ಬೆಂಗಳೂರು: ಬ್ರಿಗೇಡ್ ರಸ್ತೆಯಲ್ಲಿರುವ ಶಾಪಿಂಗ್ ಕಾಂಪ್ಲೆಕ್ಸ್ವೊಂದಕ್ಕೆ ವೀಕೆಂಡ್ ಶಾಪಿಂಗ್ಗೆಂದು ಆಗಮಿಸಿದ ಯುವಕ ಮತ್ತು ಯುವತಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಶನಿವಾರ ನಡೆದಿದೆ. ಇಬ್ಬರ ಸ್ಥಿತಿಯೂ ಚಿಂತಾಜನಕವಾಗಿದ್ದು, ನಿಮ್ಹಾನ್ಸ್ಗೆ ದಾಖಲಿಸಲಾಗಿದೆ.
ಆತ್ಮಹತ್ಯೆಗೆ ಯತ್ನಿಸಿದ ಯುವಕ ಮತ್ತು ಯುವತಿಯನ್ನು ಕ್ರಿಸ್ ಮತ್ತು ಲಿಯಾ ಎಂದು ಗುರುತಿಸಲಾಗಿದೆ. ಇಬ್ಬರೂ ವೀಕೆಂಡ್ ಶಾಪಿಂಗ್ಗೆಂದು ಇಂದು, ಶನಿವಾರ ಮಧ್ಯಾಹ್ನ ಬ್ರಿಗೇಡ್ ರಸ್ತೆಯಲ್ಲಿರುವ ಶಾಪಿಂಗ್ ಕಾಂಪ್ಲೆಕ್ಸ್ಗೆ ಬಂದಿದ್ದರು. ಈ ವೇಳೆ ಎಲ್ಲರೂ ನೋಡುತ್ತಿರುವಾಗಲೇ ಫಿಫ್ತ್ ಅವೆನ್ಯೂ ಕಟ್ಟಡದಿಂದ ಸುಮಾರು 60 ಅಡಿ ಎತ್ತರದಿಂದ ಕೆಳಗೆ ಹಾರಿದ್ದಾರೆ. ಇಬ್ಬರೂ ಗಂಭೀರ ಗಾಯಗೊಂಡಿದ್ದು, ತತ್ಕ್ಷಣ ನಿಮ್ಹಾನ್ಸ್ಗೆ ಸಾಗಿಸಲಾಗಿದೆ. ಇಬ್ಬರ ಸ್ಥಿತಿಯೂ ಚಿಂತಾಜನಕವಾಗಿದೆ ಎಂದು ವರದಿಗಳು ತಿಳಿಸಿವೆ.
ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ