ಹೊಸಪೇಟೆ: ಜಿಲ್ಲೆಯ ಹೊಸಪೇಟೆ ಬಳಿ ತುಂಗಭದ್ರಾ ಜಲಾಶಯದಿಂದ 1 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು ನದಿಗೆ ಬಿಡುಗಡೆ ಮಾಡಲಾಗಿದ್ದು, ಹಂಪಿನ ಹಲವಾರು ಸ್ಮಾರಕಗಳು ಮುಳುಗಿವೆ.
ಜಲಾಶಯದಿಂದ 20 ಗೇಟ್ಗಳನ್ನು ತೆರೆದು ನೀರು ಹೊರಕ್ಕೆ ಬಿಟ್ಟಿದ್ದು, ಜಲಾಶಯದಿಂದ 1 ಲಕ್ಷ 10ಸಾವಿರ ಕ್ಯೂಸೆಕ್ ನೀರನ್ನು ಟಿಬಿ ಬೋರ್ಡ್ ನದಿಗೆ ಹರಿಸಿದೆ. ಒಳ ಹರಿವು ಹೆಚ್ಚಳ ಹಿನ್ನೆಲೆಯಲ್ಲಿ, ನದಿಗೆ ನೀರು ಹರಿಸಲಾಗುತ್ತಿದೆ. ಹಂಪಿಯಲ್ಲಿರುವ ಸ್ನಾನ ಘಟ್ಟ, ಧಾರ್ಮಿಕ ವಿಧಿವಿಧಾನ ಮಂಟಪ, ಮುಳುಗಡೆಯಾಗಿದ್ದು, ವಿಜಯ ವಿಠಲ ದೇವಸ್ಥಾನದ ಬಳಿಯಲ್ಲಿರುವ ಪುರಂದರದಾಸರ ಮಂಟಪ ಮುಳುಗಡೆ ಹಂತದಲ್ಲಿದೆ. ನೀರಿನ ಹೊರಹರಿವಿನ ಪ್ರಮಾಣ ಹೆಚ್ಚಾದರೆ ಕೋದಂಡರಾಮ ದೇವಸ್ಥಾನ ಮುಳುಗಡೆಯಾಗಲಿದೆ.
ಈ ವರ್ಷ ಮಳೆಗಾಲ ಆರಂಭವಾದಾಗಿನಿಂದ ಈ ರೀತಿ ಹಂಪಿಯ ಸ್ಮಾರಕಗಳು ಮುಳುಗಡೆಯಾಗುತ್ತಿರುವುದು ಇದು ಎರಡನೇ ಬಾರಿಯಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ