶೀಲತೆ, ಕಲಿಕಾ ಕೌಶಲ್ಯ, ಏಕಾಗ್ರತೆ, ಧೈರ್ಯ, ಜ್ಞಾಪಕ ಶಕ್ತಿ, ತಿಳಿದುಕೊಂಡಿರುವ ವಿಷಯಗಳನ್ನು ಸ್ಫುಟವಾಗಿ – ಪರಿಣಾಮಕಾರಿಯಾಗಿ ಬರೆಯುವುದು – ಇಂತಹ ಎಲ್ಲ ವಿಷಯಗಳು ವಿದ್ಯಾರ್ಥಿಗಳ ಮುಂದಿನ ಜೀವನಕ್ಕೆ ಉತ್ತಮ ಕೊಡುಗೆ ನೀಡುತ್ತದೆ. ಹೀಗಿರುವಾಗ ನಾವು ಅಂಕಗಳನ್ನು ಇಳಿಕೆ ಮಾಡಿ ಅವರಿಗೆ ಪರೀಕ್ಷೆಯೆಂದರೆ ಅಸಡ್ಡೆ ಎಂಬ ಭಾವನೆ ಬರುವಂತೆ ಮಾಡಬಾರದು ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಕುಮಟಾ : ಶಾಲೆಯ ಪಕ್ಕವೇ ಭೂ ಕುಸಿತ ; ಕಟ್ಟಡಕ್ಕೆ ಬಂದು ಅಪ್ಪಳಿಸಿದ ಬೃಹತ್‌ ಬಂಡೆ

ಪಾಸಿಂಗ್ ಅಂಕಗಳು ಹೆಚ್ಚಿದ್ದಾಗ ಅವರು ಹೆಚ್ಚೆಚ್ಚು ಏಕಾಗ್ರತೆಯಿಂದ ಕಲಿತು ಶ್ರದ್ಧೆಯಿಂದ ಬರುತ್ತಾರೆ. ಪರೀಕ್ಷೆಗಳ ಬಗ್ಗೆ ಒಂದು ಶಿಸ್ತು ಮೂಡುತ್ತದೆ. ಹೀಗಾಗಿ ಅಂಕಗಳನ್ನು ಇಳಿಕೆ ಮಾಡಬಾರದು ಎಂದು ಹೊರಟ್ಟಿಯವರು ಪತ್ರದಲ್ಲಿ ಕೋರಿದ್ದಾರೆ.
ಹಿಂದೆ ನಿಗದಿ ಮಾಡಿರುವ ಶೇ. 35 ಅಂಕಗಳು ಸಮಂಜಸವಾಗಿತ್ತು. 35 ಅಂಕ ದೀರ್ಘಕಾಲದಿಂದ ಸಾಬೀತಾದ ಮಾನದಂಡವಾಗಿದೆ. ಇಂತಹ ಮಾನದಂಡವನ್ನು ಎಕಾಏಕಿ 33 ಅಂಕಗಳಿಗೆ ಕಡಿತಗೊಳಿಸುವಂತಹ ನಿರ್ಧಾರವು ಯಾವ ಕೋನದಿಂದಲೂ ಸರಿಯಲ್ಲ. ಈ ರೀತಿ ನಿರ್ಧಾರಗಳಿಂದ ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಮನೋಭಾವಕ್ಕೆ ಪೆಟ್ಟು ಬೀಳುತ್ತದೆ. ಈ ನಿರ್ಧಾರ ಕೈಬಿಟ್ಟು ಈ ಮುಂಚೆ ಇದ್ದ ಹಾಗೆ ಕನಿಷ್ಠ 35 ಅಂಕ ನಿಗದಿ ಮಾಡಿ ಎಂದು ಪತ್ರದಲ್ಲಿ ಬರೆದಿದ್ದಾರೆ.

ಹುದ್ದೆ ಭರ್ತಿ ಮಾಡಿ
“ಪ್ರೌಢಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವಂತೆ ಪತ್ರದಲ್ಲಿ ಹೊರಟ್ಟಿ ಆಗ್ರಹಿಸಿದ್ದಾರೆ. ಹಿಂದೆ ನಾನು ಶಿಕ್ಷಣ ಸಚಿವನಾಗಿದ್ದಾಗ ಶಿಕ್ಷಕರ ನೇಮಕಾತಿ ಮಾಡಿದ್ದೆ. ಈಗ ಸಾವಿರಾರು ಸಂಖ್ಯೆಯಲ್ಲಿ ಶಿಕ್ಷಕರ ನೇಮಕಾತಿ ಆಗಬೇಕಿದೆ. ವಿದ್ಯಾರ್ಥಿಗ ಸಂಖ್ಯೆ ಹೆಚ್ಚಿರುವುದರಿಂದ ಅದಕ್ಕೆ ಸೂಕ್ತವಾಗ ಸಂಖ್ಯೆಯಲ್ಲಿ ಶಿಕ್ಷಕರು ಬೇಕು. ಹಾಗಾಗಿ, ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಶೀಘ್ರವೇ ಆರಂಭಿಸಬೇಕು ಎಂದು ಹೊರಟ್ಟಿಯವರು ಮಧು ಬಂಗಾರಪ್ಪ ಅವರನ್ನು ಒತ್ತಾಯಿಸಿದ್ದಾರೆ

ಪ್ರಮುಖ ಸುದ್ದಿ :-   ಅಪ್ರಾಪ್ತೆಯ ಮೇಲೆ ಅತ್ಯಾಚಾರ; ಜನಿಸಿದ ಮಗು ಮಾರಾಟ ಆರೋಪ, ಆಕೆ ಮತ್ತೆ ಗರ್ಭಿಣಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement