ವಿಶ್ವಪ್ರಸಿದ್ಧ ಮೈಸೂರು ಅರಮನೆ ಕೋಟೆ ಗೋಡೆ ಕುಸಿತ

ಮೈಸೂರು: ನಿರಂತರವಾಗಿ ಮಳೆ (Rain) ಬರುತ್ತಿರುವ ಪರಿಣಾಮದಿಂದಾಗಿ ಮೈಸೂರು ಅರಮನೆಯ (Mysuru Palace) ಆವರಣದ ಕೋಟೆ ಗೋಡೆ ಕುಸಿತವಾಗಿದೆ.
ಅರಮನೆ ಹೊರ ಆವರಣದಲ್ಲಿರುವ ಕೋಟೆ ಮಾರಮ್ಮ ದೇಗುಲ ಹಾಗೂ ಜಯಮಾರ್ತಾಂಡ ದ್ವಾರದ ಮಧ್ಯದಲ್ಲಿ ಬರುವ ಕೋಟೆಯ ಗೋಡೆ ಕುಸಿದಿದೆ. ಮೈಸೂರು ಅರಮನೆಯ ಸುತ್ತಲೂ ನಿರ್ಮಾಣ ಮಾಡಿರುವ ಕೋಟೆ ಇದ್ದಾಗಿದ್ದು, ಅಂದಿನ ಆರಸರ ಕಾಲದಲ್ಲಿ ಅರಮನೆಯ ರಕ್ಷಣೆಗಾಗಿ ಇದನ್ನು ನಿರ್ಮಿಸಲಾಗಿತ್ತು.
ಶತ್ರುಗಳ ದಾಳಿಯಿಂದ ರಕ್ಷಣೆ ಪಡೆಯಲು ನಿರ್ಮಿಸಲಾಗಿದ್ದ ಕೋಟೆ ಇದಾಗಿತ್ತು. ಆದರೆ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದ ಜಗತ್ಪ್ರಸಿದ್ಧ ಮೈಸೂರು ಅಂಬಾವಿಲಾಸ ಅರಮನೆ ಕೋಟೆಯಲ್ಲಿ ಬಿರುಕು ಕಾಣಿಸಿಕೊಂಡಿತ್ತು.

ಕೋಟೆ ಮಾರಮ್ಮ ದೇಗುಲ-ಜಯಮಾರ್ತಾಂಡ ದ್ವಾರದ ನಡುವಿನ ಕೋಟೆ ಕಟ್ಟುವಾಗ ಅಳವಡಿಸಿರುವ ಸೈಜುಗಲ್ಲು ಕುಸಿದು ಬೀಳುವ ಆತಂಕ ಎದುರಾಗಿತ್ತು. ಅಂದಿನ ಆಳರಸರ ಕಾಲದಲ್ಲಿ ಶತ್ರುಗಳಿಂದ ರಕ್ಷಣೆಗಾಗಿ ಕೋಟೆ ನಿರ್ಮಾಣ ಮಾಡಲಾಗಿತ್ತು. ಶತ್ರುಗಳಿಂದ ರಕ್ಷಣೆ ಪಡೆಯಲು ಅರಮನೆ ಸುತ್ತಲೂ ಸುಣ್ಣದ ಗಾರೆ ಮತ್ತು ಸೈಜುಗಲ್ಲುಗಳನ್ನು ಬಳಸಿ ಕೋಟೆ ಕಟ್ಟಲಾಗಿದೆ. ಅರಸೊತ್ತಿಗೆ ಅಂತ್ಯವಾದ ಬಳಿಕ ಅರಮನೆ ಆಡಳಿತ ಮಂಡಳಿ ಕೋಟೆಯನ್ನು ನಿರ್ವಹಣೆ ಮಾಡುತ್ತಿದೆ.
ಈ ಬಾರಿ ಮೈಸೂರಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿಯುತ್ತಿದೆ. 3 ತಿಂಗಳಿಂದ ಹೆಚ್ಚು ಮಳೆಯಾಗಿದೆ., ಅರಮನೆ ಆಡಳಿತ ಮಂಡಳಿ ಈ ಬಗ್ಗೆ ತ್ವರಿತವಾಗಿ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

ಪ್ರಮುಖ ಸುದ್ದಿ :-   ಗ್ರೀನ್ ಆಸ್ಕರ್ - ಆಶ್ಡನ್‌ ಪ್ರಶಸ್ತಿ : ಸೆಲ್ಕೋ ಸಾಧನೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅಭಿನಂದನೆ

3 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement