ಇತ್ತೀಚಿಗೆ ಕಾಡುಮೃಗಗಳು ಜನವಸತಿ ಪ್ರದೇಶಗಳಿಗೆ ಬರುತ್ತಿವೆ. ಅಪಾಯಕಾರಿ ವನ್ಯಜೀವಿಗಳು ಕೆಲವೊಮ್ಮೆ ಜನರಲ್ಲಿ ಆತಂಕವನ್ನೂ ಉಂಟು ಮಾಡುತ್ತವೆ. ಇಂಥದ್ದೇ ಘಟನೆಯ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮೀರತ್‌ನಲ್ಲಿ ಜನವಸತಿ ಬೀದಿಗಳಲ್ಲಿ ಚಿರತೆಯೊಂದು ಸುತ್ತು ಹಾಕಿದೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಮೀರತ್‌ನ ಪಲ್ಲವಪುರಂ ಪ್ರದೇಶದ ಮನೆಯೊಂದರ ಬಳಿ ಶುಕ್ರವಾರ ಬೆಳಗ್ಗೆ ಚಿರತೆಯೊಂದು ಕಾಣಿಸಿಕೊಂಡಿತ್ತು. ಚಿರತೆ ಕಂಡ ಕೂಡಲೇ ಸಹಜವಾಗಿ ಜನರು ಗಾಬರಿಗೊಂಡಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಜನರಿಗೆ ಮನೆಯೊಳಗಿರುವಂತೆ ಸೂಚನೆ ನೀಡಲಾಯಿತು ಹಾಗೂ. ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆಯನ್ನೂ ಆರಂಭಿಸಲಾಯಿತು.
ಅರಣ್ಯ ಇಲಾಖೆ ಈ ಚಿರತೆಯನ್ನು ಸೆರೆ ಹಿಡಿಯಲು ಪರದಾಡಬೇಕಾಯಿತು, ಚಿರತೆ ಜನನಿಬಿಡ ಬೀದಿಯಲ್ಲಿ ಒಂದೆಡೆ ನಿಲ್ಲುತ್ತಿರಲಿಲ್ಲ. ಆದರೆ ಹರಸಾಹಸಪಟ್ಟು ಅರಣ್ಯ ಇಲಾಖೆ ಸುಮಾರು ಎಂಟು ಗಂಟೆಗಳ ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯಿತು. ನಂತರ ಚಿರತೆಯನ್ನು ಕಾಡಿಗೆ ಕೊಂಡೊಯ್ದು ಬಿಡಲಾಯ್ತು. ಕೆಲವರು ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಅದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ನಿಮ್ಮ ಕಾಮೆಂಟ್ ಬರೆಯಿರಿ