ಪ್ರೀತಿಸಿದವಳು ದೂರ ; ಯುವಕ ಆತ್ಮಹತ್ಯೆ

ಅಂಕೋಲಾ: ಕಳೆದ ಎಂಟು ವರ್ಷಗಳಿಂದ ಪ್ರೀತಿ ಮಾಡಿದ ಹುಡುಗಿ ದೂರವಾದ ಕಾರಣಕ್ಕೆ ಮನನೊಂದು ಯುವಕನೋರ್ವ ಡೆತ್ ನೋಟ್ ಬರೆದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ತಾಲೂಕಿನ ಬೆಳಸೆ ಚಂದುಮಠದ ಬಳಿ ನಡೆದಿದೆ ಎಂದು ವರದಿಯಾಗಿದೆ.
ಅಂಕೋಲಾ ತಾಲೂಕಿನ ವಾಸರ ಕುದ್ರಗಿ ಗ್ರಾಮದ ಮೇಲಿನಗುಳಿ ನಿವಾಸಿ ಸಂತೋಷ ರೂಪಾ ಗೌಡ (31) ಮೃತ ಯುವಕನಾಗಿದ್ದು ಮಾವಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.
ಮೃತ ಯುವಕ ಡೆತ್ ನೋಟ್ ಬರೆದಿಟ್ಟಿರುವುದು ದೊರಕಿದ್ದು, ಅದರಲ್ಲಿ ತನ್ನನ್ನು ಕಳೆದ 8 ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ ಮತ್ತು ಮದುವೆ ಮಾಡಿಕೊಳ್ಳಬೇಕೆಂದಿದ್ದ ಹುಡುಗಿ ಇತ್ತೀಚಿನ ಕೆಲವು ದಿನಗಳಿಂದ ದೂರವಾಗಿರುವ ಕಾರಣ ಮನ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿರುವುದಾಗಿ ತಿಳಿದು ಬಂದಿದೆ. ಅವಳು ನನ್ನನ್ನು ಬಿಟ್ಟು ಹೋದಳು. ಎಂಟು ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗಿ ಕಳೆದ 20 ದಿನಗಳಿಂದ ನನ್ನನ್ನು ದೂರ ಇಡುತ್ತಿದ್ದಾಳೆ. ನಾನು ಬದುಕಲು ಸಾಧ್ಯವಾಗುತ್ತಿಲ್ಲ. ಕ್ಷಮಿಸು ಅಮ್ಮಾ.. ಕ್ಷಮಿಸಿ.. ನನಗೆ ಊಟವೂ ಸೇರುತ್ತಿಲ್ಲ, ನಿದ್ರೆಯೂ ಬರತ್ತಿಲ್ಲ. ನನಗೆ ಏನು ಬೇಡವಾಗಿದೆ ಎಂದು ಬರೆದಿಟ್ಟು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಅಂಕೋಲಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಾಗಿದೆ.

ಪ್ರಮುಖ ಸುದ್ದಿ :-   ಹುಬ್ಬಳ್ಳಿ: ಸ್ಕೂಟಿಯಲ್ಲಿ ಹೋಗುವಾಗ ಗಾಳಿಪಟದ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ಮಹಿಳೆ ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement