‘ಪತ್ನಿ ಕೋಪಗೊಂಡಿದ್ದಾಳೆ, ನನಗೆ ರಜೆ ಕೊಡಿ’: ನವವಿವಾಹಿತ ಪೊಲೀಸ್‌ ಕಾನ್‌ಸ್ಟೇಬಲ್‌ ರಜೆ ಅರ್ಜಿ ಈಗ ಸಖತ್‌ ವೈರಲ್…!

ಮಹಾರಾಜಗಂಜ್‌ : ‘ಹೆಂಡತಿ ಕೋಪಗೊಂಡಿದ್ದಾಳೆ, ರಜೆ ಕೊಡಿ’ ಎಂದು ಉತ್ತರ ಪ್ರದೇಶದ ಕಾನ್‌ಸ್ಟೇಬಲ್ ಬರೆದಿರುವ ರಜೆ ಅರ್ಜಿ ಈಗ ವೈರಲ್ ಆಗಿದೆ. ಈ ಪೊಲೀಸ್‌ ಪೇದೆ ಕಳೆದ ತಿಂಗಳು ವಿವಾಹವಾಗಿದ್ದು, ಅಂದಿನಿಂದ ಅವರು ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಜಿಲ್ಲೆಯ ನೌತಾನ್ವಾ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಅವರು ಮೌ ಜಿಲ್ಲೆಯ ನಿವಾಸಿಯಾಗಿದ್ದು, ಇಂಡೋ-ನೇಪಾಳ ಗಡಿಯ ಪಿಆರ್‌ಬಿ(PRB)ಯಲ್ಲಿ ನಿಯೋಜಿಸಲಾಗಿದೆ. ತನಗೆ ರಜೆ ಸಿಗದ ಕಾರಣ ಪತ್ನಿ ಕೋಪಗೊಂಡಿದ್ದು, ಫೋನ್‌ ಕರೆ ಮಾಡಿದರೂ ಮಾತನಾಡುತ್ತಿಲ್ಲ ಎಂದು ಅರ್ಜಿಯಲ್ಲಿ ಅವರು ರಜೆಗೆ ಕಾರಣವನ್ನು ಪ್ರಾಮಾಣಿಕವಾಗಿ ಬರೆದಿದ್ದಾರೆ. ತಾನು ತನ್ನ ಪತ್ನಿಗೆ ಅನೇಕ ಬಾರಿ ಕರೆ ಮಾಡಿದೆ, ಆದರೆ ಅವಳು ಫೋನ್ ಅನ್ನು ತನ್ನ ತಾಯಿಗೆ ನೀಡಿದ್ದಾಳೆಯೇ ಹೊರತು ಕೋಪಗೊಂಡು ತನ್ನ ಜೊತೆ ಮಾತನಾಡಲಿಲ್ಲ ಎಂದು ಅವರು ಬರೆದಿದ್ದಾರೆ.
ಇಂಡಿಯಾ ಟುಡೇ ವರದಿಯ ಪ್ರಕಾರ, ಪೊಲೀಸ್ ಪೇದೆಯ ರಜೆಯ ಅರ್ಜಿಯಲ್ಲಿ ಎಸ್‌ಪಿಗೆ ಕಳೆದ ತಿಂಗಳಷ್ಟೇ ಮದುವೆಯಾಗಿದೆ ಎಂದು ಹೇಳಲಾಗಿದೆ. ಮದುವೆ ನಂತರ ಪೊಲೀಸ್‌ ಪೇದೆ ಹೆಂಡತಿಯನ್ನು ಮನೆಯಲ್ಲೇ ಬಿಟ್ಟು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಅವರ ಮದುವೆಯ ನಂತರ, ಅವರು ಯಾವುದೇ ರಜೆಯನ್ನು ತೆಗೆದುಕೊಳ್ಳಲಿಲ್ಲ, ಇದು ಅವರ ಹೆಂಡತಿ ಕೋಪಕ್ಕೆ ಕಾರಣವಾಗಿದೆ.
ತನ್ನ ಸೋದರಳಿಯನ ಜನ್ಮದಿನಕ್ಕೆ ಮನೆಗೆ ಬರುವುದಾಗಿ ಪತ್ನಿಗೆ ಭರವಸೆ ನೀಡಿದ್ದಾಗಿ ಪೊಲೀಸ್ ಪೇದೆ ತನ್ನ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಆದರೆ ರಜೆ ಸಿಗದೆ ಮನೆಗೆ ಹೋಗುವಂತಿಲ್ಲ.
ಅರ್ಜಿಯನ್ನು ಓದಿದ ನಂತರ, ಸಹಾಯಕ ಸೂಪರಿಂಟೆಂಡೆಂಟ್ (ASP) ಜನವರಿ 10 ರಿಂದ ಕಾನ್‌ಸ್ಟೆಬಲ್‌ಗೆ ಐದು ದಿನಗಳ ಕ್ಯಾಶುಯಲ್ ರಜೆಯನ್ನು ಮಂಜೂರು ಮಾಡಿದ್ದಾರೆ. ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ ಅವರ ಅಗತ್ಯಕ್ಕೆ ತಕ್ಕಂತೆ ರಜೆ ಮಂಜೂರು ಮಾಡಲಾಗಿದ್ದರೂ ರಜೆಯಿಂದ ಯಾವುದೇ ತೊಂದರೆಯಾಗಬಾರದು ಎಂಬ ಬಗ್ಗೆಯೂ ವಿಶೇಷ ಗಮನ ಹರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಆಗ್ರಾದಲ್ಲಿ ತಾಜ್ ಮಹಲಿಗೇ ಸ್ಪರ್ಧೆ ಒಡ್ಡುವ ಬಿಳಿ ಅಮೃತಶಿಲೆಯ ಮತ್ತೊಂದು ʼಅದ್ಭುತʼ ನಿರ್ಮಾಣವೇ ಈ ‘ಸೋಮಿ ಬಾಗ್’...

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement