ಲಾರೆನ್ಸ್​ ಬಿಷ್ಣೋಯ್ ಗ್ಯಾಂಗ್​​ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದ ಕೆನಡಾ

ಭಾರತ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊಲೆ, ಸುಲಿಗೆ, ಶಸ್ತ್ರಾಸ್ತ್ರ ಮತ್ತು ಮಾದಕವಸ್ತು ಕಳ್ಳಸಾಗಣೆಯಲ್ಲಿ ಭಾಗಿಯಾಗಿರುವ ಲಾರೆನ್ಸ್ ಬಿಷ್ಣೋಯ್ ಮತ್ತು ಈತನ ಕ್ರಿಮಿನಲ್ ಜಾಲವನ್ನು ಕೆನಡಾ ಸರ್ಕಾರವು ಅಧಿಕೃತವಾಗಿ ಭಯೋತ್ಪಾದಕ ಸಂಘಟನೆ ಎಂದು ಹೆಸರಿಸಿದೆ ಎಂದು ಸಾರ್ವಜನಿಕ ಸುರಕ್ಷತಾ ಸಚಿವ ಗ್ಯಾರಿ ಆನಂದಸಂಗರಿ ಸೋಮವಾರ ಘೋಷಿಸಿದ್ದಾರೆ.
ಕನ್ಸರ್ವೇಟಿವ್ ಮತ್ತು ಎನ್‌ಡಿಪಿ ರಾಜಕಾರಣಿಗಳ ಕರೆಗಳ ನಂತರ “ಬಿಷ್ಣೋಯ್ ಗ್ಯಾಂಗ್‌ನಿಂದ ನಿರ್ದಿಷ್ಟ ಸಮುದಾಯಗಳು ಭಯೋತ್ಪಾದನೆ, ಹಿಂಸೆ ಮತ್ತು ಬೆದರಿಕೆಗೆ ಗುರಿಯಾಗಿವೆ. ಈ ಕ್ರಿಮಿನಲ್ ಭಯೋತ್ಪಾದಕರ ಗುಂಪನ್ನು ಪಟ್ಟಿ ಮಾಡುವುದರಿಂದ ಈ ಗ್ಯಾಂಗ್‌ನ ಅಪರಾಧಗಳನ್ನು ಎದುರಿಸಲು ಮತ್ತು ನಿಲ್ಲಿಸಲು ನಮಗೆ ಹೆಚ್ಚು ಶಕ್ತಿಶಾಲಿ ಮತ್ತು ಪರಿಣಾಮಕಾರಿ ಸಾಧನಗಳು ಸಿಗುತ್ತವೆ” ಎಂದು ಸಾರ್ವಜನಿಕ ಸುರಕ್ಷತಾ ಸಚಿವ ಗ್ಯಾರಿ ಆನಂದಸಂಗರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಲಾರೆನ್ಸ್ ಬಿಷ್ಣೋಯ್ ಭಾರತದಲ್ಲಿ ವರ್ಷಗಳಿಂದ ಜೈಲಿನಲ್ಲಿದ್ದಾನೆ., ಆದರೂ ಈತ ಇನ್ನೂ ಅಂತರರಾಷ್ಟ್ರೀಯ ಗಡಿಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಆಯೋಜಿಸುತ್ತಿದ್ದಾನೆ ಎಂದು ವರದಿಯಾಗಿದೆ.
ಈ ಘೋಷಣೆಯಿಂದ ಕೆನಡಾದ ಅಧಿಕಾರಿಗಳಿಗೆ ಹಣ, ವಾಹನಗಳು ಮತ್ತು ಆಸ್ತಿ ಸೇರಿದಂತೆ ಕೆನಡಾದೊಳಗೆ ಬಿಷ್ಣೋಯ್ ಗ್ಯಾಂಗ್‌ಗೆ ಸಂಬಂಧಿಸಿದ ಯಾವುದೇ ಸ್ವತ್ತುಗಳನ್ನು ಸ್ಥಗಿತಗೊಳಿಸಲು ಅಥವಾ ವಶಪಡಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇದು ಕಾನೂನು ಜಾರಿ ಸಂಸ್ಥೆಗಳಿಗೆ ವಿವಿಧ ಅಪರಾಧಗಳಿಗೆ, ವಿಶೇಷವಾಗಿ ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ಒದಗಿಸುವುದಕ್ಕೆ ಸಂಬಂಧಿಸಿದ ಅಪರಾಧಗಳಿಗೆ ಗ್ಯಾಂಗ್ ಸದಸ್ಯರನ್ನು ವಿಚಾರಣೆಗೆ ಒಳಪಡಿಸಲು ಹೆಚ್ಚಿನ ಅಧಿಕಾರವನ್ನು ನೀಡುತ್ತದೆ.

ಪ್ರಮುಖ ಸುದ್ದಿ :-   ಟಿಎಂಸಿ ಇಬ್ಭಾಗ ; ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಉಚ್ಚಾಟಿತ ಶಾಸಕ ರಿತಬ್ರತ ಬೆಂಬಲಿಸಿ ಸ್ಪೀಕರ್‌ಗೆ 58 ಶಾಸಕರ ಹಕ್ಕು ಸಲ್ಲಿಕೆ !

ಕೆನಡಾದ ಕಾನೂನಿನ ಪ್ರಕಾರ, ಪಟ್ಟಿ ಮಾಡಲಾದ ಭಯೋತ್ಪಾದಕ ಗುಂಪಿಗೆ ಆಸ್ತಿ ಅಥವಾ ಆರ್ಥಿಕ ಬೆಂಬಲವನ್ನು ಒದಗಿಸುವುದು ಅಥವಾ ವ್ಯವಹರಿಸುವುದು ಕ್ರಿಮಿನಲ್ ಅಪರಾಧವಾಗಿದೆ.
“ಬಿಷ್ಣೋಯ್ ಗ್ಯಾಂಗ್ ಪ್ರಾಥಮಿಕವಾಗಿ ಭಾರತದಿಂದ ಹೊರಗೆ ಕಾರ್ಯನಿರ್ವಹಿಸುವ ಒಂದು ಅಂತಾರಾಷ್ಟ್ರೀಯ ಅಪರಾಧ ಸಂಘಟನೆಯಾಗಿದೆ. ಈ ಗ್ಯಾಂಗ್‌ ಕೆನಡಾದಲ್ಲಿ ಇದೆ. ಮತ್ತು ಗಮನಾರ್ಹ ವಲಸೆ ಸಮುದಾಯಗಳನ್ನು ಹೊಂದಿರುವ ಪ್ರದೇಶಗಳಲ್ಲಿ ಸಕ್ರಿಯವಾಗಿದೆ. ಬಿಷ್ಣೋಯ್ ಗ್ಯಾಂಗ್ ಕೊಲೆ, ಗುಂಡಿನ ದಾಳಿ ಮತ್ತು ಬೆಂಕಿ ಹಚ್ಚುವಿಕೆಯಲ್ಲಿ ತೊಡಗಿದೆ ಮತ್ತು ಸುಲಿಗೆ ಮತ್ತು ಬೆದರಿಕೆಯ ಮೂಲಕ ಭಯೋತ್ಪಾದನೆಯನ್ನು ಸೃಷ್ಟಿಸುತ್ತದೆ,” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement