ಮಮತಾ ಬ್ಯಾನರ್ಜಿಗೆ ಗಾಯ: ಪಿತೂರಿಯ ಸಂದೇಹ ವ್ಯಕ್ತಪಡಿಸಿದ ದೀದಿ

ನಂದಿಗ್ರಾಮ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಂದಿಗ್ರಾಮ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ ನಂತರ ಇಲ್ಲಿನ ಬಿರುಲಿಯಾ ಬಜಾರ್‌ನಲ್ಲಿ ನಡೆದ ಜನರ ನೂಕು ನುಗ್ಗಲಿನಿಂದಾಗಿ ಗಾಯಗೊಂಡಿದ್ದಾರೆ.
ಸ್ಥಳಿಯ ಮತದಾರರನ್ನು ಭೇಟಿ ಮಾಡುತ್ತಿದ್ದ ಸಂದರ್ಭದಲ್ಲಿ ಜನರ ನೂಕಾಟದಿಂದಾಗಿ ಮಮತಾ ಅವರ ಕಾಲಿಗೆ ಗಾಯವಾಗಿದೆ. ಆಕೆಯ ತಲೆಗೆ ಕೂಡ ಪೆಟ್ಟಾಗಿದೆ. ದೇವಸ್ಥಾನದಿಂದ ಕಾರಿನ ಕಡೆಗೆ ಬರುತ್ತಿದ್ದಾಗ, ನಾಲ್ಕೈದು ಜನರು ಅವರ ಕಾರಿನ ಬಾಗಿಲನ್ನು ತಳ್ಳಿದರು. ಇದರಿಂದ ಅವರ ಕಾಲು ಬಾಗಿಲಿನಲ್ಲಿ ಸಿಲುಕಿ ಗಾಯವಾಗಿದೆ.
ನಂತರ ಮಾಧ್ಯಮದವರೆದುರು ಮಾತನಾಡಿದ ಸಿಎಂ ಮಮತಾ, ಇದು ಪಿತೂರಿ. ನನ್ನನ್ನು ರಕ್ಷಿಸಲು ಅಲ್ಲಿ ಯಾರೂ ಇರಲಿಲ್ಲ. ಪೊಲೀಸ್‌ ಹಿರಿಯ ಅಧಿಕಾರಿಗಳೂ ಇರಲಿಲ್ಲ. ಕೆಲವರು ನನಗೆ ಗಾಯಗೊಳಿಸಬೇಕೆಂಬ ಉದ್ದೇಶದಿಂದಲೇ ಬಂದಿದ್ದರು. ನಾನೀಗ ಕೋಲ್ಕತ್ತಾಕ್ಕೆ ಹೊರಡುತ್ತೇನೆ ಎಂದು ಕೋಪ ವ್ಯಕ್ತಪಡಿಸಿದರು.
ದೀದಿ ವರ್ತನೆಯನ್ನು ಬಿಜೆಪಿ ಖಂಡಿಸಿದೆ. ಸಹಾನುಭೂತಿ ಗಿಟ್ಟಿಸಿಕೊಳ್ಳಲು ಮಮತಾ ಬ್ಯಾನರ್ಜಿ ಸುಳ್ಳು ಹೇಳುತ್ತಿದ್ದಾರೆ. ಅವರ ಮೇಲೆ ಯಾರು ದಾಳಿ ಮಾಡುತ್ತಾರೆ. ಅವರು ಹೋದಲ್ಲೆಲ್ಲಾ ಪೊಲೀಸರು ಸುತ್ತ ಮುತ್ತ ಒಂದು ಕಿ.ಮೀ. ರಸ್ತೆಯನ್ನು ತೆರವು ಮಾಡುತ್ತಾರೆ ಎಂದು ಬಿಜೆಪಿ ಮುಖಂಡ ಅರ್ಜುನ ಸಿಂಗ್‌ ಹೇಳಿದರು.

ಪ್ರಮುಖ ಸುದ್ದಿ :-   ಪಿಎಫ್‌ಗೆ ಶೇ. 8.25 ಬಡ್ಡಿದರ : ಕೇಂದ್ರ ಸರ್ಕಾರದ ಅನುಮೋದನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement