ರಾಯ್ಪುರ: ಎನ್‌ಕೌಂಟರ್‌ನಲ್ಲಿ ಇಬ್ಬರು ನಕ್ಸಲರು ಹತ

ರಾಯ್ಪುರ: ಛತ್ತೀಸ್‌ಗಡದ ಸುಕ್ಮಾ ಜಿಲ್ಲೆಯಲ್ಲಿ ಮಂಗಳವಾರ ಭದ್ರತಾಪಡೆ ಜತೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಮಾವೋವಾದಿಗಳು ಹತರಾಗಿದ್ದಾರೆ.
ಮೃತ ನಕ್ಸಲರ ಬಳಿಯಿದ್ದ ಶಸ್ತ್ರಾಸ್ತ್ರಗಳು, ಸ್ಫೋಟಕಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.ಸುಕ್ಮಾ ಜಿಲ್ಲೆಯ ಕನೈಗುಡ ಗ್ರಾಮದ ಗೊಂಪಾಡ್ ಬಳಿ ಅರಣ್ಯ ಪ್ರದೇಶದಲ್ಲಿ ನಕ್ಸಲರು ಅವಿತಿಟ್ಟುಕೊಂಡಿರುವ ಬಗ್ಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಸಿಆರ್‌ಪಿಎಫ್, ಡಿಆರ್‌ಐ ಮತ್ತು ಕೋಬ್ರಾ ಜಂಟಿ ಪಡೆಗಳು ಶೋಧ ನಡೆಸುತ್ತಿದ್ದಾಗ ಮಾವೋವಾದಿಗಳು ಅವರತ್ತ ಗುಂಡು ಹಾರಿಸಿದರು. ಯೋಧರು ಮತ್ತು ನಕ್ಸಲರ ಜೊತೆ ಕೆಲಕಾಲ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಹತರಾದರು.
ಎನ್‌ಕೌಂಟರ್ ವೇಳೆ ಇನ್ನೂ ಕೆಲವು ನಕ್ಸಲರು ಗಾಯಗೊಂಡಿರುವ ಸಾಧ್ಯತೆ ಇದ್ದು, ಆ ಪ್ರದೇಶದಲ್ಲಿ ತೀವ್ರ ಶೋಧ ಮುಂದುವರಿದಿದೆ ಎಂದು ಸುಕ್ಮಾ ಪೊಲೀಸ್ ವರಿಷ್ಠಾಧಿಕಾರಿ ಸುನಿಲ್ ಕುಮಾರ್ ತಿಳಿಸಿದ್ದಾರೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಚಂಡಮಾರುತ ಸಾಧ್ಯತೆ ; ಮೂರು ರಾಜ್ಯಗಳಿಗೆ ಭಾರೀ ಗಾಳಿಮಳೆಯ ಎಚ್ಚರಿಕೆ

ನಿಮ್ಮ ಕಾಮೆಂಟ್ ಬರೆಯಿರಿ

advertisement