ಅಯೋಧ್ಯಾ ಘಾಟ್‌ನಲ್ಲಿ ಸ್ನಾನ ಮಾಡುವಾಗ ಪತ್ನಿಯನ್ನು ಚುಂಬಿಸಿದ್ದಕ್ಕೆ ವ್ಯಕ್ತಿಗೆ ಥಳಿತ | ವೀಕ್ಷಿಸಿ

ನವದೆಹಲಿ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಸರಯೂ ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಪತ್ನಿಗೆ ಮುತ್ತು ಕೊಟ್ಟಿದ್ದಕ್ಕೆ ವ್ಯಕ್ತಿಯೋರ್ವನನ್ನು ಥಳಿಸಿದ ಘಟನೆ ನಡೆದಿದೆ. ಘಟನೆಯ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೀಡಿಯೊದಲ್ಲಿ, ಹೆಂಡತಿಗೆ ಮುತ್ತಿಕ್ಕಿದ ಪುರುಷನನ್ನು ಎಳೆದೊಯ್ದ ಹಲವಾರು ಪುರುಷರು ನಂತರ ಥಳಿಸಿದ್ದಾರೆ. ಅಯೋಧ್ಯೆಯಲ್ಲಿ ಇಂತಹ ಅಸಭ್ಯತೆಯನ್ನು ಸಹಿಸುವುದಿಲ್ಲ ಎಂದು ಒಬ್ಬ ವ್ಯಕ್ತಿ ಹೇಳುತ್ತಿರುವುದು ಕೇಳಿಬರುತ್ತಿದೆ. ಹೆಂಡತಿ ತನ್ನ ಗಂಡನನ್ನು ರಕ್ಷಿಸಲು ಪ್ರಯತ್ನಿಸುತ್ತಾಳೆ ಆದರೆ ವಿಫಲಳಾಗುತ್ತಾಳೆ.

ವೀಡಿಯೊದಲ್ಲಿ, ಜನಸಮೂಹವು ದಂಪತಿಯನ್ನು ಸುತ್ತುವರಿಯಲು ಪ್ರಾರಂಭಿಸಿದಾಗಲೂ ದಂಪತಿ ಘಾಟ್‌ನಲ್ಲಿ ಸ್ನಾನ ಮಾಡುವುದನ್ನು ಕಾಣಬಹುದು. ಕೆಲವು ಸೆಕೆಂಡುಗಳ ನಂತರ, ಒಬ್ಬ ವ್ಯಕ್ತಿ ಪತಿಯನ್ನು ಎಳೆದುಕೊಂಡು ಹೋಗಿ ಹೊಡೆಯಲು ಪ್ರಾರಂಭಿಸುತ್ತಾನೆ. ಹೆಂಡತಿ ಜನಸಮೂಹವನ್ನು ತಡೆಯಲು ಪ್ರಯತ್ನಿಸುತ್ತಾಳೆ ಆದರೆ ಅವರು ನೀರಿನಿಂದ ಹೊರಬರುವ ಕ್ಷಣದಲ್ಲಿ ಮತ್ತಷ್ಟು ಗುಂಪು ಸೇರುತ್ತದೆ.

ದಂಪತಿಯನ್ನು ಅಂತಿಮವಾಗಿ ಜನಸಮೂಹ ನೀರಿನಿಂದ ಹೊರಹಾಕಿತು. ಈ ಬಗ್ಗೆ ತನಿಖೆ ನಡೆಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅಯೋಧ್ಯಾ ಪೊಲೀಸರು ತಿಳಿಸಿದ್ದಾರೆ.
“ಇನ್‌ಚಾರ್ಜ್ ಇನ್ಸ್‌ಪೆಕ್ಟರ್ ಕೊತ್ವಾಲಿ ಅವರಿಗೆ ಅಯೋಧ್ಯೆ ತನಿಖೆ ಮತ್ತು ಅಗತ್ಯ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ” ಎಂದು ಅಯೋಧ್ಯೆ ಪೊಲೀಸರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಸರಯೂ ಗಂಗೆಯ ಏಳು ಉಪನದಿಗಳಲ್ಲಿ ಒಂದಾಗಿದೆ ಮತ್ತು ಇದನ್ನು ಹಿಂದೂಗಳು ಪವಿತ್ರವೆಂದು ಪರಿಗಣಿಸುತ್ತಾರೆ. ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯೆಯು ಸರಯೂ ನದಿಯ ದಡದಲ್ಲಿದೆ.

ಪ್ರಮುಖ ಸುದ್ದಿ :-   ಜಾರ್ಖಂಡ್ ಸಚಿವರ ಆಪ್ತ ಕಾರ್ಯದರ್ಶಿ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆ, ಹಣದ ರಾಶಿ ನೋಡಿ ಇ.ಡಿ.ಯೇ ದಂಗು

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement