ಬೆಂಗಳೂರು : ಮೇ 8ರಂದು ಭಾರತೀಯ ಸಾಂಸ್ಕೃತಿಕತೆ, ನಾಟ್ಯಶಾಸ್ತ್ರ ಮತ್ತು ಯಕ್ಷಗಾನ ಕುರಿತು ಮಾತುಕತೆ-ಸಂವಾದ

ಬೆಂಗಳೂರು : ಅಜಿಂ ಪ್ರೇಮಜೀ ವಿಶ್ವ ವಿದ್ಯಾಲಯದಿಂದ ಭಾರತೀಯ ಸಾಂಸ್ಕೃತಿಕತೆ,  ನಾಟ್ಯಶಾಸ್ತ್ರ ಹಾಗೂ ಯಕ್ಷಗಾನ ಈ ಕರಾವಳಿ ಪರಂಪರೆಯ ದೃಶ್ಯ ಕಾವ್ಯದ ಕುರಿತು  ಮಾತು-ಸಂವಾದ ಕಾರ್ಯಕ್ರಮ ಬೆಂಗಳೂರಿನ ಕೋರಮಂಗಲದ ಇಂಡಿಯನ್‌ ಹೆರಿಟೇಜ್‌ ಅಕಾಡೆಮಿಯಲ್ಲಿ ಮೇ 8ರಂದು ಸಂಜೆ 6:30ರಿಂದ ನಡೆಯಲಿದೆ.
ದಶಕರೂಪಕಗಳ ದಶಾವತಾರಗಳು-ಯಕ್ಷಗಾನ ಸಂಶೋಧನಾ ಕೃತಿಯ ಲೇಖಕ ಹಾಗೂ ಹಿರಿಯ ಪತ್ರಕರ್ತ ಅಶೋಕ ಹಾಸ್ಯಗಾರ ಅವರು  ಮಾತು-ಸಂವಾದ ನಡೆಸಿಕೊಡಲಿದ್ದಾರೆ. ಮೊದಲು ಈ ಬಗ್ಗೆ ಅಶೋಕ ಹಾಸ್ಯಗಾರ  ಮಾತನಾಡಲಿದ್ದಾರೆ. ನಂತರ ಸಂವಾದ ನಡೆಯಲಿದೆ. ಪ್ರವೇಶ ಉಚಿತವಾಗಿದ್ದು, ಆದರೆ ನೋಂದಣಿ ಮಾಡುವುದು ಅಗತ್ಯ ಎಂದು ತಿಳಿಸಲಾಗಿದೆ.

5 / 5. 1

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಅಪ್ರಾಪ್ತೆಯ ಮೇಲೆ ಅತ್ಯಾಚಾರ; ಜನಿಸಿದ ಮಗು ಮಾರಾಟ ಆರೋಪ, ಆಕೆ ಮತ್ತೆ ಗರ್ಭಿಣಿ

ನಿಮ್ಮ ಕಾಮೆಂಟ್ ಬರೆಯಿರಿ

advertisement