ನ್ಯಾಯಾಲಯದಲ್ಲಿ ರಾಜಕೀಯ ಭಾಷಣ ಮಾಡಿದ್ದಕ್ಕೆ ಎಎಪಿಯ ಸಂಜಯ್ ಸಿಂಗ್ ಗೆ ಎಚ್ಚರಿಕೆ ನೀಡಿದ ಕೋರ್ಟ್‌

ನವದೆಹಲಿ: ದೆಹಲಿಯ ರೂಸ್ ಅವೆನ್ಯೂ ಕೋರ್ಟ್ ಶುಕ್ರವಾರ ಎಎಪಿ ಸಂಸದ ಸಂಜಯ ಸಿಂಗ್ ಅವರಿಗೆ “ರಾಜಕೀಯ ಭಾಷಣ” ನೀಡದಂತೆ ಎಚ್ಚರಿಕೆ ನೀಡಿದೆ. ದೆಹಲಿ ಮದ್ಯ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ನ್ಯಾಯಾಲಯಕ್ಕೆ ಹಾಜರುಪಡಿಸಿದ ರಾಜ್ಯಸಭಾ ಸದಸ್ಯ ಸಂಜಯ ಸಿಂಗ್‌ ಅವರು ಕೈಗಾರಿಕೋದ್ಯಮಿ ಗೌತಮ ಅದಾನಿ ಅವರ ಹೆಸರನ್ನು ನ್ಯಾಯಾಲಯದಲ್ಲಿ ಪ್ರಸ್ತಾಪಿಸಿದ್ದರು.
“ಸಂಬಂಧವಿಲ್ಲದ ವಿಷಯವನ್ನು” ಪ್ರಸ್ತಾಪಿಸಬೇಡಿ ಎಂದು ಹೇಳಿದ ನ್ಯಾಯಾಲಯ, ಅಂತಹ ಭಾಷಣಗಳನ್ನು ಮಾಡಿದರೆ, ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಪ್ರಕರಣವನ್ನು ಆಲಿಸುವುದಾಗಿ ಹೇಳಿದೆ.
ಅದಾನಿ ವಿರುದ್ಧದ ತನ್ನ ದೂರಿನ ಬಗ್ಗೆ ಜಾರಿ ನಿರ್ದೇಶನಾಲಯ(ಇ.ಡಿ.) ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಂಜಯ ಸಿಂಗ್ ನ್ಯಾಯಾಲಯದ ಮುಂದೆ ಆರೋಪಿಸಿದರು. ಸಂಬಂಧವಿಲ್ಲದ ವಿಷಯ. ನೀವು ಅದಾನಿ ಮತ್ತು ಮೋದಿ ಬಗ್ಗೆ ಭಾಷಣ ಮಾಡಲು ಬಯಸಿದರೆ, ನಾನು ಇನ್ನು ಮುಂದೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಆಲಿಸುತ್ತೇನೆ” ಎಂದು ನ್ಯಾಯಾಧೀಶರು ಹೇಳಿದರು.

ವಿಶೇಷ ನ್ಯಾಯಾಧೀಶರಾದ ಎಂ.ಕೆ.ನಾಗ್ಪಾಲ ಅವರು ಸಂಜಯ ಸಿಂಗ್ ಅವರನ್ನು ಅಕ್ಟೋಬರ್ 27ರ ವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದರು.ಈ ಹಿಂದೆ ನೀಡಲಾದ ಅವರ ಕಸ್ಟಡಿ ವಿಚಾರಣೆಯ ಅವಧಿ ಮುಗಿದ ನಂತರ ಇ.ಡಿ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿತು.
ಸಂಜಯ ಸಿಂಗ್ ಅವರ ವಕೀಲರು ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಮಾಜ ಸುಧಾರಕರು ಬರೆದ 16 ಪುಸ್ತಕಗಳನ್ನು ಅನುಮತಿಸುವಂತೆ ಕೋರಿ ನ್ಯಾಯಾಲಯದ ಮುಂದೆ ಮನವಿ ಸಲ್ಲಿಸಿದರು. ಜೈಲು ನಿಯಮಗಳ ಪ್ರಕಾರ ಪುಸ್ತಕಗಳು ಮತ್ತು ಔಷಧಿಗಳನ್ನು ಕೊಂಡೊಯ್ಯಲು ನ್ಯಾಯಾಲಯ ಅವರಿಗೆ ಅನುಮತಿ ನೀಡಿದೆ.
ವರದಿ ಪ್ರಕಾರ, ಸಂಜಯ ಸಿಂಗ್ ತನ್ನ ವಿಚಾರಣೆಯ ಸಮಯದಲ್ಲಿ, ಇ.ಡಿ. “ಗಂಭೀರವಲ್ಲದ ಮತ್ತು ಸಂಬಂಧವಿಲ್ಲದ ಪ್ರಶ್ನೆಗಳನ್ನು” ಕೇಳಿದೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   'ಐಸ್‌ಕ್ರೀಂ ಮ್ಯಾನ್‌' ಖ್ಯಾತಿಯ ನ್ಯಾಚುರಲ್ಸ್ ಐಸ್ ಕ್ರೀಂ ಸಂಸ್ಥಾಪಕ ರಘುನಂದನ ಕಾಮತ್ ನಿಧನ

ನ್ಯಾಯಾಲಯಕ್ಕೆ ಹಾಜರುಪಡಿಸುವ ಮುನ್ನ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಮೋದಿ ಭಾರತದ ಪ್ರಧಾನಿಯಲ್ಲ, ಅದಾನಿಯ ಪ್ರಧಾನಿ. ಅದಾನಿ ಹಗರಣದ ತನಿಖೆ ಯಾವಾಗ” ಎಂದು ಅವರು ಪೊಲೀಸರಿಂದ ದೂರವಾಗುತ್ತಿರುವಾಗ ಕ್ಯಾಮರಾದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದರು.
ಈಗ ಹಿಂಪಡೆದಿರುವ ದೆಹಲಿ ಅಬಕಾರಿ ನೀತಿಯ ಅನುಷ್ಠಾನದಲ್ಲಿ ಸಂಜಯ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಹೇಳಿಕೊಂಡಿದೆ.
ಭ್ರಷ್ಟಾಚಾರದ ಆರೋಪಗಳ ಕುರಿತು ಸಿಬಿಐ ತನಿಖೆಗೆ ಎಲ್ ಜಿ ಅನಿಲ ಸಕ್ಸೇನಾ ಆದೇಶಿಸಿದ ನಂತರ ದೆಹಲಿಯ ಎಎಪಿ ಸರ್ಕಾರವು ಮದ್ಯ ನೀತಿಯನ್ನು ಹಿಂತೆಗೆದುಕೊಂಡಿತು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement