ನವದೆಹಲಿ: ಇಂದು, ಸೋಮವಾರ ಬೆಳಗ್ಗೆ ನಿಧನರಾದ ಹಿರಿಯ ರಾಜಕಾರಣಿ ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರ ನೆನಪುಗಳನ್ನು ಪ್ರಧಾನಿ ಮೋದಿ ಅವರು ಗುಜರಾತ್‌ನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಹಂಚಿಕೊಂಡಿದ್ದಾರೆ.
ಮುಲಾಯಂ ಸಿಂಗ್ ಅವರ ನಿಧನವು ದೇಶಕ್ಕೆ “ದೊಡ್ಡ ನಷ್ಟ” ಎಂದು ಬಣ್ಣಿಸಿದ ಪ್ರಧಾನಿ ಮೋದಿ, ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಹೆಚ್ಚಾಗಿ ಬಿಜೆಪಿ ಪ್ರತಿಸ್ಪರ್ಧಿಯಾಗಿದ್ದ ಮುಲಾಯಂ ಸಿಂಗ್ ಅವರೊಂದಿಗೆ ವಿಶೇಷ ಬಾಂಧವ್ಯವನ್ನು ಹಂಚಿಕೊಂಡಿರುವುದಾಗಿ ಪ್ರಧಾನಿ ಮೋದಿ ಹೇಳಿದರು.
ಪ್ರಧಾನಿ ಮೋದಿ ಮತ್ತು ಮುಲಾಯಂ ಸಿಂಗ್ ಇಬ್ಬರೂ ಕೆಲವು ವರ್ಷಗಳ ಕಾಲ ಒಂದೇ ಸಮಯದಲ್ಲಿ ಕ್ರಮವಾಗಿ ಗುಜರಾತ್ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾಗಿದ್ದರು. ನಾವಿಬ್ಬರೂ ಮುಖ್ಯಮಂತ್ರಿಗಳಾಗಿದ್ದಾಗ, ನಾವು ಒಬ್ಬರಿಗೊಬ್ಬರು ಸಾಕಷ್ಟು ಬಾಂಧವ್ಯವನ್ನು ಹೊಂದಿದ್ದೆವು ಎಂದು ಭರೂಚ್‌ನಲ್ಲಿ ನಡೆದ ದೊಡ್ಡ ರ್ಯಾಲಿಯನ್ನು ಉದ್ದೇಶಿಸಿ ಪ್ರಧಾನಿ ಮೋದಿ ಹೇಳಿದರು.
ನಾನು 2014 ರಲ್ಲಿ ಪ್ರಧಾನಿಯಾದಾಗ, ಆಶೀರ್ವಾದ ಪಡೆಯಲು” ಎಲ್ಲ ಪಕ್ಷಗಳ ನಾಯಕರ ಜೊತೆಯೂ ಮಾತನಾಡಿದ್ದೆ, ಅವರಲ್ಲಿ ಸಮಾಜವಾದಿ ಪಕ್ಷದ ಸಂಸ್ಥಾಪಕರೂ ಒಬ್ಬರು ಎಮದು ಮೋದಿ ನೆನಪಿಸಿಕೊಂಡರು. ಮುಲಾಯಂ ಸಿಂಗ್ ಅವರ ಆಶೀರ್ವಾದ ಮತ್ತು ಸಲಹೆಯ ಮಾತುಗಳನ್ನು ನಾನು ನೆನಪಿಸಿಕೊಳ್ಳುತ್ತೇನೆ, ಇದು ನನಗೆ ವಿಶೇಷವಾಗಿದೆ ಎಂದು ಪ್ರಧಾನಿ ಹೇಳಿದರು.
2019 ರಲ್ಲಿ ಸಂಸತ್ತಿನಲ್ಲಿ ಪ್ರಧಾನಿ ಮೋದಿ ಮತ್ತೆ ಅಧಿಕಾರಕ್ಕೆ ಬರುತ್ತಾರೆ ಎಂಬ ಹೇಳಿದ್ದ ಮಾಜಿ ಕೇಂದ್ರ ಸಚಿವ ಮುಲಾಯಂ ಸಿಂಗ್ ಅವರ ಆಶಯವನ್ನು ಅವರು ಈ ಸಂದರ್ಭದಲ್ಲಿ ನೆನಪಿಸಿಕೊಂಡರು.
ಮುಲಾಯಂ ಸಿಂಗ್ ಅವರು ಹೀಗೆ ಹೇಳಿದಾಗ ಪ್ರತಿಪಕ್ಷದ ನಾಯಕರನ್ನು ಅದು ದಿಗ್ಭ್ರಮೆಗೊಳಿಸಿತು: “ಎಲ್ಲರನ್ನೂ ಕರೆದುಕೊಂಡು ಮುನ್ನಡೆಯಲು ಪ್ರಯತ್ನಿಸಿದ ಪ್ರಧಾನಿಯನ್ನು ನಾನು ಅಭಿನಂದಿಸುತ್ತೇನೆ. ಎಲ್ಲಾ ಸದಸ್ಯರು ಗೆದ್ದು ಹಿಂತಿರುಗಲಿ ಎಂದು ನಾನು ಭಾವಿಸುತ್ತೇನೆ ಮತ್ತು ನೀವು (ಪಿಎಂ ಮೋದಿ) ಮತ್ತೊಮ್ಮೆ ಪ್ರಧಾನಿಯಾಗುತ್ತೀರಿ ಎಂದು ಸಂಸತ್ತಿನಲ್ಲಿ ಪ್ರತಿಪಕ್ಷದ ಬೆಂಚ್‌ನಲ್ಲಿದ್ದ ಮುಲಯಾಂ ಸಿಂಗ್ ಯಾದವ್ ಹೇಳಿದ್ದನ್ನು ಮೋದಿ ಸಮಾವೇಶದಲ್ಲಿ ನೆನಪಿಸಿಕೊಂಡ ಪ್ರಧಾನಿ ಮೋದಿ, “ಅವರದ್ದು ಎಷ್ಟು ದೊಡ್ಡ ಹೃದಯ” ಎಂದು ಹೇಳಿದರು. ಗುಜರಾತ್‌ನ ನೆಲದಿಂದ ಅವರಿಗೆ ನನ್ನ ಹೃತ್ಪೂರ್ವಕ ಶ್ರದ್ಧಾಂಜಲಿ ಅರ್ಪಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಟ್ವಿಟರ್‌ನಲ್ಲಿ, ತಮ್ಮ ಸಂತಾಪವನ್ನು ಪೋಸ್ಟ್ ಮಾಡಿದವರಲ್ಲಿ ಪ್ರಧಾನಿ ಮೋದಿ ಮೊದಲಿಗರು. ಮುಲಾಯಂ ಸಿಂಗ್ ಯಾದವ್ ಜಿ ಉತ್ತರ ಪ್ರದೇಶ ಮತ್ತು ರಾಷ್ಟ್ರೀಯ ರಾಜಕೀಯದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅವರು ಪ್ರಜಾಪ್ರಭುತ್ವದ ಪ್ರಮುಖ ಸೈನಿಕರಾಗಿದ್ದರು. ರಕ್ಷಣಾ ಸಚಿವರಾಗಿ ಅವರು ಬಲಿಷ್ಠ ಭಾರತಕ್ಕಾಗಿ ಕೆಲಸ ಮಾಡಿದರು. ಅವರ ಸಂಸದೀಯ ಮಧ್ಯಸ್ಥಿಕೆಗಳು ಒಳನೋಟವುಳ್ಳವು ಮತ್ತು ರಾಷ್ಟ್ರೀಯ ಹಿತಾಸಕ್ತಿಗಳನ್ನು ಹೆಚ್ಚಿಸಲು ಒತ್ತು ನೀಡಿತು” ಎಂದು ಮೋದಿ ಟ್ವೀಟ್ ಮಾಡಿದ್ದಾರೆ. , ಅವರನ್ನು ಗಮನಾರ್ಹ ವ್ಯಕ್ತಿತ್ವ ಎಂದು ಬಣ್ಣಿಸಿದ್ದಾರೆ.
ಮೂರು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಮುಲಾಯಂ ಸಿಂಗ್ ಯಾದವ್ ಅವರು ಗುರುಗ್ರಾಮದ ಮೇದಾಂತ ಆಸ್ಪತ್ರೆಯ ಐಸಿಯುನಲ್ಲಿ ದಾಖಲಾಗಿದ್ದರು, ಸೋಮವಾರ ಬೆಳಿಗ್ಗೆ ನಿಧನರಾದರು.
ನಿಮ್ಮ ಕಾಮೆಂಟ್ ಬರೆಯಿರಿ