ಗದಗದ ಜಿಲ್ಲೆಯಲ್ಲಿ ಮೇ 27 ರಿಂದ ಜೂ1 ವರೆಗೆ ಸಂಪೂರ್ಣ ಲಾಕ್ ಡೌನ್ 

ಗದಗ: ಜಿಲ್ಲೆಯಲ್ಲಿ ಕೋರೊನಾ ಸೋಂಕು ತಡೆಯಲು ಮೇ 27ರ ಬೆಳಿಗ್ಗೆ 10 ಗಂಟೆಯಿಂದ ಜೂನ 1ರ ಬೆಳಿಗ್ಗೆ 6 ಗಂಟೆಯವರೆಗೆ ಕೆಲವು ಅಗತ್ಯ ಸೇವೆಗೆ ಅವಕಾಶ ನೀಡಿ, ಸಂಪೂರ್ಣ ಲಾಕ್‌ಡೌನ್ ಜಾರಿಗೊಳಿಸಲಾಗುವುದು. ಸಾರ್ವಜನಿಕರು ನಿಯಮಗಳನ್ನು ಪಾಲಿಸಿ ಕೊರೊನಾ ಸೋಂಕು ಸರಪಳಿ ತುಂಡರಿಸಲು ಸಹಕರಿಸಬೇಕು ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಹೇಳಿದರು.
ಗದಗ ಜಿಪಂ ಸಭಾಂಗಣದಲ್ಲಿಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಾದ್ಯಂತ ಕೋವಿಡ್-19 ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳ ಒಮ್ಮತದ ಅಭಿಪ್ರಾಯದ ಮೇರೆಗೆ ಈ ಕ್ರಮ ಕೈಗೊಳ್ಳಲಾಗುತ್ತಿದೆ. .ಸೋಂಕಿನಿಂದ ಜೀವಹಾನಿ ತಡೆಯಲು ಕಠಿಣ ಕ್ರಮ ಅನಿವಾರ್ಯವಾಗಿದೆ. ಇದಕ್ಕೆ ಸಾರ್ವಜನಿಕರು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಜಿಲ್ಲೆಯಲ್ಲಿ ಸೋಂಕು ಸಂಪೂರ್ಣ ನಿಯಂತ್ರಣ ಮಾಡುವ ಅಗತ್ಯವಿದ್ದು, ಕಠಿಣ ಮಾರ್ಗಸೂಚಿಗಳನ್ನು ಸಾರ್ವಜನಿಕರು ಪಾಲಿಸಬೇಕು. ಈ ಕೆಳಗಿನಂತೆ ಕೆಲವು ಅಗತ್ಯ ಸೇವೆಗಳಿಳಿಗೆ ಅವಕಾಶ ನೀಡಿ, ಇನ್ನುಳಿದಂತೆ ನಿರ್ಬಂಧಿಸಲಾಗಿದೆ. 
*ಹೂ-ಹಣ್ಣು-ತರಕಾರಿಗಳ ವ್ಯಾಪಾರವನ್ನು ತಳ್ಳುವ ಗಾಡಿ ಅಥವಾ ಆಟೋ ರಿಕ್ಷಾಗಳ ಮೂಲಕ ಖರೀದಿದಾರರ ಮನೆಗಳ ಓಣಿಗಳಲ್ಲಿ ಕೋವಿಡ್-19 ಮುನ್ನೆಚ್ಚರಿಕೆ ಕ್ರಮವಹಿಸಿ ಮಾರಾಟ ಮಾಡಲು ಮಾತ್ರ ಅವಕಾಶ.
*ಎಲ್ಲ ದಿನಸಿ ಅಂಗಡಿಗಳ ವ್ಯಾಪಾರವನ್ನು ಮನೆಗೆ ಸರಬರಾಜು (ಹೊಂ ಡಿಲೇವರಿ) ಮುಖಾಂತರ ಮಾಡಲು ಅನುಮತಿಸಿದೆ.
* ಹಾಲಿನ ಅಂಗಡಿಗಳಿಗೆ ಬೆಳಿಗ್ಗೆ 6  ರಿಂದ ಬೆಳಿಗ್ಗೆ 8 ಗಂಟೆ ವರೆಗೆ ವ್ಯವಹರಿಸಲು ಅವಕಾಶ.
*ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಪರಿಕರಗಳು, ಯಂತ್ರೋಪಕರಣಗಳು, ಬೀಜ ಮತ್ತು ರಸಗೊಬ್ಬರ ಮಾರಾಟಕ್ಕೆ ಬೆಳಿಗ್ಗೆ 6 ಗಂಟೆಯಿಂದ ಬೆಳಿಗ್ಗೆ 10  ಗಂಟೆ ವರೆಗೆ ಅನುಮತಿ.
*ಜಿಲ್ಲೆಯ ಎಲ್ಲ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಎಲ್ಲ ರೀತಿಯ ಹೋಟೆಲ್‌ಗಳನ್ನು ಬಂದ್ ಮಾಡಬೇಕು. ವೈನ್ ಶಾಪ್, ಬಾರ್-ರೆಸ್ಟೋರೆಂಟ್‌ಗಳನ್ನು ಸಂಪೂರ್ಣ ನಿರ್ಭಂಧ.
* ಮಾಂಸದ ಅಂಗಡಿಗಳನ್ನು ತೆರೆಯಲು ಅವಕಾಶ ಇಲ್ಲ.
*ಬ್ಯಾಂಕ್ ಮತ್ತು ಅಂಚೆ ಕಚೇರಿಗಳ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಸೇರದಂತೆ   ಕನಿಷ್ಠ ಸಿಬ್ಬಂದಿಯೊಂದಿಗೆ ಸೇವೆಗಳನ್ನು ಕೈಗೊಳ್ಳಲು ಅನುಮತಿ.
*ಈ ಮೊದಲೇ ಅನುಮತಿ ಪಡೆದ ಮದುವೆ ಕಾರ್ಯಕ್ರಮಕ್ಕೆ ಅವಕಾಶ.
*ಈ ಅವಧಿಯಲ್ಲಿ ಕೋವಿಡ್ ಮಾರ್ಗಸೂಚಿಯನ್ವಯ 05 ಜನಕ್ಕೆ ಮೀರದಂತೆ ಅಂತ್ಯ ಸಂಸ್ಕಾರ ನಡೆಸಲು ಅನುಮತಿ ನೀಡಲಾಗಿದೆ.

ಪ್ರಮುಖ ಸುದ್ದಿ :-   ವಿಡಿಯೊಗಳು | ಶಿವಮೊಗ್ಗ ದಸರಾ ಜಂಬೂ ಸವಾರಿ ವೇಳೆ ದಿಕ್ಕಾಪಾಲಾಗಿ ಓಡಿದ ಅಂಬಾರಿ ಹೊತ್ತ ಆನೆ ; ಬೆಳ್ಳಿ ಅಂಬಾರಿ ಕೆಳಕ್ಕೆ, ವಾಹನ ಜಖಂ

ಗದಗ ಜಿಲ್ಲೆಯ ಸೊಂಕಿತರಿಗೆ ನೀಡುವ ಆಕ್ಸಿಜನ್ ಪ್ರಮಾಣ ಪೂರೈಕೆ ಸರಿಯಾಗಿ ನಡೆದಿದೆ. ಆಕ್ಸಿಜನ್ ಹಂಚಿಕೆ ಕಾರ್ಯ ಸುಗಮವಾಗಿ ಸಾಗಿದೆ. ಸಾರ್ವಜನಿಕರು ತಪ್ಪದೆ ಮಾಸ್ಕ್ ಧರಿಸುವುದರೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸಚಿವ ಸಿ.ಸಿ.ಪಾಟೀಲ ತಿಳಿಸಿದರು.
ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು, ಜಿ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಭರತ್ ಎಸ್, ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ ಎಂ. ಉಪಸ್ಥಿತರಿದ್ದರು.

1 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement