ಸೈನ್ಯ ಸೇರಲು ಮಧ್ಯರಾತ್ರಿ ಓಡುವ 19 ವರ್ಷದ ಹುಡುಗನ ವೀಡಿಯೊ ವೈರಲ್ ಆದ ನಂತರ ಸಹಾಯಕ್ಕೆ ಮುಂದೆ ಬಂದ ನಿವೃತ್ತ ಲೆಫ್ಟಿನೆಂಟ್‌ ಜನರಲ್

ನವದೆಹಲಿ: ಸೈನ್ಯಕ್ಕೆ ಸೇರುವ ಸಲುವಾಗಿ ಮಧ್ಯ ರಾತ್ರಿ ಪ್ರತಿದಿನ ತನ್ನ ಕೆಲಸ ಶಿಫ್ಟ್‌ ಮುಗಿಸಿಕೊಂಡು ನೋಯ್ಡಾದ ರಸ್ತೆಯಲ್ಲಿ ಹತ್ತು ಕಿಮೀ ಓಡುವ ಉತ್ತರಾಖಂಡದ 19 ವರ್ಷದ ಹದಿಹರೆಯದ ಹುಡುಗನ ಸ್ಫೂರ್ತಿದಾಯಕ ವೀಡಿಯೊ ಸೋಮವಾರ, ಮಾರ್ಚ್ 21ರಂದು ಇಡೀ ದೇಶವು ಸಾಮಾಜಿಕ ಮಾಧ್ಯಮದಲ್ಲಿ ಕಾಳ್ಗಿಚ್ಚಿನಂತೆ ಹರಡಿ ಲಕ್ಷಾಂತರ ಜನರನ್ನು ತಲುಪಿದೆ. ನಿನ್ನೆಯವರೆಗೆ, ಉತ್ತರಾಖಂಡದ ಅಲ್ಮೋರಾದ ಹುಡುಗ ಪ್ರದೀಪ್ ಮೆಹ್ರಾ ನಿನ್ನೆವರೆಗೆ ಯಾರಿಗೂ ತಿಳಿದಿರಲಿಲ್ಲ, ಆದರೆ ಈಗ ರಾತ್ರೋರಾತ್ರಿ ಇಂಟರ್ನೆಟ್ ಸೆನ್ಸೇಶನ್ ಆಗಿದ್ದಾರೆ ಮತ್ತು ತನ್ನ ಧೈರ್ಯ ಮತ್ತು ದೃಢ ನಿರ್ಣಯದಿಂದ ಗಮನ ಸೆಳೆದಿದ್ದಾರೆ.
ಲೆಫ್ಟಿನೆಂಟ್ ಜನರಲ್ ಸತೀಶ್ ದುವಾ (ನಿವೃತ್ತ) ಅವರು ಪ್ರದೀಪ ಮೆಹ್ರಾ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ ಮತ್ತು ಹುಡುಗ ಪ್ರದೀಪ ಮೆಹ್ರಾಗೆ ಸೈನ್ಯ ಸೇರಲು ಸಹಾಯ ಮಾಡಲು ಮುಂದಾಗಿದ್ದಾರೆ.

ಪ್ರಶಸ್ತಿ ವಿಜೇತ ಚಿತ್ರನಿರ್ಮಾಪಕ ವಿನೋದ್ ಕಪ್ರಿ ಅವರು ಹುಡುಗನೊಂದಿಗಿನ ಸಂಭಾಷಣೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಮೆಹ್ರಾ ಅವರು ನೋಯ್ಡಾದ ಸೆಕ್ಟರ್ 16 ರಲ್ಲಿನ ತನ್ನ ಕೆಲಸದ ಸ್ಥಳದಿಂದ ಬರೋಲಾದಲ್ಲಿರುವ ಅವರ ಮನೆ ವರೆಗೆ 10 ಕಿ.ಮೀ ದೂರವನ್ನು ಪ್ರತಿದಿನ ಮಧ್ಯರಾತ್ರಿ ಅವರು ಓಡಿಯೇ ಕ್ರಮಿಸುತ್ತಾರೆ. ವಿನೋದ್ ಕಪ್ರಿ ಜೊತೆ ಸಂಭಾಷಣೆಯ ಸಮಯದಲ್ಲಿ, ಪ್ರದೀಪ ಮೆಕ್‌ಡೊನಾಲ್ಡ್ಸ್ ಸೆಕ್ಟರ್ 16 ರಲ್ಲಿ ತನ್ನ ಕೆಲಸದ ಶಿಫ್ಟ್‌ನ ನಂತರ ಕೆಲಸದ ಸ್ಥಳದಿಂದ ಮನೆಗೆ ಓಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ವಿನೋದ್ ಕಪ್ರಿ ಅವರಿಗೆ ಹಲವಾರು ಬಾರಿ ತನ್ನ ಮನೆಗೆ ಲಿಫ್ಟ್ ನೀಡುವುದಾಗಿ ಹೇಳಿದ್ದರೂ, ಅವರು ನಿರಾಕರಿಸಿ ಹಗಲಿನಲ್ಲಿ ಓಡಲು ಸಮಯ ಸಿಗದ ಕಾರಣ ತಾನು ರಾತ್ರಿ ತನ್ನ ಕೆಸಲದ ಸ್ಥಳದಿಂದ ಮನೆಗೆ ವರೆಗೆ ಓಡಲು ಆದ್ಯತೆ ನೀಡುವುದಾಗಿ ತಿಳಿಸಿದ್ದಾರೆ ಹಾಗೂ ಓಡುತ್ತಿರುವುದಕ್ಕೆ ಕಾರಣ ಕೇಳಿದಾಗ, ‘ಸೇನೆಗೆ ಸೇರಲು’ ಹೀಗೆ ಮಾಡುತ್ತಿರುವುದಾಗಿ ಪ್ರದೀಪ್ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಖರ್ಗೆ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತಪಾಸಣೆ: ಚುನಾವಣಾಧಿಕಾರಿಗಳ ವಿರುದ್ಧ ಕಾಂಗ್ರೆಸ್‌ ಕಿಡಿ

ಈ ವೀಡಿಯೋ ಲೆಫ್ಟಿನೆಂಟ್ ಜನರಲ್ ಸತೀಶ್ ದುವಾ ಅವರ ಗಮನ ಸೆಳೆಯಿತು ಮತ್ತು ಅವರು ಸಹಾಯ ಮಾಡಲು ಮುಂದಾಗಿದ್ದಾರೆ. “ಅವರ ಜೋಶ್ ಶ್ಲಾಘನೀಯವಾಗಿದೆ ಮತ್ತು ಅವರ ಅರ್ಹತೆಯ ಆಧಾರದ ಮೇಲೆ ನೇಮಕಾತಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಸಹಾಯ ಮಾಡಲು, ನಾನು ಕುಮಾನ್ ರೆಜಿಮೆಂಟ್‌ನ ಕರ್ನಲ್, ಈಸ್ಟರ್ನ್ ಆರ್ಮಿ ಕಮಾಂಡರ್ ಲೆಫ್ಟಿನೆಂಟ್ ಜನರಲ್ ರಾಣಾ ಕಲಿತಾ ಅವರೊಂದಿಗೆ ಮಾತನಾಡಿದ್ದೇನೆ. ಅವರು ತನ್ನ ರೆಜಿಮೆಂಟ್‌ಗೆ ನೇಮಕಾತಿಗಾಗಿ ಹುಡುಗನಿಗೆ ತರಬೇತಿ ನೀಡಲು ಅಗತ್ಯ ನೆರವು ನೀಡಿವುದಾಗಿ ತಿಳಿಸಿದ್ದಾರೆ. ಜೈ ಹಿಂದ್ ಎಂದು ನಿವೃತ್ತ ಜನರಲ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಈ ಯುವಕನಿಗೆ ಇಂಟರ್ನೆಟ್ ಸಂಪೂರ್ಣ ವಿಸ್ಮಯವಾಗಿದೆ. ಪ್ರದೀಪ್ ಅವರ ಕಥೆಯನ್ನು ಹೊರತಂದಿದ್ದಕ್ಕಾಗಿ ಅವರು ಅವರನ್ನು ಮತ್ತು ಚಲನಚಿತ್ರ ನಿರ್ಮಾಪಕರನ್ನು ಶ್ಲಾಘಿಸಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ...| ವಂದೇ ಭಾರತ ರೈಲಿನಡಿ ಸಿಲುಕಿದ ಹಸು ; ಪ್ರಾಣಾಪಾಯದಿಂದ ಪಾರಾಗಿದ್ದೇ ಒಂದು ವಿಸ್ಮಯ..

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement