ಭಾರತದ ಮೊದಲ ಸಿಎನ್‍ಜಿ ಟ್ರ್ಯಾಕ್ಟರ್ ಬಿಡುಗಡೆ

ಇಂಧನ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ದೇಶದಲ್ಲೇ ಮೊದಲ ಬಾರಿಗೆ ಡೀಸೆಲ್ ಟ್ರ್ಯಾಕ್ಟರ್ ಅನ್ನು ಎಂಅರ್‍ಎನ್ ಸಮೂಹ ಸಂಸ್ಥೆಯು ಸಂಕುಚಿತ ನೈಸರ್ಗಿಕ ಅನಿಲ (ಸಿಎನ್‍ಜಿ) ವಾಹನವಾಗಿ ಪರಿವರ್ತಿಸುವತ್ತ ಹೆಜ್ಜೆ ಇಟ್ಟಿದೆ.
ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತದ ಮೊದಲ ಸಿಎನ್‍ಜಿ ಟ್ರ್ಯಾಕ್ಟರ್‍ಅನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಭೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹಾಗೂ ಎಂಆರ್‍ಎನ್ ಸಮೂಹ ಸಂಸ್ಥೆಯ ವ್ಯವಸ್ಥಾಪಕರ ನಿದೇರ್ಶಕರಾದ ವಿಜಯ್ ನಿರಾಣಿ ಬಿಡುಗಡೆ ಮಾಡಿದರು.
ಸಕ್ಕರೆ ಉತ್ಪಾದನೆ ಸೇರಿದಂತೆ ಹಲವು ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವಕರ್ನಾಟಕದ ಹಾಗೂ ಸಚಿವ ಮುರುಗೇಶ್ ನಿರಾಣಿ ನೇತೃತ್ವದ ಎಂಆರ್‍ಎನ್ ಸಮೂಹ ಸಂಸ್ಥೆಯೂ ಡೀಸೆಲ್ ಟ್ರ್ಯಾಕ್ಟರ್‍ಗಳನ್ನು ಸಿಎನ್‍ಜಿ ಟ್ರ್ಯಾಕ್ಟರ್‍ಗಳಾಗಿ ಪರಿವರ್ತಿಸಲು ರಾಮ್ಯಾಟ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.
ಎಂಆರ್‍ಎನ್ ಸಮೂಹದ ಭಾಗವಾಗಿರುವ ಲೀಫಿನಿಟಿ ಬಯೋ ಎನರ್ಜಿ ಪ್ರೈವೇಟ್ ಲಿಮಿಟೆಡ್ ಮೊದಲ ಹಂತದಲ್ಲಿ 500 ಡೀಸೆಲ್ ಟ್ರ್ಯಾಕ್ಟರ್‍ಗಳನ್ನು ಸಿಎನ್ಜಿ ಎಂಜಿನ್ ಟ್ರ್ಯಾಕ್ಟರ್‍ಗಳಾಗಿ ಪರಿವರ್ತಿಸುವ ಯೋಜನೆಯನ್ನು ಹಾಕಿಕೊಂಡಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement