ಔರಂಗಜೇಬ್ ಹೇಳಿಕೆ ವಿವಾದ : ಮಹಾರಾಷ್ಟ್ರ ವಿಧಾನಸಭೆಯಿಂದ ಎಸ್‌ ಪಿ ಶಾಸಕ ಅಬು ಅಜ್ಮಿ ಅಮಾನತು

ಮುಂಬೈ: ಔರಂಗಜೇಬನನ್ನು ಹೊಗಳಿ ತೀವ್ರ ಟೀಕೆಗೆ ಗುರಿಯಾಗಿರುವ ಸಮಾಜವಾದಿ ಪಕ್ಷದ ಶಾಸಕ ಅಬು ಅಸಿಮ್ ಅಜ್ಮಿ ಅವರನ್ನು ಮಹಾರಾಷ್ಟ್ರ ವಿಧಾನಸಭೆಯ ಬಜೆಟ್ ಅಧಿವೇಶನದಿಂದ ಬುಧವಾರ ಅಮಾನತುಗೊಳಿಸಲಾಗಿದೆ.
ಈಗ ನಡೆಯುತ್ತಿರುವ ಮಹಾರಾಷ್ಟ್ರದ ವಿಧಾನಸಭೆಯ ಬಜೆಟ್ ಅಧಿವೇಶನ ಮುಗಿಯುವವರೆಗೂ ಅಬು ಅಜ್ಮಿ ಅವರನ್ನು ಅಮಾನತು ಮಾಡಲಾಗಿದೆ. ಬಜೆಟ್ ಅಧಿವೇಶನ ಮಾರ್ಚ್ 26ರ ವರೆಗೆ ನಡೆಯಲಿದ್ದು, ಅಲ್ಲಿಯವರೆಗೂ ಅಬು ಅಜ್ನಿ ಅಮಾನತಿನಲ್ಲಿ ಇರಲಿದ್ದಾರೆ.
ಸಚಿವ ಚಂದ್ರಕಾಂತ ಪಾಟೀಲ ಅವರು ಬುಧವಾರ ಸದನದಲ್ಲಿ ಅಬು ಅಜ್ಮಿ ಅವರನ್ನು ಸದನದಿಂದ ಅಮಾನತು ಮಾಡುವ ಪ್ರಸ್ತಾವನೆ ಮಂಡಿಸಿದರು. ಧ್ವನಿ ಮತದ ಮೂಲಕ ನಿರ್ಣಯವನ್ನು ಅಂಗೀಕರಿಸಲಾಗಿದ್ದು, ಎಸ್​ಪಿ ಶಾಸಕ ಅಬು ಅಜ್ಮಿ ಅವರನ್ನು ಸದನದಿಂದ ಅಮಾನತು ಮಾಡಲಾಗಿದೆ ಎಂದು ಸ್ಪೀಕರ್​ ತಿಳಿಸಿದರು.
ಮರಾಠಾ ಐಕಾನ್ ಶಿವಾಜಿಯ ಪುತ್ರ ಛತ್ರಪತಿ ಸಂಭಾಜಿ ಮಹಾರಾಜರ ಸುತ್ತ ಕೇಂದ್ರೀಕೃತವಾಗಿರುವ ‘ಛಾವಾ’ ಚಿತ್ರದಲ್ಲಿ ಐತಿಹಾಸಿಕ ಘಟನೆಗಳ ಚಿತ್ರಣವನ್ನು ಟೀಕಿಸಿದ ನಂತರ ಮಂಖುರ್ದ್ ಶಿವಾಜಿ ನಗರದ ಶಾಸಕ ಅಜ್ಮಿ ಹೇಳಿಕೆಗಳು ವಿವಾದಕ್ಕೆ ಕಾರಣವಾದವು.
“ಚಾವಾ’ದಲ್ಲಿ ತಪ್ಪು ಇತಿಹಾಸವನ್ನು ತೋರಿಸಲಾಗುತ್ತಿದೆ… ಔರಂಗಜೇಬ್ ಹಲವಾರು ದೇವಾಲಯಗಳನ್ನು ನಿರ್ಮಿಸಿದ್ದ. ಆತ ಕ್ರೂರ ಆಡಳಿತಗಾರ ಎಂದು ನಾನು ಭಾವಿಸುವುದಿಲ್ಲ,” ಎಂದು ಅಜ್ಮಿ ಹೇಳಿದರು. ಔರಂಗಜೇಬ್ ಅವರ ಅಧಿಕಾರಾವಧಿಯಲ್ಲಿ ಭಾರತವನ್ನು “ಸೋನೆ ಕಿ ಚಿರಿಯಾ (ಚಿನ್ನದ ಹಕ್ಕಿ)” ಎಂದು ಉಲ್ಲೇಖಿಸಲಾಗಿದೆ ಎಂದು ಅವರು ಹೇಳಿಕೊಂಡರು.
ಅವರ ಹೇಳಿಕೆಗಳು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಗುತ್ತಿದ್ದಂತೆ, ಉಪಮುಖ್ಯಮಂತ್ರಿ ಏಕನಾಥ ಶಿಂಧೆ ಅವರನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿದರು, ಅಜ್ಮಿ ಅವರು ತಮ್ಮ ವಿವಾದಾತ್ಮಕ ಹೇಳಿಕೆಗಳನ್ನು ಹಿಂತೆಗೆದುಕೊಂಡರು ಮತ್ತು ತಮ್ಮ ಮಾತುಗಳನ್ನು ತಿರುಚಲಾಗಿದೆ ಎಂದು ಸ್ಪಷ್ಟನೆ ನೀಡಿದರು.
“ಔರಂಗಜೇಬ್ ರಹಮತುಲ್ಲಾ ಅಲಿ ಬಗ್ಗೆ ಇತಿಹಾಸಕಾರರು ಮತ್ತು ಬರಹಗಾರರು ಹೇಳಿದ್ದನ್ನು ನಾನು ಹೇಳಿದ್ದೇನೆ… ಛತ್ರಪತಿ ಶಿವಾಜಿ ಮಹಾರಾಜ, ಸಂಭಾಜಿ ಮಹಾರಾಜ ಅವರ ಬಗ್ಗೆ ನಾನು ಯಾವುದೇ ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡಿಲ್ಲ. ಆದರೆ, ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ, ನನ್ನ ಮಾತುಗಳನ್ನು, ನನ್ನ ಹೇಳಿಕೆಯನ್ನು ನಾನು ಹಿಂಪಡೆಯುತ್ತೇನೆ” ಎಂದು ಅಜ್ಮಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಆದಾಗ್ಯೂ, ಸಮಾಜವಾದಿ ಪಕ್ಷದ ಶಾಸಕರು ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿ ಲೋಕಸಭೆಯ ಸಂಸದ ನರೇಶ ಮ್ಹಾಸ್ಕೆ ಅವರ ಹೇಳಿಕೆಯ ಮೇಲೆ ಅಜ್ಮಿ ವಿರುದ್ಧ ಎಫ್‌ಐಆರ್ ದಾಖಲಿಸಲಾಯಿತು. ನಂತರ ಎಫ್ಐಆರ್ ಅನ್ನು ಮುಂಬೈಗೆ ವರ್ಗಾಯಿಸಲಾಯಿತು

ಪ್ರಮುಖ ಸುದ್ದಿ :-   ಪಾಕಿಸ್ತಾನ ಹೈಕಮಿಷನ್ ನ ಮತ್ತೊಬ್ಬ ಅಧಿಕಾರಿಗೆ 24 ಗಂಟೆಯೊಳಗೆ ಭಾರತ ತೊರೆಯಲು ಆದೇಶ

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement