ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಸಿಬಿಎಸ್‌ಇ 10 ನೇ ತರಗತಿ ಫಲಿತಾಂಶವನ್ನು ಇಂದು ಮಧ್ಯಾಹ್ನ 12 ಗಂಟೆಗೆ ಪ್ರಕಟಿಸಲಿದೆ.
ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ 2021 ಆಗಸ್ಟ್ 3 ರಂದು (ಇಂದು) ಮಂಡಳಿಯ ಅಧಿಕೃತ ವೆಬ್ ಸೈಟ್ ನಲ್ಲಿ ಮಧ್ಯಾಹ್ನ 12 ಗಂಟೆಗೆ ಘೋಷಿಸಲಾಗುವುದು ಎಂದು ಸಿಬಿಎಸ್ ಇ ತಿಳಿಸಿದೆ.
ಪ್ರಾಯೋಗಿಕ ಪರೀಕ್ಷಾ ಕಾರ್ಯಕ್ಷಮತೆ ಮತ್ತು ಆಂತರಿಕ ಮೌಲ್ಯಮಾಪನವನ್ನು ಸಂಯೋಜಿಸಿದ ನಂತರ ಪಡೆದ ಅಂಕಗಳ ಆಧಾರದ ಮೇಲೆ ಸಿಬಿಎಸ್‌ಇ ತರಗತಿ 10 ಫಲಿತಾಂಶ 2021 ಅನ್ನು ಘೋಷಿಸಲಾಗುತ್ತದೆ ಎಂದು ತಿಳಿಸಲಾಗಿದೆ.
cbse.gov.in ಮತ್ತು cbseresults.nic.in. ಮೂಲಕ ವಿದ್ಯಾರ್ಥಿಗಳು ಫಲಿತಾಂಶ ನೋಡಬಹುದು. ಸಿಬಿಎಸ್‌ಇ ತರಗತಿ 10 ಫಲಿತಾಂಶ ಪರಿಶೀಲಿಸಲು, ವಿದ್ಯಾರ್ಥಿಗಳು ತಮ್ಮ ರೋಲ್ ಸಂಖ್ಯೆ, ಕೇಂದ್ರ ಸಂಖ್ಯೆ, ಶಾಲಾ ಸಂಖ್ಯೆ ನಮೂದಿಸಬೇಕು ಮತ್ತು ಕಾರ್ಡ್ ವಿವರಗಳನ್ನು ದಾಖಲಿಸಬೇಕು.
ವಿದ್ಯಾರ್ಥಿಗಳು ತಮ್ಮ ಸಿಬಿಎಸ್‌ಇ ಬೋರ್ಡ್ ಫಲಿತಾಂಶವನ್ನು ಎಸ್‌ಎಂಎಸ್ ಮೂಲಕ ಅಥವಾ ಇಂಟರಾಕ್ಟಿವ್ ವಾಯ್ಸ್ ರೆಸ್ಪಾನ್ಸ್ ಸಿಸ್ಟಮ್ (ಐವಿಆರ್‌ಎಸ್) ಅಥವಾ ಕರೆ ಮೂಲಕ ಪರಿಶೀಲಿಸಬಹುದು.
ಸಿಬಿಎಸ್‌ಇ10<space>ರೋಲ್ ಸಂಖ್ಯೆ<space>ಜನ್ಮದಿನಾಂಕ<space>ಶಾಲಾ ಸಂಖ್ಯೆ<space>ಕೇಂದ್ರ ಸಂಖ್ಯೆ ಟೈಪ್ ಮಾಡಿ ಮತ್ತು ಅದನ್ನು 7738299899 ಕಳುಹಿಸಿದರೆ ಫಲಿತಾಂಶ ಬರಲಿದೆ.
ನಿಮ್ಮ ಕಾಮೆಂಟ್ ಬರೆಯಿರಿ