ರೈತರು ಅನೇಕ ವರ್ಷಗಳಿಂದ ಉಳುಮೆ ಮಾಡುತ್ತಿರುವ ಭೂಮಿ ಅವರ ಹೆಸರಿಗೆ ನೀಡಲು ಸರ್ಕಾರದ ಚಿಂತನೆ: ಸಚಿವ ಅಶೋಕ

ಬೆಂಗಳೂರು: ಹಲವಾರು ವರ್ಷಗಳಿಂದ ರೈತರು ಉಳುಮೆ ಮಾಡುತ್ತಿರುವ ಭೂಮಿಯನ್ನು ಅವರ ಹೆಸರಿಗೆ ನೀಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ವಿಧಾನ ಪರಿಷತ್‍ನಲ್ಲಿ ಕಾಂಗ್ರೆಸ್ ಸದಸ್ಯ ಕೆ.ಹರೀಶಕುಮಾರ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬ್ರಿಟಿಷರ ಕಾಲದಿಂದಲ್ಲೂ ರೈತರು ಈ ಭುಮಿಯಲ್ಲಿ ಉಳುಮೆ ಮಾಡುತ್ತಿದ್ದಾರೆ. ಸುಪ್ರೀಂಕೋರ್ಟ್ ರೈತರಿಗೆ ಭೂಮಿ ನೀಡುವಂತೆ ಸೂಚನೆ ನೀಡಿದೆ. ರಾಜ್ಯಾದ್ಯಂತ ಈ ರೀತಿ ಲಕ್ಷಾಂತರ ಎಕರೆ ಭೂಮಿ ಇದೆ. ಇದರಿಂದ ಸರ್ಕಾರಕ್ಕೂ ಆದಾಯ ಬರುತ್ತಿಲ್ಲ. ರೈತರಿಗೂ ಇಲ್ಲ ಎಂಬಂತಾಗಿದೆ. ಅದಕ್ಕಾಗಿ ಈ ಭೂಮಿಗಳನ್ನು ಉಳುಮೆ ಮಾಡುತ್ತಿದ್ದ ರೈತರಿಗೆ ನೀಡಬೇಕು ಎಂಬ ಚಿಂತನೆ ಸರ್ಕಾರಕ್ಕೆ ಇದೆ ಎಂದು ತಿಳಿಸಿದರು ಎಂದು ಈ ಸಂಜೆ.ಕಾಮ್‌ ವರದಿ ಮಾಡಿದೆ.

ಮೊನ್ನೆ ಸಚಿವ ಸಂಪುಟದಲ್ಲಿ ಈ ವಿಷಯ ಚರ್ಚೆಸಲಾಗಿದೆ. ನನ್ನ ಅಧ್ಯಕ್ಷತೆಯಲ್ಲಿ ಉಪಸಮಿತಿ ರಚಿಸಲಾಗಿದೆ. ಆ ಸಮಿತಿ ಸಭೆ ನಡೆಸಿ, ಕಾನೂನು ಪ್ರಕಾರ ರೈತರಿಗೆ ಭೂಮಿಯನ್ನು ನೀಡಲು ಪರಿಶೀಲನೆ ನಡೆಸಲಿದೆ. ಮಲೆನಾಡು ಭಾಗದ ಭೂಮಿಯನ್ನು ಭೋಗ್ಯದ ಆಧಾರದ ಮೇಲೆ ನೀಡಲು ಪರಿಶೀಲಿಸಲಾಗುತ್ತಿದೆ. ಅದಕ್ಕೆ ರೈತರಿಂದ ಎಷ್ಟು ಹಣ ಸಂಗ್ರಹಿಸಬೇಕು ಎಂಬ ಬಗ್ಗೆ ನಾನೇ ಖುದ್ದಾಗಿ ಮಲೆನಾಡು, ಚಿಕ್ಕಮಗಳೂರು ಹಾಗೂ ಇತರ ಪ್ರದೇಶಗಳಿಗೆ ಹೋಗಿ ರೈತರ ಜೊತೆ ಸಮಾಲೋಚನೆ ಮಾಡುತ್ತೇನೆ ಎಂದರು. ಗೋಮಾಳ ಭೂಮಿಯನ್ನು ಸರ್ಕಾರ ಉಳಿಸಿಕೊಳ್ಳುವ ಚಿಂತನೆ ಇದ್ದು, . ನೈಜ ರೈತರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ವೀಡಿಯೊ...| ಬೆಂಗಳೂರು : ತಡೆಗೋಡೆಗೆ ಟೆಂಪೋ ಡಿಕ್ಕಿ ; ವಾಹನವೇ ಅರ್ಧಕ್ಕೆ ತುಂಡು. ; ಸೇತುವೆಯಿಂದ ಕೆಳಕ್ಕೆ ಬಿದ್ದ ಕ್ಯಾಬಿನ್...!

1 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement